ಬದುಕು ಭಾರವಲ್ಲ ಸಂಚಿಕೆ 17
ಆಯ್ಕೆ ನಮ್ಮಕೈಯಲ್ಲಿ
ಜೀವನದ ಪ್ರತಿ ಗಳಿಗೆಯಲ್ಲಿ ಪ್ರತಿ ಹಂತದಲ್ಲಿ ಆಯ್ಕೆ ತುಂಬಾ ಮುಖ್ಯ
ಹುಟ್ಟಿನಿಂದ ಚಟ್ಟದವರೆಗೆ ನಮ್ಮ ಜೀವನ ಆಯ್ಕೆಯ ಮೇಲೆಯೇ ನಿಂತಿರುತ್ತದೆ.
ಬಾಲ್ಯದಲ್ಲಿ ನಮಗೆ ಆಟ ವಾಡಲು ಅನೇಕ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಆ ವಸ್ತುವಿನೊಡನೆ ಆಟವಾಡುತ್ತಿದ್ದಾಗ ಅದು ತಕ್ಷಣ ಮುರಿದು ಬೀಳುತ್ತದೆ .ಅವಾಗ ನಮಗೆ ಅನಿಸುತ್ತದೆ ಓ ನಾವು ಆಯ್ಕೆಮಾಡಿಕೊಂಡ ತಂದ ವಸ್ತು ಸರಿಯಿಲ್ಲ .ಕಳಪೆ ಇದೆಯೆಂದು.
ಪೇಟೆಗೆ ಹೋದಾಗ ಚೆನ್ನಾಗಿರುವ ಆರಿಸಿಕೊಂಡು ಆಯ್ಕೆ ಮಾಡಿಕೊಂಡು ತರಕಾರಿ , ಇತರೇ ವಸ್ತು ಹಾಗೂ ಹಣ್ಣುಗಳನ್ನು ಚೀಲದಿಂದ ತಂದ ವಸ್ತುಗಳು ಎಷ್ಟರ ಮಟ್ಟಿಗೆ ಚೆನ್ನಾಗಿವೆ ಎಂದು ತಂದ ವಸ್ತುವು ಚೆನ್ನಾಗಿರದೇ ಇದ್ದಾಗ ಎಷ್ಟೋ ಮನೆಗಳಲ್ಲಿ ರಂಪ ಕೂಗಾಟವೇ ಆಗಿರುವುದು ಕಂಡು ಬಂದಿದೆ.
ನಾವು ಕಲಿಯುವ ವಿಷಯ ಗಳು ನಾನು ಯಾವ ವಿಷಯವನ್ನು ಆಯ್ಕೆ ಮಾಡಿಕೊಂಡರೆ ನನಗೆ ಮುಂದೆ ಒಳ್ಳೆಯದಾಗುತ್ತದೆ ಎನ್ನುವ ಅರಿವು ಇಟ್ಟುಕೊಂಡು ಆ ವಿಷಯವನ್ನು ಆಯ್ಕೆಮಾಡಿಕೊಂಡಿರುತ್ತೇವೆ .
ತಂದೆ ತಾಯಿಯ ಇಲ್ಲವೇ ಸ್ನೇಹಿತರ ಇಲ್ಲವೇ ಗುರುಗಳ ಒತ್ತಾಯದ ಮೇರೆಗೆ ಆಸಕ್ತಿಯಿಲ್ಲದ ವಿಷಯಗಳನ್ನು ಆಯ್ಕೆಮಾಡಿಕೊಂಡು ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತೇವೆ .ಆಯ್ಕೆ ಯಿಲ್ಲದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿಷಯವು ತಲೆಗೆ ಹತ್ತದಿರುವಾಗ ಅನುತ್ತೀರ್ಣ ಆಗುವ ಅಪನಂಬಿಕೆಯಿಂದಾಗ ಬದುಕು ಭಾರವಾಗಿ ಜೀವನಕ್ಕೆ ಅಂತ್ಯ ಹೇಳಿದ ಉದಾಹರಣೆಗಳನ್ನು ನಾವೆಲ್ಲ ಓದಿದ್ದೇವೆ ಕೇಳಿದ್ದೇವೆವೂ ಕೂಡಾ
ನಮ್ಮ ಬದುಕಿನ ಇನ್ನೊಂದು ಆಯ್ಕೆ ಸ್ನೇಹಿತರು .ಅನೇಕ ಸ್ನೇಹಿತರು ಅನೇಕ ತರ ಇರುವರು .
ಸ್ನೇಹಿತರ ಸ್ವಭಾವ ನಮಗೆ ಗೊತ್ತೇ ಆಗುತ್ತದೆ .ಆತ ನಮ್ಮ ಜೊತೆಗೆ ನಡೆದುಕೊಳ್ಳುವ ರೀತಿ , ಮಾತು, ಸಹಾಯ ನೆರವು ಇವೆಲ್ಲ ನಮಗೆ ಗೊತ್ತಾಗುತ್ತದೆ ತನ್ನ ಒಂದು ಸ್ವಾರ್ಥಕ್ಕಾಗಿಯೋ ,ಹಣಕ್ಕಾಗಿಯೋ ಅಥವಾ ನಮ್ಮನ್ನು ಹಾಳು ಮಾಡಿ ನಮ್ಮ ಗುರಿಯನ್ನು ಕೆಡುಸುವುದಕ್ಕಾಗಿಯೋ, ಆತನ ಮತ್ಸರ ಇವೆಲ್ಲಗಳು ಕ್ರಮೇಣ ನಮಗೆ ಗೊತ್ತಾಗಿ ಮರುಗುತ್ತೇವೆ ಕೊರಗುತ್ತೇವೆ ಕಂಬನಿಗರೆಯುತ್ತೇವೆ ನಾವು ಆಯ್ಕೆಮಾಡಿಕೊಂಡ ಸ್ನೇಹಿತ ಸರಿ ಇಲ್ಲ ಅಂತ. ಮನೆಯಲ್ಲಿ ಬೈಯಿಸಿಕೊಳ್ಳುವ ಪ್ರಸಂಗ ಬಂದು ಬಿಡುತ್ತದೆ.
ಅಂತಹ ದಡ್ಡನ ಜೊತೆಗೆ ನೀನು ಹಂಗ ಆದಿ ನೋಡ ಎಂದು ಹಿರಿಯರು ಅನ್ನುವ ಮಾತುಗಳನ್ನು ನಾವೆಲ್ಲ ಕೇಳಿರುತ್ತೇವೆ. ಸ್ನೇಹದಲ್ಲಿ ಆಯ್ಕೆ ಇರುವುದಿಲ್ಲ ಎನ್ನುವವರು ಇರುವರು . ಎಲ್ಲೋ ದಾರಿಯಲ್ಲೋ ಬಸ್ಸಿನಲ್ಲೋ, ಯಾವುದೋ ಒಂದು ಕಾರ್ಯಕ್ರಮದಲ್ಲೋ ಒಂದು ಮುಗುಳು ನಗೆ ಸ್ನೇಹವನ್ನು ಕೂಡಿಸುತ್ತದೆ ಮತ್ತೆ ಕೆಲವು ದಿನಗಳ ನಂತರ ಅವರನ್ನು ಮರೆತು ಬಿಡುತ್ತೇವೆ . ಬಾಲ್ಯದಲ್ಲಿ ಬೆಸೆದ ಸ್ನೇಹ ಅದು ಆಯ್ಕೆಯಲ್ಲದ್ದು. ಎಲ್ಲರೊಂದಿಗೆ ಆಡಿ ನಲಿಯುವ ಮಧುರ ಸ್ನೇಹ. ಬರು ಬರುತ್ತ ಉತ್ತಮ ಸ್ನೇಹಿತರನ್ನು ಆಯ್ಕೆಮಾಡಿಕೊಂಡು ಕೂಡಿ ಕಲಿಯುತ್ತೇವೆ.
ಬದುಕಿನ ಬಂಡಿಗೆ ಹೆಗಲು ಕೊಡುವ
ವರ ವಧುಗಳ ಆಯ್ಕೆಯೇ ನಮ್ಮ ಬದುಕಿನ ಆಯ್ಕೆಯಲ್ಲಿ ಅತ್ಯಂತ ಮುಖ್ಯ ಘಟ್ಟ.
ನಮ್ಮ ಬದುಕೇ ಈ ಆಯ್ಕೆಯ ಮೇಲೆ ವರ ವಧುಗಳು ಮುಂದಿನ ಬದುಕನ್ನು ಸುಂದರಗೊಳಿಸಿಕೊಂಡು ಹೋಗುವುದು . ಇಡೀ ಕುಟುಂಬದ ಹೊಣೆಯನ್ನು ಹೊತ್ತು ಬದುಕು ಸಾಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮನೆಯಲ್ಲಿರುವ
ಪತಿ ಪತ್ನಿಯ ಜವಾಬ್ದಾರಿ ಯಾಗಿರುತ್ತದೆ . ಇವರಿಬ್ಬರಲ್ಲಿ ಸ್ವಲ್ಪವಾದರೂ ತಪ್ಪೆನಿಸಿದಾಗ ನಮ್ಮ ಆಯ್ಕೆ ತಪ್ಪಾತು ನೋಡಿ .
ಜಗಳ ಗಲಾಟೆ ರಂಪಾಟ ಚೀರಾಟ ಅಳುವುದು ಕರೆಯುವುದು ಕಛೇರಿ ಕೋರ್ಟ ಹೀಗೆ ಮುಂದಿನ ಒಳ್ಳೇಯ ಬದುಕಿಗಾಗಿ ಮುಂದಿನ ಆಗು ಹೋಗುಗಳಿಗೆ ನಮ್ಮ ಆಯ್ಕೆ ತಪ್ಪಾಯಿತು .ಹಾಗೆ ಆಯಿತು ಹೀಗೆ ಆಯಿತೆಂದು ಹೇಳಿ ಬದುಕಿನ ಬಂಡಿಯು ನಡುವಲ್ಲಿಯೇ ಮುರಿದು ಬೀಳುವ ಪ್ರಸಂಗ ಬಂದಿರುವುದನ್ನು ನಾವೆಲ್ಲ ಓದಿದ್ದೇವೆ, ನೋಡಿದ್ದೇವೆ ಮತ್ತು ಕೇಳಿದ್ದೇವೆವು ಕೂಡ. ಮನೆ ನಿಂತಿರುವುದೇ ಈ ಆಯ್ಯೆಯ ಮೇಲೆ ಅದಕ್ಕಾಗಿ ಮುಂದಿನ ಸುಂದರ ಬದುಕಿಗಾಗಿ ನಮ್ಮ ಆಯ್ಕೆಯು ನಮ್ಮ ಕೈಯಲ್ಲಿಯೇ ಇರುವುದು ಎಂಬುವ ಅರಿವು ನಮಗೆಲ್ಲರಿಗೂ ಆಗಬೇಕು.
ತಳಿ ನೋಡಿ ಆಕಳು ಕರು ತರಬೇಕು ಕುಲ ನೋಡಿ ಹೆಣ್ಣ ತರಬೇಕು ಏನ್ನುವ ಹಿಂದಿನ ಹಿರಿಯರ ಮಾತು ಅದೆಷ್ಷು ಸತ್ಯ?
ಏನೇ ಆಗಲಿ ಆಯ್ಕೆ ನಮ್ಮ ಕೈಯಲ್ಲಿಯೇ ಇರುತ್ತದೆ .
ನಾನು ದ್ವಿತೀಯ ಪಿಯುಸಿ ಓದುತ್ತಿದ್ದೆ , ನನಗೆ ನನ್ನ ಕಾಲ ಮೇಲೆ ನಿಲ್ಲಬೇಕು .ಏನಾದರೂ ಸಾಧನೆ ಮಾಡಬೇಕು ಎನ್ನುವ ಗುರಿಗಿಂತ ಮೊದಲು ನಾನು ದ್ವಿತೀಯ ಪಿಯುಸಿ ಪಾಸ್ ಆಗಬೇಕು ಎನ್ನುವ ಗುರಿ ನನಗೆ ಇತ್ತು .
ನಮ್ಮ ಸೋದರತ್ತೆ ನಮ್ಮ ಮನೆಗೆ ಬಂದಿದ್ದರು .ನಮ್ಮ ತಂದೆಯವರಿಗೆ ತಂಗಿ ತಾನೇ ಅರಾಮವಾಗಿ ಊಟ ಗೀಟಾ ಎಲ್ಲಾ ಆಯಿತು .ಅವಾಗ ನಮ್ಮ ಅತ್ತೆ ನಮ್ಮ ತಂದೆಯವರಿಗೆ ಅಣ್ಣಾ ನಾನು ನಿನ್ನ ಮಗಳು ನನ್ನ ಮನೆ ಸೊಸೆ ಆಗಬೇಕು .ನನ್ನ ಮಗನಿಗೆ ಕೊಟ್ಟು ಮದುವೆ ಮಾಡೋಣ ಹೇಗೂ ನನ್ನ ಮಗನಿಗೆ ನೌಕರಿ ಇದೆ ಅಂದಳು .
ಇವಾಗ ಬಂತ ನೋಡ್ರಿ ನಮ್ಮ ತಂದೆಯವರು ಆಯ್ಕೆಯನ್ನು ನನಗೆ ಬಿಟ್ಟರು .ಹುಡುಗಿ ನಾನು ಕಲಿಯುತ್ತೇನೆ ಮುಂದೆ ಓದಬೇಕು ಅಂತಾಳು ಏನ್ ಆಗಬೇಕು ಅಂತಾಳು ಅವಳ ಮೇಲೆ ಬಿಟ್ಟದೆ ಅಂದ್ರು .
ನಮ್ಮ ಅತ್ತೆ ನನ್ನನ್ನು ಬಾರವಾ ನಮ್ಮ ಮನಿಗೆ ನನ್ನ ಸೊಸೆಯಾಗಿ ಅಂದಳು .ಅತ್ತಿ ಈಗ ನಾನು ನಿನ್ನ ಸೊಸೆನ ಆದ್ರ ನಿನ್ನ ಮಗನಿಗೆ ಹೆಂಡತಿಯಾಗಿ ನಿನ್ನ ಮನಿಗೆ ಬರುವುದಿಲ್ಲ ಅಂದು ಮದುವೆಯ ಮಾತಿಗೆ ಬ್ರೇಕ್ ಹಾಕಿದೆ.
ಇಷ್ಟಕ್ಕ ನಮ್ಮ ಅತ್ತೆ ಸುಮ್ಮನಾಗಲಿಲ್ಲ ನೋಡ್ರಿ .
ಸಾವಕ್ಕಾ ನೀನು ಹೇಂಗ ಮುಂದ ಸಾಲಿ ಕಲಿತಿ ಹೆಂಗ್ ನೌಕರಿ ಮಾಡತಿ ನೋಡತ್ತೇನ .
ನನ್ನ ಮಗನಿಗ ಎನ್ ಆಗೈತಿ ಕುಂಟ ಕಿವುಡ ಮೂಗ ಅದಾನು ಯಾಕ ಬೇಡ ಅನ್ನಾತಿ ಅವಾ ನೌಕರಿ ಮಾಡತ್ತಾನವಾ .ಅಂತಾ ಅತ್ತು ಕರೆದು ಜಗಳ ಮಾಡಿ ಹೋದಳು ನಮ್ಮ ಅತ್ತೆ .ಅವಾಗಿನಿಂದ ನಮ್ಮ ಅತ್ತೆಯ ಆ ಮಾತುಗಳು ಮುಂದಿನ ಬದುಕಿನ ಜೀವನದ ಆಯ್ಕೆಯಾದವು. ಅನೇಕ ಉದ್ಯೋಗಿ ವರ ಮಹಾಶಯರು. ಬೇರೆ ಬೇರೆ ಜನರಿಗೆ ಹಚ್ಚಿ ನನ್ನನ್ನು ಮದುವೆಗೆ ಒಪ್ಪಿಸುವ ನಿರ್ಧಾರಕ್ಕೆ ಬಂದರೂ ಕೂಡಾ ಮುಂದೆ ಕಲಿತು ನನ್ನ ಕಾಲ ಮೇಲೆ ನಾನು ನಿಂತುಕೊಂಡ ಮೇಲೆ ತಂದೆಯವರ ಮಾತಿಗೆ ಬೆಲೆ ಕೊಟ್ಟು ನಮ್ಮತಂದೆಯ ಸಂಬಂಧಿಕರ ಮನೆಯ ಸೊಸೆಯಾಗಿ ಬದುಕು ಕಟ್ಟಿಕೊಂಡಿರುವೆನು.
ನಿಮ್ಮ ಬದುಕಿನಲ್ಲೂ ನನ್ನ ಹಾಗೆ ಘಟನೆಗಳು ಜರುಗಿರಬಹುದು. ಆದರೆ ಆಯ್ಕೆಯು ನಮ್ಮ ಕೈಯಲ್ಲಿ ಇದ್ದಾಗ ಮುಂದಿನ ಬದುಕು ಭಾರವಲ್ಲ ಅಲ್ಲವೇ
-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಫಬ್ಲಿಕ್ ಸ್ಕೂಲ್