ಸಿದ್ಧ ನೀ ಬುದ್ಧನಾದೆ
ವೈಶಾಖ ಪೌರ್ಣಿಮೆ ಚಂದಿರ
ಶುದ್ಧೋದನ ಮಾಯಾದೇವಿ ವರಪುತ್ರ
ಲುಂಬಿನಿ ವನದ ರತ್ನ
ಜಗದ ಬೆಳಕಿನ ಮಾನಸಪುತ್ರ
ಚಾತುರ್ಯ ಸತ್ಯದ ಜನಕ
ಅಷ್ಟಾಂಗ ಮಾರ್ಗದ ದಾರ್ಶನಿಕ
ಧಮ್ಮಮಾರ್ಗದ ಸಂಸ್ಥಾಪಕ
ಅಹಿಂಸೆಯ ಪರಿಪಾಲಕ
ಶಾಂತಿ ಸಮತೆಯ ಜ್ಯೋತಿ
ಜ್ಞಾನ ಜ್ಯೋತಿಯ ಪಣತಿ
ದಯೆ ಕರುಣೆಯ ಮೂರುತಿ
ಜಗಕೆಲ್ಲ ನೀ ಆರತಿ
ಯಜ್ಞ ಯಗಾದಿ ಕೊಂಡಿಬಿಡಿಸಿ
ಸತ್ಯದ ಶೋಧನಡೆಸಿ
ವ್ಯಾಮೋಹದ ಜಾಲಬಿಡಿಸಿ
ಸಿದ್ಧ ಪುರುಷ ಸಿದ್ಧಾರ್ಥ ಎನಿಸಿ
ಲೋಕಕೆಲ್ಲ ಬೆಳಕು ಚೆಲ್ಲಿ
ಆರ್ಯಸತ್ಯ ನಿಜವ ತಿಳಿಸಿ
ಪಂಚಶೀಲ ತತ್ವ ಬೋಧಿಸಿ
ಕರುಣೆಯಿಂದ ನಮ್ಮ ಹರೆಸಿ
ಸಾವಿಲ್ಲದ ಮನೆಯ
ಸಾಸಿವೆ ತಾರೆಂದು
ಭವದ ಬಂಧನವ ಬಿಡಿಸಿದೆ
ಜ್ಞಾನ ಕಣಜ ಹರಿಸಿದೆ
ಅರಳಿ ಮರದ ಬುಡದಲಿ
ಜ್ಞಾನೋದಯದ ಸಿರಿಯಲಿ
ಸಿದ್ಧ ನೀ ಬುದ್ಧನಾದೆ
ಜಗದ ಬಂಧನ ಕಳೆಸಿದೆ
-ಡಾ.ದಾನಮ್ಮ ಝಳಕಿ