ನೋವನ್ನು ಕಾಣದೆ ಬೆಳೆದಾತ

ನೋವನ್ನು ಕಾಣದೆ ಬೆಳೆದಾತ

ನೋವನ್ನು ಕಾಣದೆ ಬೆಳೆದಾತ
ಆದರೂ ಈತ ಪ್ರಬುದ್ಧ

ರೋಗರುಜಿನ ಕಷ್ಟ ಕಾರ್ಪಣ್ಯ ಕಾಣಲು
ಅರಿವಾಯಿತು ಸಾವು ಕೊನೆಗೆ ಸಿದ್ಧ

ಮೋಹದ ಮಡದಿ ಮುದ್ದಿನ ಮಗನ
ತಂದೆ ತಾಯಿಯ ಮೋಹ ತೊರೆದಾತ ಪ್ರಸಿದ್ಧ

ನಡುರಾತ್ರಿಯಲಿ ವೈರಾಗ್ಯ ತಳೆದು
ಹೊರಟಂತ ವಿರಾಗಿ ಆಗಲು ಬುದ್ಧ

ಶಾಂತಿ ಅಹಿಂಸೆ ಪಾಠ ಕಲಿಸಿದ
ಗೌತಮ ಬುದ್ಧ ಲೋಕಕಲ್ಯಾಣಕ್ಕೆ ಬದ್ಧ

ಮಾಧುರಿ ದೇಶಪಾಂಡೆ

Don`t copy text!