ಮನ

ಕವಿತೆ –

ಮನ

ನಾನರಿತ ಮನದಲ್ಲಿ,
ನಾನುಂಡ ಸ್ಮೃತಿಗಳಿಂದ,
ನಾನರಿಯದ ಚಿತ್ತಾರಗಳಿಂದ,
ನಾನರುಹಿದ  ಭಾವನೆಗಳಿಂದ,
ನಾನಾಗಿರುವ  ನನ್ನನ್ನು,
ನಾನರಿಯಲು ಬಾಳುತಿರುವೆ…

ಕಾಲದ ಮಾಯಾಜಾಲದಲ್ಲಿ,

ಜ್ವಾಲೆ ಹೊರಹೊಮ್ಮಿದರೂ,

ಬೇಲಿಯೊಂದು ಸುತ್ತುವರೆದು,
ನೀಲಿಗಗನದಂಥ  ಮನದಲ್ಲಿ,
ಮಾಲಿನ್ಯವೆಂದೂ ಸೇರದೆ,
ಕಾಲವಾಗಲಿ ತನುಮನಗಳೆರಡೂ….

 

-ಲಕ್ಷ್ಮೀ ಮಾನಸ ಕಾರಟಗಿ

.

Don`t copy text!