ಅಪ್ಪ

ಅಪ್ಪ ಆಲದ ಮರ
ತಂಪಾಗಿ ಹರಡಿಹುದು
ಉಸಿರು ನೀಡಿಹುದು
ಹೆಸರು ಮಾಡಿಹುದು||

ಅಪ್ಪ ಆಕಾಶ
ನೆರಳು ನೀಡಿಹುದು
ಮಳೆಯ ಸುರಿಸುವದು
ಇಳೆಯ ತಣಿಸುವದು||

ಅಪ್ಪ ಅದ್ಭುತ ಶಕ್ತಿ
ಯುಕ್ತಿ ನೀಡುವನು
ಭಕ್ತಿ ಕಲಿಸುವನು
ಮುಕ್ತಿಯೆಡೆ ನಡೆಸುವನು||

ಅಪ್ಪ ಸೂರ್ಯ
ಹಗಲು ರಾತ್ರಿ ಎನ್ನದೆ
ದುಡಿದು ದಣಿದು
ನೆಮ್ಮದಿಯ ನೀಡುವನು||

ಅಪ್ಪ ನಂದಾದೀಪ
ಥಳಕು ತೋರದೆ
ಹುಳುಕು ಸರಿಸಿ
ಬೆಳಕು ನೀಡುವನು ||

ಅಪ್ಪ ಚಂದಿರ
ಅಜ್ಞಾನದ ಕತ್ತಲು ಆವರಿಸಿದಾಗ
ಸುಜ್ಞಾನದ ದೀವಿಗೆ ಹಿಡಿವ
ಭರವಸೆಯ ಮಂದಾರ||

ಅಪ್ಪ ಮುಗಿಲು
ಬದುಕ ಬಂಡಿಗೆ
ಹೆಗಲುಕೊಟ್ಟವ
ದೇವನಿಗಿಂತ ಮಿಗಿಲು||

-ಸವಿತಾ ಮಾಟೂರು ಇಳಕಲ್

Don`t copy text!