ಬದುಕು ಭಾರವಲ್ಲ ಸಂಚಿಕೆ 15
ಬದುಕು ಬದಲಾಯಿಸಿಕೊಂಡ ಯಾರು ? ಯಾರು ಆ ಹುಡುಗಿ?
2005 ರಂದು ನಾನು ಡ್ಯೂಟಿಗೆ ಹೋಗುವ ಬಸ್ ನಲ್ಲಿ ಸುಮಾರು ಎಂಟು ಹತ್ತು ವರ್ಷದ ಒಂದು ಚಿಕ್ಕ ಹುಡುಗಿ ಬಸ್ಸಿನಲ್ಲಿ ಒಬ್ಬಳೇ ಬಗಲಿನಲ್ಲಿ ಒಂದು ಚೀಲ ಹಾಕಿಕೊಂಡು ಕೈಯಲ್ಲಿ ಒಂದು ಹಲಗೆಯನ್ನು ಹಿಡಿದುಕೊಂಡು ಹಾಡುತ್ತಾ ಬಸ್ಸಿನಲ್ಲಿ ಹತ್ತಿದಳು. ಯವ್ವ ಭಿಕ್ಷೆ ನೀಡವ್ವ ನಿನಗ ಒಳ್ಳೆಯದಾಗತ್ತದ ನಿನ್ನ ಬದುಕು ಬಂಗಾರ ಆಗತೈದ ಎಂದು ಕೈ ಮುಂದೆ ಚಾಚಿದಳು. ನಾನು ಆ ಹುಡುಗಿಗೆ ಒಂದು ಕಪಾಳಿಗೆ ಹೊಡೆಯುವಷ್ಟು ಸಿಟ್ಟು ಬಂತು. ದುಡ್ಡು ಕೊಡುವವರಿಗೆ ನನ್ನ ಕಾಲನ್ನು ಗಟ್ಟಿಯಾಗಿ ಹಿಡಿದು ಬಿಡಲೇ ಇಲ್ಲ .ಹೇ ಬಿಡು ಬಿಡು ನಿನಗ ಹೊಡೆದೆ ಬಿಡುವೆ ಬಿಡು ನನ್ನ ಕಾಲು ಎಂದು ಬ್ಯಾಗಿನಿಂದ ಒಂದು ರೂಪಾಯಿ ತೆಗೆದು ಕೊಟ್ಟೆ. ಮಾರನೆಯ ದಿನ ನಾನು ಡ್ಯೂಟಿಗೆ ಹೋಗುವ ಬಸ್ಸು ಬಂದಿತ್ತು ಮತ್ತೆ ಅದೇ ಹುಡುಗಿ ಕಾಣಿಸಿಕೊಂಡಳು. ಮತ್ತೆ ನನ್ನ ಹತ್ತಿರ ಕೈಚಾಚಿ, ಯವ್ವ ಎಂದು ಅಂದಾಗ ನಿನ್ನೆ ನಿನಗೆ ದುಡ್ಡು ಕೊಟ್ಟು ಹೇಳಿದೆ ತಾನೆ ?ಭಿಕ್ಷೆ ಬೇಡುವುದು ಬಿಟ್ಟು ಶಾಲೆ ಕಲಿ ಶಾಲೆಗೆ ಹೋಗು ಅಂತಾ. ನಡೆ ಇದೇ ಬಸ್ಸಿನಲ್ಲಿ ಶಾಲೆಗೆ ಕರೆದುಕೊಂಡು ಹೋಗುವೆ. ಅಲ್ಲೇ ಊಟ ಎಲ್ಲವೂ ಸಿಗುತ್ತದೆ ನಡೆ ನಮ್ಮಂತಹ ಶಿಕ್ಷಕರ ಹತ್ತಿರ ದುಡ್ಡು ಕೇಳ್ತಿ ನಡೆ
ಅಷ್ಟರಲ್ಲಿ ಬಸ್ಸಿನ ಡ್ರೈವರ್ ಬಂದರು.
ಸರ್ ಈ ಹುಡುಗಿನ ಭಸ್ಸಿನಿಂದ ಇಳಿಸಬೇಡಿ ಭಿಕ್ಷೆ ಬೇಡಲು ಕಳಿಸುವ ಇವಳ ಪಾಲಕರಿಗೆ ಮೊದಲು ಬುದ್ಧಿ ಇಲ್ಲ.
ಪಾಪ ಈ ಹುಡುಗಿಗೆ ಅಂದರೆ ಏನು ಬಿಡಿ ಸರ್ ಇಳಿಸಿ ಕಳುಹಿಸಿ . ಎಲ್ಲಿಯಾದರೂ ಬದುಕಲಿ ಎಂದೇ. ಸುಮಾರು 24 ವರ್ಷದ ಹಿಂದಿನ ಘಟನೆ ಇದು ಅವತ್ತು ಆ ಮುಖವೇ ನನಗೆ ನೆನಪಿಲ್ಲ.
ಮೇಡಂ, ನಮಸ್ಕಾರ್ರೀ ಯಾವ ಕಡೆ ಹೋಗಬೇಕು ನೀವು? ಇಲ್ಲಿ? ನಮ್ಮ ಬಸ್ಸಿನಲ್ಲಿ? ಹೇಳಿ
ಎಂದರು ಬಸ್ಸಿನ ಕಂಡಕ್ಟರ್.
ನಾನು ಇಲ್ಲೇ ಕಾಲೇಜಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದೆಯಲ್ಲ ಅಲ್ಲಿ ಎಂದೆ. ಎಷ್ಟು ಮಾಡಿದರೂ ನನ್ನಿಂದ ದುಡ್ಡನ್ನು ತೆಗೆದುಕೊಳ್ಳಲಿಲ್ಲ ಆ ಕಂಡಕ್ಟರ್ ಟಿಕೆಟ್ ಅನ್ನು ಹರಿದುಕೊಟ್ಟು ಮೇಡಂ ದುಡ್ಡು ಬೇಡ ಎಂದು ಹೇಳಿದಳು ಆ ಹುಡುಗಿ .
ಮೆಡಂ ನೀವು
ನನ್ನ ಬದುಕಿಗೆ ದಾರಿ ತೋರಿದ ಮಹಾನ್ ದೇವತೆ ನೀವು ಮೆಡಂ ಎಂದಳು ಕೇಳಿಸಿಕೊಂಡವರ ದೃಷ್ಟಿ ನನ್ನ ಕಡೆಗೆ ಯಾರು ನೀನು? ನನ್ನ ವಿದ್ಯಾರ್ಥಿನ? ಇಲ್ಲ ಮೇಡಂ ಹಾಗೆ ಅಂದುಕೊಳ್ಳಿ ನೀವೇ ನನ್ನ ಮೊದಲ ಗುರು ಮತ್ತು ದೇವರು ಅಂದಳು ಇಷ್ಟೆಲ್ಲ ಹೊಗಳಿಕೆ ನನಗೆ ಬೇಡ ಮೊದಲು ನೀವು ಯಾರು ಹೇಳಿ ಸಾಕು ಅಂದೆ .
ನನಗೆ ನೀನು ಯಾರು ಅನ್ನೋದೇ ಗೊತ್ತಿಲ್ಲ ಮೊದಲು ನೀನು ಯಾರು ಹೇಳು ಮತ್ತೆ ಅಂದೆ .
ಮೇಡಂ, ನೀವು ಬಸ್ಸಿನಲ್ಲಿ ದಿನಾಲು ಓಡಾಡುತ್ತಿದ್ದೀರಿ ಇದೇ ಬಸ್ ಸ್ಟ್ಯಾಂಡ್ನಲ್ಲಿ 2005ರಲ್ಲಿ ನಾನು ಭಿಕ್ಷೆ ಬೇಡುತ್ತಿದ್ದೆ ,ನನ್ನ ಸಾಕು ತಾಯಿ ನನ್ನನ್ನು ಬಿಟ್ಟು ಎಲ್ಲೋ ಹೋದಳು. ನಾನು ಭಿಕ್ಷೆ ಬೇಡತ ಬೆಳಗಾವಿಗೆ ಹೋದೆ, ಅಲ್ಲೇ ಬಸ್ಟ್ಯಾಂಡಿನಲ್ಲಿ ಮಲಗಿದ ನೆನಪು ಆಮೇಲೆ ನಾನು ಕಣ್ಣು ತೆರೆದು ನೋಡಿದಾಗ ಬೇರೆ ಆಗಿತ್ತು ನನ್ನನ್ನು ಯಾರು ಕರೆದುಕೊಂಡು ಬಂದರೂ ಎನ್ನುವುದು ನನಗೆ ಗೊತ್ತಿಲ್ಲ ಆದರೆ ನೀವು ನನಗೆ ಒಂದು ರೂಪಾಯಿ ಕೊಡುವಾಗ ನಿಮ್ಮ ಫೋಟೋ ಬಿದ್ದಿತ್ತು ಅದನ್ನು ನಾನು ಜೋಪಾನವಾಗಿ ನನ್ನ ಹರಿದ ಅಂಗಿಯ ಕಿಸೆಯಲ್ಲಿ ಇಟ್ಟುಕೊಂಡಿದ್ದೆ ನನಗೆ ದುಃಖವಾದಾಗ ಈ ಫೋಟೋ ತೋರಿಸುತಿದ್ದೆ .ನನಗೆ ಊಟ ತಿಂಡಿ ಎಲ್ಲವನ್ನೂ ಕೊಡುತ್ತಿದ್ದರು ನೀನು ಯಾರು ಅಂತಾ ಕೇಳಿದಾಗ ನಾನು ಶಾಲೆಗೆ ಹೋಗಬೇಕು ಎನ್ನುತ್ತಿದ್ದೆ. ಶಾಲೆಯಲ್ಲಿ ನಾನು ಹೇಗೂ ಎಸ್ ಎಸ್ ಎಲ್ ಸಿ ಪಾಸ್ ಆದೆ ಮತ್ತು ದ್ವಿತೀಯ ಪಿಯುಸಿ ಕಟ್ಟಿ ಪಾಸ್ ಆಗಿ ಈಗ ಬಸ್ಸಿನಲ್ಲಿಯೇ ನಾನು ಕಂಡಕ್ಟರ್ ಆಗಿರುವೆನು
ಅವತ್ತು ನೀವು ನನಗೆ ನಡೆ ನನ್ನ ಜೊತೆ ಶಾಲೆಗೆ ಅನ್ನುವ ನೆನಪು ಮೆಡಂ ಅಂದಳು. ನಿಮ್ಮನ್ನು ನಾನು ಕಾಣಲು ಪ್ರಯತ್ನಿಸುತ್ತಿದ್ದೆ ಆದರೆ ಆಗಲಿಲ್ಲ ಅಂದಳು ನಿಮ್ಮ ನಂಬರ್ ಕೊಡಿ ಅಂದಳು ಅಷ್ಟರಲ್ಲಿ ನಾನು ಇಳಿಯುವ ಊರು ಬಂತು.
ಅಯ್ಯೋ ಭಗವಂತ ಈ ಭೂಮಿ ಗುಂಡಗೆ ಇದೆ. ಯಾರ್ ಯಾರನ್ನು ಯಾರಿಂದಲೋ ಭೇಟಿ ಮಾಡಿಸಿ ಕಷ್ಟ ಬಗೆಹರಿಸಿ ಬದುಕಿನ ಮಾರ್ಗ ತೋರಿಸುವ ಜಗದೊಡೆಯ ಭಗವಂತನೇ ನಿನಗೆ ದೇವರು ನಾನಲ್ಲಮ್ಮ ಎಂದು ಇಳಿದು ನಮ್ಮ ಊರಿಗೆ ಬಂದೆ. ಆದರೆ ಆ ಹುಡುಗಿಯ ಪೂರ್ಣವಾದಂತ ವಿಳಾಸವನ್ನು ನಾನು ತೆಗೆದುಕೊಳ್ಳುವುದನ್ನು ಮರೆತು ಬಿಟ್ಟೆ ಇನ್ನೂ ಅವಳ ನೆನಪು ನನಗೆ ಕಾಡುತ್ತಿದೆ ಯಾರು ? ಯಾರು ಆ ಹುಡುಗಿ.ಅಂತಾ.?
–ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್
ಮೇಡಂ ಕವನ ತುಂಬಾ ಚೆನ್ನಾಗಿದೆ ಸ್ವಾನುಭವದ ಅಭಿವ್ಯಕ್ತಿ
ಹೃದಯಸ್ಪರ್ಶಯಾಗಿದೆ
ಡಾ. ಮೀನಾಕ್ಷಿ ಪಾಟೀಲ್ ಕನ್ನಡ ಉಪನ್ಯಾಸಕರು
ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ