‘ಬಸವ ಬೆಳಕು’
Mother of Democracy England ಆದರೆ Father of Democracy Basavanna. ಸಕಲರಿಗೆ ಲೇಸನೆ ಬಯಸುವ, ಮಾನವ ಜಾತಿಯೊಂದೆ ಎಲ್ಲರೂ ಸರಿ ಸಮಾನರು ಎಂಬ ಸಾಮಾಜಿಕ ಸಮತೆಯ ಅರಿವನ್ನು ಬಿತ್ತಿದ ಬಸವ.
ದಯೆ ಇಲ್ಲದ ಧರ್ಮ ಅದಾವುದಯ್ಯ, ಲೋಕದ ಡೊಂಕು ನೀವೇಕೆ ತಿದ್ದುವಿರಿ, ಛಲಬೇಕು ಶರಣಂಗೆ, ಕಳಬೇಡ ಕೊಲಬೇಡ, ನುಡಿದರೆ ಮುತ್ತಿನ ಹಾರದಂತಿರಬೇಕು, ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ, ಕಲ್ಲನಾಗರ ಕಂಡರೆ ಹಾಲನೆರೆಯುವುರು, ಮರವು ಕಂಡರೆ ಸುತ್ತುವರು, ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ, ಅತ್ತಲಿತ್ತ ನೋಡದಂತೆ ಕುರುಡನ ಮಾಡಯ್ಯ, ಕಾಗೆಯೊಂದು ಅಗಳು ಕಂಡರೆ ಕರೆಯದೆ ತನ್ನ ಬಳಗವ, ಎಮ್ಮವರು ಬೆಸಗೊಂಡರೆ ಶುಭಲಗ್ನ ಎನ್ನಿರಯ್ಯ, ಸಂಸಾರವೆಂಬುದೊಂದು ಗಾಳಿಯ ಸೊಡರು, ದೇಹವೆ ದೇಗುಲ ಹೀಗೆ ಒಂದೇ ಎರಡೆ ನೂರಾರು ಸಾವಿರಾರು ವಚನಗಳ ಸಂದೇಶ ಜಗದಗಲ, ಮುಗಿಲು ಮಿಗೆಯಗಲ, ಪಾತಾಳದಿಂದತ್ತೆ. ಬಸವನೆಂಬ ಬಳ್ಳಿ ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ (ಕುವೆಂಪು) ಬೆಳಗಿ ವಚನಗಳು ಅಂದು ಇಂದು ಮುಂದೆಂದೂ ಪ್ರಸ್ತುತವಾಗುತ್ತವೆ.
ಜನಸಾಮಾನ್ಯರನು ಕುರಿತು ಜನಸಾಮಾನ್ಯರ ಭಾಷೆಯಲ್ಲಿ ಜನಸಾಮಾನ್ಯರಿಗಾಗಿ ಜನಸಾಮಾನ್ಯರಲ್ಲಿ ಸೇರಿ ರಚಿಸಿದ ಹೃದಯದ ನುಡಿಗಳು ವಚನಗಳಾಗಿ ಜನಮನರ ಮನಕೆ ತಟ್ಟಿದವು, ಇಂತಹ ವಚನ ಸಾಹಿತ್ಯದಿಂದ ಸಮಾಜವನ್ನು ತಿದ್ದುವ ಮುನ್ನಡೆಸುವ ಸಿದ್ದೌಷದಿಗಳಂತಿವೆ, ಇಂದಿನ ಸಮಾಜಿಕ ಆರ್ಥಿಕ ಸಂಕಷ್ಟಗಳಿಗೆ ಮತ್ತು ಮೂಢನಂಬಿಕೆ ಮತ್ತು ಕಂದಾಚಾರ ಅಂಧಾನುಕರಣಿಗಳ ವಿರುದ್ಧ ಬಡಿದೆಬ್ಬಿಸುವ ಬಸವಣ್ಣನವರ ವಚನಗಳು ದಿಕ್ಸೂಚಿಯಂತಿವೆ.
ಕರುಣೆಯ ಖಣಜ ಬಸವಣ್ಣನವರು ಮಾನವನ ಮೂಲಭೂತ ಜೀವಪರ ಮೌಲ್ಯಗಳಿಗೆ ಚಾಲನೆಕೊಟ್ಟು ಮಹಿಳಾ ಸ್ವಾತಂತ್ರ್ಯದ ಹರಿಕಾರಕನಾಗಿ ಬೆಳಗಿದ ಬಸವ.
ನೊಂದವರಿಗೆ ಸಾಂತ್ವಾನ ಹೇಳುವ ಬೆಂದವರಿಗೆ ಬಿಗಿದಪ್ಪಿಕೊಳ್ಳುವ ಮಾನವೀಯತೆಯ ಮಹಾತ್ಮ ಕ್ರಾಂತಿಕಾರಿ ಬಸವ ಕೇವಲ ನುಡಿಯಲಿಲ್ಲ ನುಡಿದಂತೆ ನಡೆದ, ನಡೆದಂತೆ ಬೆಳೆದ, ಬೆಳೆದಂತೆ ಬೆಳಗಿದ, ಮಾನವರ ಕಲ್ಯಾಣಕ್ಕಾಗಿ ತನ್ನ ಮಂತ್ರಿ ಪದವಿಯನ್ನ ತ್ಯಜಿಸಿ ಸಮಾಜಮುಖಿ ಕಾರ್ಯಗಳಿಗೆ ಹಲವಾರು ವೃತ್ತಿಪರ ಶಿವಶರಣರ ನೂರಾರು ಶರಣರು ಶಿವಶರಣೆಯರು ಒಡಗೂಡಿ ಕಲ್ಯಾಣರಾಜ್ಯವನು ಕಟ್ಟಲು ಅನುಭವ ಮಂಟಪದಲಿ ಮುಕ್ತಪರ ಚಿಂತನೆಗಳನ್ನು ನಡೆಸಿ ಅರಿವಿನ ಬೆಳಕನು ಅರುಹಿದ ಬಸವ,
ಈ ಬಸವಾ ಎಂಬ ಮೂರಕ್ಷರ ವಚನ ಎಂಬ ಮೂರಕ್ಷರದಿಂದ ಜಗತ್ತು ಎಂಬ ಮೂರಕ್ಷರದಲ್ಲಿ ಸಮಾಜ ಎಂಬ ಮೂರಕ್ಷರದಿಂದ ಸಮತೆ,ಸೌಹಾರ್ಧ, ದಾಸೋಹ, ಕಾಯಕ, ಕರುಣೆ,ನಂಬಿಕೆ, ಶ್ರದ್ದೆಯ,ಶ್ರಮದ,ಭಕ್ತಿಯ,
ನಿಷ್ಟೆಯ,ಶಿಷ್ಟಾಚಾರವನ್ನು ವಚನಗಳ ಮೂಲಕ ತಿಳಿಸಿ ಎನಗಿಂತ ಕಿರಿಯರಿಲ್ಲ,ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ವಿನಯಶೀಲತೆ ಬಸವಣ್ಣನದು,
ಸಾತ್ವಿಕ ಗುಣದಿಂದ ತಾತ್ವಿಕ ನೆಲೆಗಟ್ಟನ್ನು ತೋರಿಸಿದ ಬಸವ, ಅದಕಾಗಿಲ್ಲವೆ ಬಸವನ ಬೆಳಕೆ ಏಲ್ಲಾಡಿಬಂದೆ ಭಾರತವೆಲ್ಲಾ ಸುತ್ತಾಡಿಬಂದೆ(,ಸಿ,ಪುರಾಣಿಕ). ಎಂದದ್ದು,ಭಾರತ ಮಾತ್ರ ವಲ್ಲ ನಮ್ಮನಾಳಿದ ಆಂಗ್ಲರ ನೆಲದಲಿ ನೆಲೆಗೊಳ್ಳುವುದು ಎಂದರೆ ವಿಶ್ವಗುರುವಿನ ಘನಕ್ಕೆ ಘನತೆಯಲ್ಲದೆ ಮತ್ತಿನ್ನೆನು,ಅದಕಾಗಿ ಇವ ನಮ್ಮವ ನಮ್ಮವ, ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ಹೊಡೆದೋಡಿಸಿದ ಬಸವನ ಬೆಳಕು ವಿಶ್ವಕ್ಕೆಲ್ಲಾ ಹಬ್ಬಿದೆ.
–ಲಲಿತಾ ಪ್ರಭು ಅಂಗಡಿ
ಅಂಧೇರಿ ಪೂರ್ವ
ಮುಂಬಯಿ-೬೯.
೯೭೬೮೨೫೭೪೨೯
lbrglpangadi@gmail.com.