ಉಳಿದಿರುವುದೊಂದೆ ಕವಿತೆ
ನೀನ್ನಲ್ಲದೇ ಮತ್ತೇನು ನೆನಪಿಗೆ ಬಾರದ ವೇಳೆಯಲ್ಲಿ ನನ್ನನ್ನು ನಾನು ನೆನಪಿಸಿಕೊಳ್ಳಲು ಉಳಿದಿರುವುದೊಂದೆ ಕವಿತೆ
ನಿನ್ನಯ ಮಧುರ ನೋಟ ಸಾಕು
ನನ್ನ ಹೃದಯಾಂತರಂಗದಲ್ಲಿ
ಘನೀಭವಿಸಿದ ಪ್ರೇಮ ಸುಧಾ ಭಾವನೆ ಕರಗಲು
ನಿನ್ನ ಒಂದೇ ಒಂದು ಮುಗುಳ್ನಗೆ ಸಾಕು ನನ್ನ ಹೃದಯದಾಳದಲ್ಲಿ ನಿಶ್ಚಲವಾಗಿರುವ ಪ್ರೀತಿಯ ಕಿರೀಟವನ್ನೆತ್ತಿ ತೋರಿಸಲು
ನಿನ್ನ ಒಂದೇ ಒಂದು ಸನ್ಹೆ ಸಾಕು
ನನ್ನ ಮನಃ ಒಂದೊಂದು ಪುಟದಲ್ಲೂ ನಿಶ್ಪಲವಾಗಿರುವ
ಪ್ರೇಮ ಮಯೂರಿಯು
ಗರಿ ಬಿಚ್ಚಿ ನರ್ತಿಸಲು
ನಿನ್ನ ಒಂದೇ ಒಂದು ಮಾತು ಸಾಕು
ನನ್ನ ಕಂಠ ಪಂಜರದಲ್ಲಿ ಸಿಕ್ಕಿ ಹಾಕಿಕೊಂಡ ಪ್ರೇಮ ಪಲ್ಲವಿ ರಾಗ ಲಯಬದ್ಧವಾಗಿ ಹಾಡಲು
ನನ್ನ ಈ ಒಂದೇ ಒಂದು ಜನ್ಮ ಸಾಕು
ನನ್ನ ಜೀವಿತದ ಮಜಲಿನಲಿ ನೀ ಉಳಿಸಿದ ಪ್ರೇಮ ಶಿಖರಕ್ಕೆ ತನು ಮನಧಾರೆಯಿಂದ ಪುಲಕಿತಗೊಳಿಸಲು
ಮಮತ (ಕಾವ್ಯ ಬುದ್ಧ)