ಬೀದಿ ಬದಿ ವ್ಯಾಪಾರಸ್ಥರು ಹಾಗೂ ಆಟೋ ಚಾಲಕರು, ಪತ್ರಕರ್ತರ ಸಹಯೋಗದೊಂದಿಗೆ ಏಪ್ರಿಲ್ 14ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ..
e-ಸುದ್ದಿ ಇಳಕಲ್
ಇಳಕಲ್ ನಗರದಲ್ಲಿ ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವವನ್ನು
ಬೀದಿಬದಿ ವ್ಯಾಪಾರಸ್ಥರ ಸಂಘಟನೆ, ಆಟೋ ಚಾಲಕರ ಸಂಘ, ಪತ್ರಿಕಾ ಹಾಗೂ ಮಾಧ್ಯಮ ಬಳಗದ ಸಹಯೋಗದೊಂದಿಗೆ ಸರಳವಾಗಿ ಆಚರಿಸಲಾಗುವುದು ಎಂದು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿದರು.
ಏಪ್ರಿಲ್ 14ರಂದು ಸಾಯಂಕಾಲ 5:30 ಗಂಟೆಯಿಂದ ಬಸ್ ನಿಲ್ದಾಣದಿಂದ ಎಸ್ ಆರ್ ಕಂಠಿ ವೃತ್ತದ ವರೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಯನ್ನು ಸರಳವಾಗಿ ಆಚರಿಸಲಾಗುವುದು.
ಹೀಗಾಗಿ ಎಲ್ಲಾ ಸಮಾಜದ ಗುರುಹಿರಿಯರು ಆಗಮಿಸಿ ಈ ಜಯಂತೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ವಿನಂತಿಸಿಕೊಂಡರು.
ಈ ಪತ್ರಿಕಾಗೋಷ್ಠಿಯಲ್ಲಿ ಬೀದಿಬದಿ ವ್ಯಾಪಾರಸ್ಥರ ಪದಾಧಿಕಾರಿಗಳು, ಪತ್ರಕರ್ತರು,ಆಟೋಚಾಲಕರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ