ಭಾವಗೀತೆ
ನನ್ನೊಲವ ಹಾಡು
ತಾರೆಗಳ ತಂದು
ನಿನ್ನಡಿಗೆ ಇಡುವೆ
ನಗುನಗುತ ನೀ ನಡೆವೆ
ನನ್ನೊಲವ ತೋಟದಲಿ||
ಚಂದಿರನ ತಂದು
ಹಂದರ ಹಾಕುವೆ
ಬೆಳದಿಂಗಳೂಟದಲಿ
ಜೊತೆಯಾಗಿ ಕೂಡುವೆ||
ತಂಗಾಳಿ ತಂದು
ತಂಬೆಲರ ಬೀಸುವೆ
ಹಂಬಲದಿ ನಿನ್ನಾಸರೆಗೆ
ಒರಗಿ ನಾ ಮಲಗುವೆ ||
ಕನಸಲ್ಲಿ ಮನಸಲ್ಲಿ
ನಿನ್ನದೇ ಕನವರಿಕೆ
ಖುಷಿಯಲ್ಲಿ ಕೈನೀಡು
ಕುಣಿದು ನಲಿಯೋಣ
ನನ್ನೊಲವ ಹಾಡು ||