ಭಾರತ ಭಾವೈಕ್ಯತೆಯ ಭವ್ಯ ತೊಟ್ಟಿಲು-ರಮೇಶಬಾಬು ಯಾಳಗಿ

e-ಸುದ್ದಿ, ಸಿಂಧನೂರು

ನಗರದ ಎ.ಪಿ.ಎಮ.ಸಿ.ಯಾರ್ಡನಲ್ಲಿ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯನ್ನು ಉದ್ಘಾಟನೆಗೋಳಿಸದ ಅವರು ಮಾತನಾಡಿದರು. ಉಳಿದ ದೇಶಗಳಿಗಿಂತ ನಮ್ಮ ದೇಶ ವೈಶಿಷ್ಟ್ಯಪೂರ್ಣವಾಗಿದ್ದು.ಅನೇಕ ಜಾತಿ,ಮತ,ಪಂಗಡ, ಧರ್ಮ, ಭಾಷೆಗಳಿದ್ದರೂ ವಿವಿಧತೆಯಲ್ಲಿ ಏಕತೆ ಕಾಣುವ ಭಾರತ ದೇಶ ಒಂದು ಭಾವೈಕ್ಯತೆ ಭವ್ಯ ತೊಟ್ಟಿಲು ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು
ಅವರು ಶನಿವಾರದಂದು ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯ ರಾಯಚೂರು ಜಿಲ್ಲಾ ಘಟಕದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ನಂತರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಖ್ಯಾತ ಪ್ರವಚನಕಾರ ಇಬ್ರಾಹಿಮ್ ಸುತಾರ ಅವರು ದೂರವಾಣಿಯ ಮೂಲಕ ಸಂದೇಶ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.ಸಂಸ್ಥೆಯ ನಾಮಫಲಕವನ್ನು ನೇತ್ರ ತಜ್ಞ ಡಾ.ಚನ್ನನಗೌಡ ಪೋಲಿಸ್ ಪಾಟೀಲ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಗೀತ ಕಲಾವಿದ ಶ್ರೀ ಅಂಬಯ್ಯ ನುಲಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಪಂಪಯ್ಯಸ್ವಾಮಿ ಸಾಲಿಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಜಿ.ಪ.ಸದಸ್ಯ ಎನ್ ಶಿವನಗೌಡ ಗೋರೇಬಾಳ, ಹಿರಿಯ ಸಾಹಿತಿ ಪ್ರೋ. ಶಾಶ್ವತಸ್ವಾಮಿ ಮುಕ್ಕುಂದಿಮಠ,ಎಸ.ಎಸ.ಹಿರೇಮಠ. ಶಿವುಕುಮಾರ ಜವಳಿ. ನಗರಸಭೆ ಮಾಜಿ ಉಪಾಧ್ಯಕ್ಷ ನದಿಮುಲ್ಲ.ಯಮನೂರ ನದಾಫ.ರಹಿಮಾನ್ ಶಿಕ್ಷಕರು.ಎಚ.ಶಿವರಾಜ ಉಪನ್ಯಾಸಕರು.ಇಸ್ಮಾಲಸಾಬ.,ಹೆಚ್ ಶರ್ಫುದ್ದಿನ್ ಪೋತ್ನಾಳ.ಖಂಜಾಚಿಗಳಾದ ಶೇಖ್ ಬಷೀರ್ ಎತ್ಮಾರಿ.ಕಲಾವಿದ ದೇವಿಂದ್ರ ಹುಡಾ.ಪ್ರಧಾನ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಕಾರ್ಯಕ್ರಮ ನಿರೂಪಿಸಿದರು. ಮತ್ತಿತರರು ಉಪಸ್ಥಿತರಿದ್ದರು.

Don`t copy text!