ಪ್ರತಾಪಗೌಡ ಪಾಟೀಲ್, ಆರ್.ಬಸನಗೌಡ ತುರ್ವಿಹಾಳ ಭವಿಷ್ಯ ಇಂದು ನಿರ್ಧಾರ
ಮಸ್ಕಿ: ಗಲಾಟೆ ಹಿನ್ನೆಲೆ ನಿಷೇದಾಜ್ಞೆ ಜಾರಿ – ಬೀಗಿ ಪೊಲೀಸ್ ಭದ್ರತೆ
e-ಸುದ್ದಿ ಮಸ್ಕಿ
ಮಸ್ಕಿ: ಮೇ 10 ರಂದು ನಡೆದ ವಿಧಾನಸಭೆಯ ಚುನಾವಣೆಯ ಮತಗಳ ಏಣಿಕೆ ಶನಿವಾರ ನಡೆಯಲಿದ್ದು ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಆರ್. ಬಸನಗೌಡ ತುರ್ವಿವಾಳ ಹಾಗೂ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಭವಿಷ್ಯ ನಿರ್ಧಾರವಾಗಲಿದೆ.
ಮತದಾನದ ದಿನದಂದು ಸಂಜೆ ಹಾಲಿ ಶಾಸಕರ ಸಹೋದರ ಆರ್. ಸಿದ್ದನಗೌಡ ಅವರ ಮೇಲೆ ಹಲ್ಲೆ ನಡೆದಿದ್ದರಿಂದ ಮತ ಏಣಿಕೆಯ ಫಲಿತಾಂಶದ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಮಸ್ಕಿ ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ 144ಕಲಂ ಪ್ರಕಾರ ನಿಷೇದಾಜ್ಞೆ ಜಾರಿಗೊಳಿಸಿ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.
ಗುಂಪು ಗಟ್ಟಿ ತಿರುಗುವುದು, ಮೆರವಣಿಗೆ ಮಾಡದಿರುವುದು ಸೇರಿದಂತೆ ಯಾವುದೇ ಕಾರ್ಯಕ್ರಮಗಳು ಮಾಡಬಾರದು ಹಾಗೂ ನಾಲ್ಕು ಜನಕ್ಕಿಂತ ಹೆಚ್ಚಿನ ಜನರು ಸೇರದಂತೆ ಧ್ವನಿ ವರ್ಧಕದ ಮೂಲಕ ಪೊಲೀಸ್ ಇಲಾಖೆ ಪ್ರಚಾರ ಕೈಗೊಂಡಿದೆ.
ಪ್ರಮುಖ ವೃತ್ತ, ರಸ್ತೆಗಳಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಸವೇಶ್ವರ ನಗರದಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್ ಕಚೇರಿ ಬಳಿ ಕಾಯ್ದಿಟ್ಟ ಮೀಸಲು ಪಡೆಯ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.
ಕ್ಷೇತ್ರದಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು ಸುಳ್ಳು ಸುದ್ದಿ ಹಬ್ಬಿಸಿ ಶಾಂತಿ ಕದಡದಂತೆ ಸರ್ಕಲ್ ಇನ್ ಸ್ಪೆಕ್ಟರ್ ಸಂಜೀವ ಬಳಿಗಾರ, ಸಬ್ ಇನ್ ಸ್ಪೆಕ್ಟರ್ ಸಿದ್ದರಾಮ ಬಿದರಾಣಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕೋರಿದ್ದಾರೆ.
ಚಲಾವಣೆಯಾದ ಮತಗಳ ವಿವರ
ಒಟ್ಟು ಮತದಾರರು 211169
ಚಲಾವಣೆಯಾದ ಮತಗಳು 149956
ಪುರುಷರು 75577 ಮಹಿಳೆಯರು 74377 ಇತರೆ 2
ಶೇಕಡಾವರು ಮತದಾನ 71.01 %