ಮಾನ್ಯರೇ
ಡಾ.ಸಾವಿತ್ರಿ ಮ ಕಮಲಾಪುರ ಇವರು ಕವಯತ್ರಿ ಹಾಗೂ ಬರಹಗಾರ್ತಿ. e-ಸುದ್ದಿ ಬಳಗಕ್ಕೆ ಬಿಡುವು ಇದ್ದಾಗ ಅನೇಕ ಕವಿತೆ ಲೇಖನ ಬರೆದಿದ್ದಾರೆ. ಇನ್ನೂ ಮುಂದೆ ಪ್ರತಿದಿನ ವಿಶೇಷ ಬರಹ ಬರೆಯುವ ಮೂಲಕ e-ಸುದ್ದಿ ಓದುಗರಿಗೆ ಮತ್ತಷ್ಟು ಜ್ಞಾನದ ವಿಸ್ತಾರಕ್ಕೆ ಕಾರಣರಾಗಲಿದ್ದಾರೆ. ಓದಿ.ಅಭಿಪ್ರಾಯ ತಿಳಿಸಿ.
–ಸಂಪಾದಕ
ಬದುಕು ಭಾರವಲ್ಲ
ಈ ಭೂಮಿಯಲ್ಲಿ ವಾಸಿಸುವ ಚರಾಚರ ಜೀವಿಗಳಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ ಎಂದರೆ ಮಾನವ.
ಮಾನವನಾಗಿ ಹುಟ್ಟಿ ಬಂದಿದ್ದೆ ಹಿಂದೆ ನಾವು ಮಾಡಿದ ಒಂದು ಪುಣ್ಯದ ಕೆಲಸದಿಂದ ಎನ್ನುವ ವಿಚಾರ ಎಲ್ಲರಿಗೂ ಗೊತ್ತು.ನೋಡುವ ಆಲಿಸುವ ಆಲಿಸಿದನ್ನು ವ್ಯಕ್ತ ಪಡಿಸುವ ಗುಣ ಮನುಷ್ಯನನ್ನು ಬಿಟ್ಟು ಬೇರೆ ಯಾವ ಪ್ರಾಣಿಗಳಿಗೂ ಬರುವುದಿಲ್ಲ..
ವ್ಯಕ್ತಿ ತಾನು ಹುಟ್ಟಿದ ಮೇಲೆ ತಂದೆ ತಾಯಿ ಪರಿಸರ ಹಾಗೂ ತಾನು ಪಡೆಯುವ ಶಿಕ್ಷಣದ ಶಾಲೆ ಕಾಲೇಜು ಈ ಎಲ್ಲ ಪರಿಸರ ಆ ವ್ಯಕ್ತಿತ್ವ ವಿಕಾಸಗೊಳ್ಳಲು ಮುಖ್ಯ ಕಾರಣ.ಅಷ್ಟೇ ಅಲ್ಲದೇ ಸಂಗ ಸ್ನೇಹಿತರು ಕಾರಣವಾಗುವ ಮನುಷ್ಯನ ವಿಕಾಸದಲ್ಲಿ ಆತನ ಬೆಳವಣಿಗೆಯ ಮೇಲೆ ಆಗಾಧವಾದ ಪರಿಣಾಮ ಬೀರುತ್ತವೆ.
ಮಾನವ ಸಂಗ ಜೀವಿ ಸಮಾಜವನ್ನು ಬಿಟ್ಟು ಬದುಕಲು ಆಗುವುದಿಲ್ಲ ಬದುಕಿದರೂ ಆತನ ಬೆಳವಣಿಗೆ ಕುಂಠಿತ ಗೊಳ್ಳುತ್ತದೆ
12ನೇ ಶತಮಾನದ ಶಿವಶರಣರು ಕಾಯಕ ಕಲಿಸುವುದರ ಜೊತೆಗೆ ಹೇಗೆ ಸಮಾಜದಲ್ಲಿ ಬದುಕಬೇಕು ಎನ್ನುವುದನ್ನು ಅರಿವು ಮೂಡಿಸಿ ಹೋಗಿದ್ದಾರೆ .ಸಮಾಜದಲ್ಲಿ ನಾನು ಬದುಕುವ ಜೊತೆಗೆ ಇನ್ನೊಬ್ಬರನ್ನು ಬದುಕಿಸಬೇಕು ಎಂಬುವ ತತ್ವವನ್ನು ಅರಿವು ಮಾಡಿದವರು ಶಿವಶರಣರು ,ಸಂತರು,ದಾಸರು ತತ್ತ್ವಜ್ಞಾನಿಗಳು ಮಹಾನ್ ವ್ಯಕ್ತಿಗಳು ಮಹಾತ್ಮರು ಇವರೆಲ್ಲರೂ ಬದುಕಿನ ತತ್ವಗಳನ್ನು ನಮ್ಮ ನಮ್ಮ ಹೃದಯದಲ್ಲಿ ಬಿತ್ತಿ ಹೋಗಿದ್ದಾರೆ .ಬಿತ್ತಿಸಿಕೊಳ್ಳದವರಿಗೆ ಈ ಬದುಕು ತುಂಬಾ ಕಠಿಣ ಒಂದು ಅರೆಗಳಿಗೆಯನ್ನು ಕಳೆಯದೇ ಸುಂದರ ಬದುಕಿಗೆ ಅಂತ್ಯ ಹಾಡಿದವರು ಎಷ್ಟೋ ಜನರಿದ್ದಾರೆ .ಸುಂದರವಾಗಿ ಬಾಳಿ ಬದುಕಿ ತಮ್ಮದೇ ಆದರ್ಶ ವನ್ನು ಬಿಟ್ಟು ಹೋದವರು ನಮಗೆ ಸಿಗುವರು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಒಂದಿಲ್ಲೊಂದು ಘಟನೆಗಳು ನಡದೇ ನಡೆದಿರುತ್ತವೆ.
ಅಂತಹ ಘಟನೆಗಳು ನಮ್ಮ ಮನಸ್ಸಿಗೆ ತುಂಬಾ ನೋವಿನ ಮರೆಯಲಾಗದ ಘಟನೆಗಳನ್ನು ಮೆಲಕು ಹಾಕುತ್ತ ನಮ್ಮ ಸುಂದರ ಜೀವನದ ಸಂತೋಷ ದ ದಿನಗಳನ್ನು ದುಃಖದಲ್ಲಿ ಕಳೆಯುತ್ತೇವೆ .
ಬದುಕಿನಲ್ಲಿ ಅನೇಕ ವಿವಿಧ ತೆರನಾದ ವ್ಯಕ್ತಿಗಳಲ್ಲಿ ನಾವು ಹೊಂದಿಕೊಂಡು ಹೋಗಬೇಕಾಗುತ್ತದೆ .ಹೊಗಳುವ ತೆಗಳುವ ಗೌರವಿಸುವ ಅವಮಾನಿಸುವರ ಮಧ್ಧ ನಾವು ಬದುಕಿ ಸಾಧಿಸಿ ಜೀವನ ಸವೆಸಬೇಕಾಗುತ್ತದೆ.
ನೊಂದು ಬಳಲಿದ ಅವಮಾನಿಸಿಕೊಂಡ ವ್ಯಕ್ತಿಯ ಮನ ಯಾವಾಗಲೂ ದೇವರಿಗೆ ಹತ್ತಿರವಾದವರು. ಅವರನ್ನು ಗಂಧದಂತೆ ತೆಯ್ದು ಒರೆಗಲ್ಲಿಗೆ ಹಚ್ಚಿನೋಡುತ್ತಾನೆ .ಆಮೇಲೆ ದೇವರೇ ಅವರ ಭಕ್ತಿ ಮತ್ತು ಭಾವಕ್ಕೆ ಮೆಚ್ಚಿ ಕೆಲಸ ಕಾರ್ಯದಲ್ಲಿ ಯಶಸ್ಸು ಸಾಧಿಸುವ ಛಲವನ್ನು ಮೂಡಿಸುವನು.
ಯಾವ ವ್ಯಕ್ತಿಗೆ ತನ್ನ ಗುರಿಯನ್ನು ಮುಟ್ಟಲು ಎಷ್ಟೇ ಕಷ್ಟ ತೊಂದರೆಗಳು ಬಂದರೆ ಸಾಧಿಸುವ ತುಡಿತ ಇದ್ದೇ ಇರುತ್ತದೆ .ಸಾಧಿಸುವ
ಗುಣದವರು ಎಲ್ಲಿದ್ದರೂ ಹೇಗಿದ್ದರೂ ತಮ್ಮ ಗುರಿಯನ್ನು ಮುಟ್ಟೆ ಮುಟ್ಟುವ ದೃಢ ಸಂಕಲ್ಪ ಮಾಡಿಕೊಳ್ಳಬೇಕು.
ತಮ್ಮ ಜೀವನದ ಪರಿವಿಡಿಯನ್ನು ತಾವೇ ಬರೆದುಕೊಳ್ಳಬೇಕು.
ಅಂದರೆ ತಮ್ಮ ಸಾಧನೆ ಸಿದ್ದಿಗೆ ಅವರೇ ಕಾರಣರು .
ಉದಾ – ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವರು ಆದರೆ ಕಲಿಸಿದ್ದನ್ನು ಸುಂದರವಾಗಿ ಬರೆಯುವ ಕಲೆ ವಿದ್ಯಾರ್ಥಿಗಳದ್ದು ಆಗಿರಬೇಕು.
ಓದುವ ಸಮಯದಲ್ಲಿ ಓದಿ ಸಾಧನೆಯ ಶಿಖರವನ್ನು ಹತ್ತಬೇಕು.
ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡದೇ ಅಂದಿನ ಕೆಲಸ ವನ್ನು ಅಂದೇ ಮಾಡಿ ಮುಗಿಸುವ ಜಾಣ್ಮೆ ಇರಬೇಕು.
ಇದು ವಿದ್ಯಾರ್ಥಿಗಳಿಗೇ ಅಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಅನ್ವಯಿಸುವ ಮಾತು…….
ಮುಂದುವರೆಯುತ್ತದೆ .