ಗೌರವದ ದಾದಿಯರು
( ಚಚ್ಚೌಕ ಕವನ. 14×14 )
ನಿಸ್ವಾರ್ಥ ಸೇವೆಯನು ಸಲ್ಲಿಸುತಲಿವರು
ಬಾಳಿನಲಿ ಸಾರ್ಥಕತೆಯ ಹೊಂದಿದವರು
ನೊಂದವರ ಮನಕೆ ಸಾಂತ್ವನವ ನೀಡುತ
ಭರವಸೆಯ ಬೆಳಕನು ತೋರುವವರು..
ಜಾತಿ ಮತ ಪಂಥಗಳ ಭೇದ ಇವರಿಗಿಲ್ಲ
ಬಡವ ಬಲ್ಲಿದರೆಂಬ ಪಕ್ಷಪಾತವಿಲ್ಲ
ಹಗಲಿರುಳು ಕಾಯಕವ ಶ್ರದ್ಧೆಯಿಂದಲಿ
ನಗು ನಗುತ ಮಾಡುವರು ಶುದ್ಧ ಮನದಿ..
ಸ್ವಂತ ಬದುಕಿನ ಆಸೆಗಳ ಬದಿಗಿಟ್ಟು
ಕರ್ತವ್ಯದೆಡೆಗೆ ಸತತ ಗಮನವಿಟ್ಟು
ವೈದ್ಯರ ಜೊತೆ ಜೊತೆಗೆ ಹೆಗಲು ಕೊಡುತ
ದುಡಿದಿಹರು ಪ್ರಾಣವನು ಪಣಕೆ ಇಟ್ಟು..
ರೋಗಿಗಳ ಸೇವೆಯಲಿ ದೇವ ಕಂಡವರು
ಗೌರವಕೆ ಅರ್ಹರು ನಮ್ಮ ಈ ದಾದಿಯರು…!
ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 🙏