ನನ್ನೆದೆಯ ಗೂಡು
ನನ್ನೆದೆಯ ಗೂಡಲಿ
ಸಾವಿರದ ಕನಸುಗಳು
ಸಾಗರದ ಆಳದಲಿ
ಗರಿಗೆದರಿ ಬೆಳೆಯಲಿ
ಪಕ್ಷಿಗಳಂತೆ ಹಾರಾಡಿ
ಶರಣ ತತ್ವ ಬಿತ್ತುವಾಶೆ
ಕಾಗೆ ಕೋಳಿಯಂತೆ
ದಾಸೋಹ ಉಣಿಸುವಾಸೆ
ವಚನ ತತ್ವ ದಲಿ
ಬದುಕು ಕಟ್ಟುವಾಸೆ
ಕಾಯಕ ದಾಸೋಹ
ಕಣಕಣದಲ್ಲಿ ತುಂಬುವಾಸೆ
ನಿಷ್ಠುರತೆಯಲಿ ಅಂಬಿಗ
ಚೌಡಯ್ಯನಾಗುವ ಆಶೆ
ಸತ್ಯ ನಿಷ್ಟೆಯಲಿ ಸತ್ಯಕ್ಕನಾಗುವಾಶೆ
ನಿಸರ್ಗಪ್ರೇಮಿಯಲಿ ಅಕ್ಕನಾಗುವಾಸೆ
ನನ್ನೆದೆಯ ಗೂಡಲಿ
ಜಾತಿಪಾತಿಗಳಿಲ್ಲ
ಮೇಲು ಕೀಳೆಂಬ
ಭೇದಭಾವದ ಹೊದಿಕೆಗಳಿಲ್ಲ
ಬಾಳುವೆ ಜಗದಲಿ
ಶರಣ ತತ್ವ ದೀವಿಗೆಯಲಿ
ಅರಿವಿನ ಅನುಭಾವದಲಿ
ನನ್ನೆದೆಯ ಪುಟ್ಟ ಗೂಡಿನಲಿ