ಕನ್ನಡಮ್ಮನಿಗೆ ಸ್ವರನಮನ ಕಾರ್ಯಕ್ರಮ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಕರೆ

e-ಸುದ್ದಿ, ಮಾನ್ವಿ:

‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಸಾಹಿತ್ಯದಲ್ಲಿ ಆಸಕ್ತಿ , ಅಭಿರುಚಿ ಬೆಳೆಸಬೇಕು’ ಎಂದು ಪುರಸಭೆಯ ಸದಸ್ಯ ರಾಜಾ ಮಹೇಂದ್ರ ನಾಯಕ ಕರೆ ನೀಡಿದರು.
ಶನಿವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕನ್ನಡಮ್ಮನಿಗೆ ಸ್ವರನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಶ್ಲಾಘನೀಯ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯಕ ಜೂಕೂರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಡಾ.ಪ್ರಜ್ಞಾ ಹರಿಪ್ರಸಾದ, ಡಾ.ಅಂಬಿಕಾ ಮಧುಸೂದನ್, ಪತ್ರಕರ್ತ ಪಿ.ಪರಮೇಶ, ಸಾಹಿತಿ ಎಂ.ವೀರೇಶ, ಪಕ್ಷಿಪ್ರೇಮಿ ಸೈಯದ್ ಸಲಾವುದ್ದೀನ್, ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮಂಜುನಾಥ ನಾಯಕ, ಯಲ್ಲಪ್ಪ ನಿಲೋಗಲ್, ಲಕ್ಷ್ಮಣರಾಯ ಕಪಗಲ್, ಗುಂಡಪ್ಪ ಸಾಗರ್, ಡಾ.ಸೈಯದ್ ಮುಜೀಬ್ ಅಹ್ಮದ್, ಎಚ್.ಎಂ.ಇಸಾಕ್, ವಿಜಯಕುಮಾರ ಹರನಳ್ಳಿ, ಉಷಾಜ್ಯೋತಿ, ರವಿಶರ್ಮಾ ಜಾನೇಕಲ್ ಇದ್ದರು.

Don`t copy text!