ಹಿರೇ ಸಿಂಗನಗುತ್ತಿ ಗ್ರಾಮ ಪಂಚಾಯತಿಗೆ ಬೇಲಿ ಹಚ್ಚಿದ ಗ್ರಾಮಸ್ಥರು….
e-ಸುದ್ದಿ ಇಳಕಲ್
ಇಳಕಲ್ ತಾಲೂಕಿನ ಹಿರೇ ಸಿಂಗನಗುತ್ತಿ ಗ್ರಾಮದಲ್ಲಿ ಕೃಷ್ಣಾಪೂರ ರಸ್ತೆ ಕಡೆ ನೀರು ಇರದೇ ಜನರು ಪರದಾಡುತ್ತಿದ್ದೇವೆ ಹೀಗಾಗಿ ಗ್ರಾಮ ಪಂಚಾಯಿತಿ ಮುಂದೆ ಬೇಲಿ ಹಚ್ಚಿ ಪ್ರತಿಭಟನೆ ನಡೆಸಿದ್ದೇವೆ ಎಂದರು.
ಈ ವಿಷಯದ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಲ್ಲಿಗೆ ಹೊಸದಾದ ಪೈಪ್ ಲೈನ್ ಮಾಡಬೇಕು, ಅಲ್ಲದೆ ಜೆಜೆಮ್ ಮೂಲಕ ಪೈಪ್ ಲೈನ್ ವ್ಯವಸ್ಥೆ ಅಲ್ಲಿಗೆ ಬರುತ್ತದೆ, ಹೀಗಾಗಿ ಅಲ್ಲಿಯವರೆಗೂ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದರು.
ವರದಿಗಾರರು: ಶರಣಗೌಡ ಕಂದಕೂರ