ಹಿರೇ ಕೊಡಗಲಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಅಭಿಯಾನ ..

ಹಿರೇ ಕೊಡಗಲಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಅಭಿಯಾನ …

e-ಸುದ್ದಿ ಇಳಕಲ್

ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳ ಹೊಳೆತ್ತುವ ಕಾಮಗಾರಿ ನಡೆಯುತ್ತಿದ್ದು, ನರೇಗಾ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಮಾನ್ಯ ಸಹಾಯಕ ನಿರ್ದೇಶಕರು, ಮತದಾನದ ಮಹತ್ವದ ಬಗ್ಗೆ ನರೇಗಾ ಕೂಲಿಕಾರರಿಗೆ ಸವಿವರವಾಗಿ ತಿಳಿಸಿ, ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.
ಇನ್ನು ಕೂಲಿ ಮೊತ್ತ ಹೆಚ್ಚಳ ಜಲ ಸಂಜೀವಿನಿ ಯೋಜನೆ ಕುರಿತು ಮಾಹಿತಿ ನೀಡಿದರು,
ಬಳಿಕ ನರೇಗಾ ಕೂಲಿಕಾರರಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಮಾನ್ಯ ಸಹಾಯಕ ನಿರ್ದೇಶಕರು ಅವರು ಭೋಧಿಸಿದರು.
ಈ ಸಂದರ್ಭದಲ್ಲಿ IEC ಸಂಯೋಜಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಇಂಜಿನಿಯರ್ ಅವರು, GKM ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವರದಿಗಾರರು; ಶರಣಗೌಡ ಕಂದಕೂರ

Don`t copy text!