ಛಲ ವಿದ್ದರೆ ಗೆಲವು

ಬದುಕು ಭಾರವಲ್ಲ 12 ನೇಯ ಸಂಚಿಕೆ

ಛಲ ವಿದ್ದರೆ ಗೆಲವು

ಮಾನವನಿಗೆ ಬದುಕಿನಲ್ಲಿ ಅನೇಕ ಎಡರು ತೊಡರುಗಳು ಬರುತ್ತವೆ.
ಅತ್ಯಂತ ಕಠಿಣವಾದ ಸಮಸ್ಯೆಗಳಿಂದ ಜೀವನ ಕುಗ್ಗಿ ಹೋಗಿ ಬಿಡುತ್ತದೆ.ಜೀವನವೇ ಭಾರವಾಗಿ ಬಿಡುತ್ತದೆ .ಅವಮಾನ ದಿಂದ ಬೆಂದು ಬಳಲಿ ಜೀವನವೇ ಸಾಕಾಗಿ ಹೋಗಿ ಬಿಡುತ್ತದೆ.
ಮನಸ್ಸಿನಲ್ಲಿ ಉಲ್ಲಾಸ ಕಳೆದುಕೊಂಡು ಬಿಡುತ್ತೇವೆ.
ಉದ್ದೇಶ ಪೂರ್ವಕವಾಗಿ ಕೊಟ್ಟ ಕೆಲಸವನ್ನು ಪೂರೈಸಲು ಆಗದಿರುವಾಗ ಮತ್ತೆ ಬದುಕು ಬೇಸರ ಅನಿಸುವುದು.ಎನು ಮಾಡವುದು ಎನ ಮಾಡಿದರೂ ಸೋಲುತ್ತಿರುವೆ ಹತಾಸೆಯ ಭಾವನೆ ಬಂದು ಬಿಡುತ್ತದೆ.
ಕೊನೆಗೆ ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಮನದಲ್ಲಿ ಇದ್ದರೂ ಛಲ ಮೂಡಿರುವುದಿಲ್ಲ. ಮನದ ಗಿಡಕ್ಕೆ ಕಲ್ಲಿನ ಏಟು ಬಿದ್ದು ಬಿದ್ದು ಮನದಲ್ಲಿ ಛಲ ಮೂಡಿ ಬಂದು ಬಿಡುತ್ತದೆ .ಭಾರವಾದ ಬದುಕಿಗೆ ಛಲ ಮೂಡಿ ಬದುಕು ಸಾಧನೆಯ ಹಾದಿಯನ್ನು ಹಿಡಿದಾಗ ಹಗುರವಾಗುವುದು.
ಜೀವನ ದಲ್ಲಿ ನಡೆದ ಒಂದು ಸತ್ಯ ಘಟನೆ ಒಬ್ಬ ತಂದೆಗೆ ನಾಲ್ಕು ಜನ ಹೆಣ್ಣು ಮಕ್ಕಳು ಮೊದಲನೇಯ ಮಗಳು ಸುರೇಖಾ .
ಸುರೇಖಾ ಚಿಕ್ಕವಳಿರುವಾಗಲೇ ತಂದೆಯ ಮಾತನ್ನು ಮೀರಲಾರದೇ ತನ್ನ ಸೋದರ ಮಾವನಿಗೆ ಕೊರಳು ತಗ್ಗಿಸಿ ತಾಳಿಯನ್ನು ಕಟ್ಟಿಸಿಕೊಳ್ಳುತ್ತಾಳೆ.
ಕೇವಲ 14-15 ನೇ ವರುಷ ಅಷ್ಟೇ ಬಾಲ್ಯದಲ್ಲಿ ತಾಳಿ ಕಟ್ಟಿಸಿಕೊಂಡು ಚಿಕ್ಕ ವಯಸ್ಸಿನಲ್ಲಿ ಬದುಕಿನ ಜವಾಬ್ದಾರಿಯಿಂದ ಮನ ಭಾರವಾಗಿ ಹತಾಸೆ ನೀರಾಸೆ ಯಾಗುತ್ತದೆ .ನಿರಾಸೆ ಆದರೂ ತಂದೆಯ ಆದರ್ಶದ ಮಾತುಗಳು ಮತ್ತೆ ಬದುಕಿನ ಭಾರ ಹಗುರಾದಂತೆ ಆಗುತ್ತದೆ.ಮನದಲ್ಲಿ ಛಲ ಹುಟ್ಟುತ್ತದೆ ಓದುವ ಆಸೆ ಮನದಲ್ಲಿ ಇದ್ದರೂ 9 ನೇಯ ತರಗತಿಯನ್ನು ಓದುವಾಗಲೇ ಚಿಕ್ಕ ಅಂಗನವಾಡಿ ನೌಕರಿಗೆ ಸೇರಿದ ಸುರೇಖಾ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಕಟ್ಟಿ ಪಾಸಾಗಿ ಮುಂದೆ ಬಿ ಎ ಎಮ್ ಎ ಪರೀಕ್ಷೆಯನ್ನು ಪಾಸಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲ್ಲಿ ಮೇಲಾಧಿಕಾರಿಯಾಗಿ ಸೇವೆ ಸಲ್ಲಿಸುವ ಸುರೇಖಾ ಳ ಮನದಲ್ಲಿರುವ ಛಲದಂತೆ ಅನೇಕ ಮಹಿಳೆಯರು ಬಾಲ್ಯದಲ್ಲಿ ಹತಾಸೆಯ ಭಾವದಿಂದ ಹೊರಬಂದು ಛಲದಿಂದ ಸಾಧನೆಯ ಹಾದಿಯನ್ನು ಹಿಡಿದಾಗ ಬದುಕು ಭಾರವಾಗಲಾರದು ಅಲ್ಲವೇ?

-ಡಾ ಸಾವಿತ್ರಿ ಮ ಕಮಲಾಪೂರ

Don`t copy text!