(ವಾರದ ವಿಶೇಷ ಪ್ರವಾಸ ಕಥನ)
ಕಿತ್ತೂರಿನ ರಾಣಿ ಚೆನ್ನಮ್ಮ…..
ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಪ್ರಥಮ ಮಹಿಳೆ ಚೆನ್ನಮ್ಮ.ಥ್ಯಾಕರೇಯ ರುಂಡ ಚಂಡಾಡಿದ ಕಿತ್ತೂರಿನ ಕತ್ತಿ. ಚೆನ್ನಮ್ಮ ಹುಟ್ಟಿದ್ದು 23 ಅಕ್ಟೋಬರ 1778 ರಲ್ಲಿ ಬೆಳಗಾವಿಯ ಉತ್ತರಕ್ಕೆ ಸುಮಾರು 6 km ಇರುವ ಕಾಕತಿ
ಅವಳ ಹುಟ್ಟೂರು. ತಂದೆ ಕಾಕತಿ ದೇಸಾಯಿ ಧೂಳಪ್ಪ ಗೌಡರು.ಚೆನ್ನಮ್ಮ ಚಿಕ್ಕ ವ ಯಸ್ಸಿನಲ್ಲಿಯೇ ಕುದುರೆ ಸವಾರಿ ಹಾಗೂ ಬಿಲ್ಲು ವಿದ್ಯೆ ಕರಗತ ಮಾಡಿಕೊಂಡಿದ್ದಳು. ಕಿತ್ತೂರಿನ ಮಲ್ಲಸರ್ಜನ ಜೊತೆ ಇವಳ ವಿವಾಹವಾಗುತ್ತದೆ.ಮಲ್ಲಸರ್ಜನಿಗೆ ಇಬ್ಬರು ಹೆಂಡಂದಿರು ರುದ್ರವ್ವ. ಹಾಗೂ ಚೆನ್ನಮ್ಮ.ಚೆನ್ನಮ್ಮಳಿಗೆ ಮಕ್ಕಳು ಇರಲಿಲ್ಲ. ಮಲ್ಲಸರ್ಜನ ನಿಧನದ ನಂತರ ರುದ್ರವ್ವಳ ಮಗ ಶಿವಲಿಂಗ ಪಟ್ಟಕ್ಜೆ ಬಂದ.
ಮಕ್ಕಳಿಲ್ಲದ ರುದ್ರ ಸರ್ಜ ಅನಾರೋಗ್ಯದಿಂದ ಮರಣ ಹೊಂದಿದ. ಇದಕ್ಕೆ ಮೊದಲು ಮಾಸ್ತಮರಡಿ ಬಾಳಪ್ಪ ಗೌಡರ ಮಗ ಶಿವಲಿoಗ ಎಂಬ ಬಾಲಕನ ನ್ನು ದತ್ತು ತೆಗೆದುಕೊಳ್ಳುತ್ತಾನೆ. ಆದರೆ ಥ್ಯಾಕರೇ ದತ್ತು ಪುತ್ರನನ್ನು ತಿರಸ್ಕರಿಸುತ್ತಾನೆ.ಥ್ಯಾಕರೆ ಕಿತ್ತೂರಿಗೆ ಬಂದು ಕಂಪನಿಯಿಂದ ಮುಂದಿನ ಆದೇಶ ಬರುವವರೆಗೂ ಮಲ್ಲಪ್ಪಶೆಟ್ಟಿ ಹಾಗೂ ಹಾವೇರಿ ವೆಂಕಟರಾವ ಅವರನ್ನು ಸಂಸ್ಥೆಯ ವ್ಯವಹಾರ ನೋಡಿಕೊಳ್ಳಲು ನೇಮಕ ಮಾಡಿ ಹಾಗೂ ಕಿತ್ತೂರಿನ ಭoಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ.ಆದರೆ ಇದನ್ನು ಪ್ರತಿಭಟಿಸಿದವಳು ಚೆನ್ನಮ್ಮ.ಬ್ರಿಟಿಷರ ವಿರುದ್ಧ ಹೊರಾಡಲು ಸಿದ್ಧತೆ ನಡೆಸಿದಳು.
ಅರಮನೆಯ ಕಾರ್ಯಭಾರಿಗಳಾದ ಮಲ್ಲಪ್ಪ ಶೆಟ್ಟಿ, ವೆಂಕಟ ರಾಯ ನಿಂದ ಈ ಸುದ್ದಿ ಥ್ಯಾಕರೇಗೆ ತಿಳಿಯಿತು.ಥ್ಯಾಕರೇ ಹಠತ್ತಾಗಿ ಕೋಟೆ ಮೇಲೇರಗಿದ.ಕಿತ್ತೂರಿನ ಯೋಧ ಮಠೋರ ಬಾಳಪ್ಪ ಥ್ಯಾಕರೇಯನ್ನು ಗುಂಡಿಟ್ಟು ಕೊಂದ.ನೂರಾರು ಬ್ರಿಟಿಷ ಸೈನಿಕರು ಸೆರೆಯಾದರು.ಚೆನ್ನಮ್ಮ ಈ ಸೆರೆಯಾಳುಗಳ ಜೊತೆ ಉದಾರವಾಗಿ ನಡೆದುಕೊಂಡಳು.ಬ್ರಿಟಿಷರ ವಿ ರುದ್ಧದ ಈ ಗೆಲುವನ್ನು ಇಂದಿಗೂ ಸಹ ಕಿತ್ತೂರ ಉತ್ಸವದ ಮೂಲಕ ಆಚರಿಸಲಾಗುತ್ತದೆ.ರಾಜ್ಯ ಸರ್ಕಾರ ಈ ಉತ್ಸವವನ್ನು ವಿಜೃಂಬಣೆಯಿಂದಾ ಆಚರಿಸುತ್ತದೆ.
ಕಿತ್ತೂರಿನಲ್ಲಿ 300ವರ್ಷಗಳ ಹಿಂದಿನ ಅರಮನೆಯನ್ನು ನೋಡಬಹುದು. ಕಾಲನ ಹೊಡೆತಕ್ಕೆ ಸಿಲುಕಿ ಅವಶೇಷ ಕಾಣಬಹುದು.
✍️ಶ್ರೀಮತಿ. ವಿದ್ಯಾ ಹುಂಡೇಕರ