ಬದುಕು ಭಾರವಲ್ಲ 10 -ವಿಶೇಷ ಲೇಖನ ಮಾಲಿಕೆ
ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿ, ಗಂಡನ ಮನೆಗೆ ಅಲ್ಲ
ಹಲೋ
ಯಾರಮ್ಮ ಎಂದೆ
ಮೆಡಂ ರೀ ನಾನು ಯಲ್ಲುಕಾ ಅಂತಾ ರೀ ನೀವು ಎಲ್ಲಿದಿರಿ ಒಂದು ಹತಾಸೆಯ ದ್ವನಿ ಕೇಳಿಸಿತು. ಹೇಳಮ್ಮ ನಾನು ಆಪೀಸಿಗೆ ಬಂದಿರುವೆ ಮತ್ತು ರಿಪಿಟರ್ಸ ವಿದ್ಯಾರ್ಥಿಗಳ ಪರೀಕ್ಷೆಯ ಚಲನ್ ಕಟ್ಟಲು ಬಂದಿರುವೆ
ಹೇಳಮ್ಮ ಅಂದೆ..
ಮೆಡಂ ಹೇಗಾದರೂ ಮಾಡಿ ಸಹಾಯ ಮಾಡಿ ನಾನು ಪರೀಕ್ಷೆಯನ್ನು ಕಟ್ಟಬೇಕು
ಅಯ್ಯೋ ಒಂದು ಕೆಲಸ ಮಾಡಮ್ಮ ಯಾವ ವರುಷ ನೀನು ಫೇಲಾದೆ ನಿನ್ನ ಫೇಲಾದ ಅಂಕ ಪಟ್ಟಿ ತೆಗೆದುಕೊಂಡು ಬಾ ಇಲ್ಲ ಅಂದ್ರೆ ನಾನು ಕಾಲೇಜಿಗೆ ಬಂದಾಗ ನೋಡಿ ಹೇಳುವೆ ನೀನು ಫೇಲಾದ ಅಂಕ ಪಟ್ಟಿಯಲ್ಲಿ ಸಹಿ ಮಾಡಬೇಕು ಅಂದೆ
.ಇಲ್ಲ ಮೆಡಂ ಹೇಗಾದರೂ ಮಾಡಿ
ಅದೇ ಅಮ್ಮ ಎಷ್ಟು ವಿಷಯ ಹೋಗಿವೆ.ಅಂದೆ.ನನಗೆ ಗೊತ್ತಾಗಬೇಕಲ್ಲ ಎಷ್ಟು ವಿಷಯ ಹೋಗಿವೆ ಎಂದು
ಒಂದೇ ವಿಷಯ ಮೆಡಂ ಇಂಗ್ಲಿಷ್ ಹಾಗಾದರೆ ಇವತ್ತೇ ದಂಡ ರಹಿತ ಇದೆ .ಇವತ್ತೇ ಚಲನ್ ಕಟ್ಟಬೇಕು ನಾಳೆ ತೆಗೆದುಕೊಂಡು ಆಫೀಸ್ ಗೆ ಹೋಗಬೇಕು. ಅಂದೆ
ಪರೀಕ್ಷೆಯನ್ನು ಕಟ್ಟಿಸಿಕೊಂಡೆ .
ಅವಳ ಮಾತಿನ ಧಾಟಿಯಲ್ಲಿ ವೇದನೆ ಗಮನಿಸಿದೆ ಸುಮಾರು 23/24 ವರ್ಷ. ದ ಹುಡುಗಿ ಕೊರಳಲಿ ಮಾಂಗಲ್ಯ ಸರ ಗಮನಿಸಿ ಏನು ಮಾಡುವರು ನಿಮ್ಮ ಯಜಮಾನರು ಅಂದೆ .ಮೆಡಂ ನಮ್ಮ ಯಜಮಾನರು ಇಲ್ಲ. ಬೈಕ್ ಎಕ್ಸಿಡೆಂಟದಲ್ಲಿ ತೀರಿ ಹೋಗಿದ್ದಾರೆ
ಇಷ್ಟು ಸಣ್ಣ ವಯಸ್ಸಿನಲ್ಲಿ ಯಾವ ಕೆಲಸ ಮಾಡುತ್ತಿದ್ದರು ?.
ಬೆಳಗಾವಿಯ ಡಿಪೋ ದಲ್ಲಿ ಬಸ್ ಡ್ರೈವೇರ ಮೆಡಂ ನಮ್ಮ ತಂಗಿ ದಿನಾಲು ನಿಮ್ಮ ಬಗ್ಗೆ ಹೇಳುತ್ತಾಳೆ ಮೆಡಂ ಏನಾದರೂ ಸಾಧನೆ ಮಾಡಿ ಮನೆಯಲ್ಲಿ ಕಾಲ ಹರಣ ಮಾಡ ಬೇಡಿ ಅಂತಿಂದ್ರೀ ಅಂತಾ .ದಿನಾಲು ಹೇಳುತ್ತಾಳೆ ಮೆಡಂ ನಾನೂ ಕೂಡ ಪರೀಕ್ಷೆ ಕಟ್ಟಿ ಪಾಸು ಆಗಬೇಕೆಂದು ಮೆಡಂ
ಒಳ್ಳೆಯದು ಅಮ್ಮ ಕಟ್ಟು.
ನಾನು 8 ನೇ ತರಗತಿಯನ್ನು ಓದುವಾಗಲೇ ಮದುವೆ ಮಾಡಿದರೂ ಮೆಡಂ ನಿನೇಕೆ ಮಾಡಿಕೊಂಡೆ ಬೇಡ ಅನಬೇಕಾಗಿತ್ತು .
ಮನೆಯಲ್ಲಿ ಮಾಡಿದರೂ ಮೆಡಂ. ನನಗೂ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯನ್ನು ಮಾಡುಲು ಬಯಸಿದ್ದರು .ಅದನ್ನು ತಿರಸ್ಕರಿಸಿ ಕಲಿತು ನಿನಗೆ ಈಗ ಬುದ್ಧಿ ಹೇಳುತ್ತಿರುವೆ ಎಂದೆ.
ನಮ್ಮ ಹಳ್ಳಿಯ ಜನಕ್ಕೆ ತಿಳುವಳಿಕೆ ಮೂಡಿಸಲು ಕಣ್ಣಮ್ಮ ತಾಯಿಯೇ ನಿಮ್ಮನ್ನು ನಮ್ಮ ಊರಿಗೆ ಬರುವಂತೆ ಮಾಡಿದ್ದಾಳೆ ಮೆಡಂ ಅಂದಳು .ಇರಲಿ ಬಿಡಮ್ಮ ಯಾರು ಯಾರು ಎಲ್ಲಿ ಅನ್ನುವುದು ದೇವರಿಗೆ ಬಿಟ್ಟಿದ್ದು ಎಂದೆ .
ಮೆಡಂ ನೀವು ನಾಲ್ಕುವರ್ಷದ ಹಿಂದೆಯೇ ನಮ್ಮ ಕಾಲೇಜಿಗೆ ಬರಬೇಕಿತ್ತು. ನಿಮ್ಮ ಮಾತನ್ನು ಕೇಳುತ್ತ ಕೂಡಬೇಕು ಅನ್ಸುತ್ತೆ .
ಮನೆಯಿಂದ ಬರುವಾಗ ಬದುಕು ಕಠಿಣವಾಗಿತ್ತು .ಭಾರವಾದ ಮನ ಹಗುರಾಯಿತು ಮೆಡಂ .ನಿಮ್ಮ ಮಾತು ಕೇಳಿ.
ನೀವು ಇದೇ ಊರಲ್ಲಿ ಇರುವುದಾ? ಎಂದಳು.
ಹೌದು ಇಲ್ಲೇ ಇರುವೆ ಎಂದೆ .
ಮೆಡಂ ರೀ ನನಗ ಬಹಳ ಬೇಜಾರು ಆಗಿತ್ತ ನೋಡ್ರೀ
ನನ್ನ ಗಂಡ ತೀರಿ ಹೋಗಿದ್ದಾ ನನ್ನ ಮಗಳ ಮುಂದಿನ ಭವಿಷ್ಯ ಇದೆಲ್ಲ ಚಿಂತೆ ಇತ್ತ ರೀ ನೀವ್ ನನಗ ಮೆಡಂ ಹಾಗೆ ಕಾಣುತ್ತಿಲ್ಲ ನನ್ನ ಗೆಳತಿ ಹಾಗೆ ಕಾಣುತ್ತೀರಿ ಮೆಡಂ
ಸರಿ ಅಮ್ಮ ನನ್ನ ಸ್ವಭಾವನೇ ಹೀಗೆ ಬಹಳ ಮಾತನಾಡುತ್ತೇನೆ ಇದರಿಂದ ಕೆಟ್ಟಾಗುತ್ತೇನೆ ಅಂದೆ ಇಲ್ಲ ಮೆಡಂ ನೀವು ಹಾಗೆ ಕಾಣುತ್ತಿಲ್ಲ. ಒಮ್ಮೆ ನಮ್ಮ ಮನೆಗೆ ಬನ್ನಿ ಸರಿ ಅಮ್ಮ ಅಂದೆ .
ಇದನ್ನು ಹೇಳುವ ಉದ್ದೇಶ ಇಷ್ಟೇ ಮನುಷ್ಯನ ದುಃಖವನ್ನು ಮನುಷ್ಯನೇ ಮರೆಸಿ ಮುಂದಿನ ಸು ಪಥವನ್ನುತೋರುವುದು .ಪ್ರಜ್ಞಾವಂತರ ಲಕ್ಷಣ.
ನೊಂದ ಜೀವಕ್ಕೆ ಮತ್ತಷ್ಟು ನೋವು ಕೊಟ್ಟರೆ ನಮಗೂ ಪ್ರಾಣಿಗಳಿಗೂ ಏನು ? ವ್ಯತ್ಯಾಸ .ಹೇಳಿ
ಮತ್ತೊಬ್ಬರ ದುಃಖ ವನ್ನು ನಮ್ಮ ದುಃಖ ನಮ್ಮ ಚಿಂತೆ ಎಂದು ತಿಳಿದು ನಡೆಯಬೇಕೆಂದು ಬಸವಾದಿ ಶಿವಶರಣರ ನುಡಿಮುತ್ತಾಗಿತ್ತು .
ಏನೂ ತಿಳಿಯದ ವಯಸ್ಸಿನಲ್ಲಿ ಮದುವೆಯನ್ನು ಮಾಡಿಕೊಟ್ಟು ವಿಧವೆಯಾಗಿ ಮಗಳನ್ನು ನೋಡುವ ಇವತ್ತಿನ ಪಾಲಕರು ಸ್ವಲ್ಪ ಯೋಚಿಸಲೇ ಬೇಕು.
ಸರ್ಕಾರ ಬಾಲ್ಯ ವಿವಾಹ ಮಾಡುವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೂ. ಸರಕಾರದ ಕಣ್ಣಲ್ಲಿ ಮಣ್ಣು ಹಾಕುವುದರ ಜೊತೆಗೆ ಮಗಳ ಜೀವನದ ಕಣ್ಣಿಗೆ ಮಣ್ಣು ಹಾಕುವ ಪಾಲಕರು ಸ್ವಲ್ಪ ಯೋಚಿಸಬೇಕು.
ಓದುವ ವಯಸ್ಸಿನಲ್ಲಿ ಮಕ್ಕಳನ್ನು ಓದಲು ಬಿಡಿ .ಅವರು ಮದುವೆಯ ವಯಸ್ಸಿಗೆ ಬಂದಾಗ ಮದುವೆ ಮಾಡಿ ಪುಣ್ಯ ಕಟ್ಟಿಕೊಳ್ಳಿ..
ಪುಣ್ಯ ಪಾಪ ಇಲ್ಲದ ಜೀವನದಲ್ಲಿ
ತಂದೆ ತಾಯಿಗಳೇ ಮಗಳ ಜೀವನದ ಭಾರ ಇಳಿಸಬೇಕು.
ಬದಲಾದ ಸಮಾಜಕ್ಕೆ ಬದಲಾವಣೆಯ ಜೀವನದ ಬದುಕು ಇರಲಿ .ಬದುಕು ಭಾರವಲ್ಲ ಅನ್ನುವ ತಿಳುವಳಿಕೆ ಇವತ್ತಿನ ಸಮಾಜಕ್ಕೆ ಬೇಕೇ ಬೇಕು .
ಭಾರವಾದ ಹೆಜ್ಜೆಯನ್ನು ಇಡುತ್ತ ಬಂದ ವಿದ್ಯಾರ್ಥಿಯ ಹಾಗೆ ಎಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕೊರಳು ವಡ್ಡಿಲ್ಲಾ.
*ಮಕ್ಕಳನ್ನು ಶಾಲೆಗೆ ಕಳುಹಿಸಿ ಗಂಡನ ಮನೆಗೆ ಅಲ್ಲ.*
*ಮಕ್ಕಳಿಗೆ ವಸ್ತ್ರ ಒಡವೆ ಬೇಡ ಪುಸ್ತಕ ಕೊಡಿ.*
*ತಮ್ಮ ಕಾಲ ಮೇಲೆ ನಿಲ್ಲುವುದನ್ನು ಕಲಿಸಿ.ಕೈಯಿಂದ ಭಿಕ್ಷೆ ಬೇಡುವುದಕ್ಕಲ್ಲ.*
ಆಳಾಗಿ ದುಡಿಯಲು ಹಚ್ಚಬೇಡಿ ದುಡಿಸಿಕೊಳ್ಳುವ ಹಾಗೆ ಶಿಕ್ಷಣ ಕೊಡಿಸಿ.
ಮಕ್ಕಳಿಗೆ ನೀವೇ ಭಾರವಾಗ ಬೇಡಿ
ಭಾರ ಇಳಿಸಿ .
ಸಾಲ ಮಾಡಿ ಮದುವೆಯನ್ನು ಮಾಡಬೇಡಿ .ಸಾಲ ಕೊಡುವಂತೆ/ ಇನ್ನೊಬ್ಬರಿಗೆ ನೆರವಾಗುವಂತಹ ಶಿಕ್ಷಣ ಕೊಡಿ.
ನೀತಿ ಮರೆತು ಮಾತು ಬೆಳೆಸಬೇಡಿ
ಮನೆಯಲ್ಲಿ ಸಂಸ್ಕೃತಿ ಸಂಸ್ಕಾರ ಕಲಿಸಿ.
ಮಕ್ಕಳ ಕಲಿಕೆಯ ಬಗ್ಗೆ ಚಿಂತಿಸಿ .
ಕಲಿಕೆಯ ಮಾತಿನ ಬಗ್ಗೆ ಅಲ್ಲ.
ಹೆಣ್ಣಿರಲಿ ಗಂಡಿರಲಿ ಭೇದವಿಲ್ಲದೆ ವಿದ್ಯೆ ಕಲಿಸಿ.
ಮಕ್ಕಳ ಬಗ್ಗೆ ಗಮನ ವಹಿಸಿ
ಮಂದಿಯ ಮಾತಿನ ಬಗ್ಗೆ ಅಲ್ಲ.
-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್