ಗಝಲ್ 

ಗಝಲ್ 

ಕೂಗು ಕೇಳಿಸದಿರೆ ಒಲವ ಸೇತುವೆ ಕಟ್ಟಲಾದೀತೆ ಹೇಳು
ಬಾಗಿ ನಡೆಯದಿರೆ ಜೀವನದ ಬಂಡಿ ಮೆಟ್ಟಲಾದೀತೆ ಹೇಳು

ಪರಸ್ಪರ ಪ್ರೀತಿ ವಿಶ್ವಾಸ ಇದ್ದಾಗ ಮಾತ್ರ ಒಂದಾಗಿರಲು ಸಾದ್ಯವಲ್ಲವೇ
ಅಪಸ್ವರದ ತಂತಿಯಿಂದ ಸುಗಮ ಸಂಗೀತ ಹೃದಯ ತಟ್ಟಲಾದೀತೆ ಹೇಳು

ಗುಳಿಕೆನ್ನೆ ಕಂಡು ಮುತ್ತಿಡಲು ಧಾವಿಸಿ ಬರುವೆನೆಂದೆಯಲ್ಲ
ಮಳೆಬಿಲ್ಲ ಬಣ್ಣದ ಚಂದ್ರ ಚಕೋರಿಯ ಮುಟ್ಟಲಾದೀತೆ ಹೇಳು

ವೇದಿಕೆ ಮೇಲೆ ಕಣ್ಣೋಟದಿ ಸೆಳೆದು ಅಳೆದೆಯಲ್ಲ ಅಂದು
ಮುದ್ರಿಕೆ ಉಂಗುರ ನೀಡದೆ ಅನುರಾಗದ ಒಸಗೆ ಒಟ್ಟಲಾದೀತೆ.ಹೇಳು

ಕನಸುಗಳ ಪಸೆ ಕೈಯಾರೆ ಆರಿಸಿ ಅಟ್ಟಹಾಸ ತೋರಿದ್ದು ಜಯವೆ
ಮನಸುಗಳ ಮಧುರತೆ ತಿಳಿಯದ ಒರಟನಿಂದ ಕುಟ್ಟಲಾದೀತೆ ಹೇಳು

ಜಯಶ್ರೀ ಭ ಭಂಡಾರಿ.
ಬಾದಾಮಿ

Don`t copy text!