ಪ್ರವಾಸ ಕಥನ ಮಾಲಿಕೆ
ಬೆಳಗಾವಿ ಅಧಿವೇಶನದ ಬಿಂಬ ಕಾಂಗ್ರೆಸ್ ಬಾವಿ…..
1924ರಲ್ಲಿ ಒಂದು ಕಾಂಗ್ರೆಸ್ ಅಧಿವೇಶನ ನಡೆಯಿತು.ಅದರ ಅಧ್ಯಕ್ಷತೆ ಯನ್ನು ಮಹಾತ್ಮ ಗಾಂಧೀಜಿ ವಹಿಸಿದ್ದರು.ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಮೊದಲ ಹಾಗೂ ಏಕಮಾತ್ರ ಅಧಿವೇಶನ ಇದಾಗಿದೆ.ದೇಶದ ಸ್ವಾತಂತ್ರ್ಯದ ಕನಸು ನನಸಾಗಲು ಮೂಲ ಪ್ರೇರಣೆಯಾದ ಸ್ಥಳಗಳಲ್ಲಿ ಬೆಳಗಾವಿ ಕೂಡ ಒಂದು.ಬೆಳಗಾವಿಯ ವೀರ ಸೌಧವು ಡಿಸೆಂಬರ್ 25.26 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ನೆನಪಿಗಾಗಿ ಕಟ್ಟಿದ ಕಟ್ಟಡವಿದು.
ಈ ಅಧಿವೇಶನಕ್ಕಾಗಿ ಬರುವವರ ಉಪಯೋಗಕ್ಕಾಗಿ ಒಂದು ಬಾವಿ ಕೂಡ ತೊಡಲಾಗಿತ್ತು. ಅದು ಈಗಲೂ ಕಾಂಗ್ರೆಸ್ ಬಾವಿ ಎಂದೂ ಪ್ರಸಿದ್ಧ.ಪೂರ್ತಿ ನೀರು ತುಂಬಿದ ಬಾವಿ ಸುಸಜ್ಜಿತವಾಗಿದೆ.ವೀರಸೌಧದ ಒಳಗೆ ಹೆಜ್ಜೆ ಇಟ್ಟರೆ ಸಾಕು ಸ್ವಾ ತಂತ್ರ್ಯ ಹೋರಾಟದ ದಿನ ಆ ವರಿಸುತ್ತದೆ. ಮಧ್ಯದಲ್ಲಿ ಗಾಂಧೀಜಿಯ ಕಂಚಿನ ಮೂರ್ತಿ ಗಮನ ಸೆಳೆಯುತ್ತದೆ.ಇಲ್ಲಿ ಗಾಂಧೀಜಿಯವರೇ ಗಾಂಧಿ ಟೋಪಿ ಧರಿಸಿದ ಚಿತ್ರವಿದೆ.ಹುದ ಲಿ ಗ್ರಾಮದವರೇ ಆದ ಗಂಗಾಧರ ದೇಶಪಾಂಡೆ ಕರ್ನಾಟಕದ ಸಿಂಹ…. ಇವರೇ ಬೆಳಗಾವಿಯಲ್ಲಿ ಅಧಿವೇಶನ ನಡೆಯಲು ಕಾರಣಿಕರ್ತರು.ಅನೇಕ ದಿಗ್ಗಜರ ತಂಡವೇ ಈ ಅಧಿವೇಶನದಲ್ಲಿ ಪಾಲ್ಗೊಂಡಿತ್ತು.ಮೌಲನಾ ಮೊಹಮ್ಮದ್ ಅಲಿ. ಮೌಲಾನಾ ಸೌಕತಅಲಿ.ಜವಾಹರ ಲಾಲ್ ನೆಹರು. ಅವರ ತಂದೆ ಮೋಹನ ಲಾಲ್. ಸರೋಜಿನಿ ನಾಯಿಡು ಭಾಗವಹಿಸಿದ್ದರು. ಅವರಿಗಾಗಿ ತಾತ್ಕಾಲಿಕ ರೈಲ್ವೆ ನಿಲ್ದಾಣ ನಿರ್ಮಿಸಲಾಗಿತ್ತು.
ಈಗ ಕಾoಗ್ರೆಸ್ ಬಾವಿಯನ್ನು ಉದ್ಯಾನವನವಾಗಿ ಮಾಡಿದ್ದಾರೆ.
✍️ಶ್ರೀಮತಿ. ವಿದ್ಯಾ ಹುಂಡೇಕರ