ಗೋನಾಳ ಎಸ್ ಟಿ ಗ್ರಾಮದಲ್ಲಿ ಬಣವೆಗೆ ಬೆಂಕಿ, ಅಪಾರ ಹಾನಿ…
e-ಸುದ್ದಿ ಇಳಕಲ್
ಇಳಕಲ್ ತಾಲೂಕಿನ ಗೋನಾಳ ಎಸ್ ಟಿ ಗ್ರಾಮದಲ್ಲಿ ಮಲ್ಲಪ್ಪ ಕುರಿ ಎಂಬುವವರ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟ ವಾದ ಘಟನೆ ಗ್ರಾಮದಲ್ಲಿ ನಡೆದಿದೆ.
ಮೂಲತಃ ಕೃಷಿಕರಾದ ಮಲ್ಲಪ್ಪ ಕುರಿಯವರು ದನಕರುಗಳ ಸಲುವಾಗಿ ಬಣವೆ ಒಟ್ಟಿದ್ದರು. ಈ ಆಕಸ್ಮಿಕ ಬೆಂಕಿ ಅವಘಡಕ್ಕೆ ಎರಡು ಬಣವೆಗಳು ಸುಟ್ಟು ಕರಕಲಾಗಿವೆ. ಇದರಿಂದ ನಮ್ಮ ದನ ಕರುಗಳಿಗೆ ಮೇವಿಲ್ಲದಂತಾಗಿದೆ ಎಂದರು.
ಈ ಬೆಂಕಿ ಹತ್ತಿದ ಸುದ್ದಿ ತಿಳಿದ ಗ್ರಾಮಸ್ಥರು ಪ್ರಾಥಮಿಕ ಎಂಬಂತೆ ಅಗ್ನಿಶಾಮಕ ವಾಹನ ಬರುವ ಮುಂಚೆ ಬೆಂಕಿನಂದಿಸಲು ಪ್ರಯತ್ನಿಸಿದರು ಯಾವುದೇ ಪ್ರಯತ್ನ ವಾಗಿಲ್ಲ….
ವರದಿಗಾರರು; ಶರಣಗೌಡ ಕಂದಕೂರ