ಜೆ ಸಿ ಐ ಸಿಲ್ಕ್ ಸಿಟಿ ವತಿಯಿಂದ ಪೌರಕಾರ್ಮಿಕರಿಗೆ ಸತ್ಕಾರ..
e-ಸುದ್ದಿ ಇಳಕಲ್
ಇಳಕಲ್ ನಗರದ ನಗರಸಭೆ ಆವರಣದಲ್ಲಿ ಜೆ ಸಿ ಐ ಇಲಕಲ್ ಸಿಲ್ಕ್ ಸಿಟಿ ವತಿಯಿಂದ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ಹಿರಿಯ ಪೌರಕಾರ್ಮಿಕರನ್ನು ಸತ್ಕರಿಸಿದರು.
ನಗರ ಅಂದವಾಗಿ ಸ್ವಚ್ಛವಾಗಿರಲು ಕಾರ್ಣಿಕರ್ತರೆ ಪೌರಕಾರ್ಮಿಕರು ಹೀಗಾಗಿ ಇಂತಹ ಶ್ರಮಜೀವಿಗಳನ್ನ ಸತ್ಕರಿಸುತ್ತಿರುವುದು ಜೆಸಿಐಗೆ ಒಲಿದು ಬಂದ ಭಾಗ್ಯ ಎಂದು ಜೆಸಿಐ ಸಿಲ್ಕ್ ಸಿಟಿಯ ಇಲ್ಕಲ್ ನ ರಶ್ಮಿ ಗವಿಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತ ರಾಜು ಬಣಕಾರ್, ಜೆಸಿಐ ಸಿಲ್ಕ್ ಸಿಟಿಯ ಎಲ್ಲ ಪದಾಧಿಕಾರಿಗಳು
ಇಲ್ಕಲ್ ನಗರಸಭೆಯ ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು ಉಪಸ್ಥಿತರಿದ್ದರು.
ವರದಿಗಾರರು; ಶರಣಗೌಡ ಕಂದಕೂರ