e-ಸುದ್ದಿ ಮಸ್ಕಿ
ಮಸ್ಕಿ ತಾಲೂಕಿನ ಪಾಮನಕಲ್ಲುರೂ ಹೊರವಲಯದಲ್ಲಿ ಎನ್.ಆರ್.ಬಿ.ಸಿ ೫ ಎ ಕಾಲುವೆ ಯೋಜನೆಗೆ ಆಗ್ರಹಿಸಿ, ೧೧ ನೇ ದಿನದ ಧರಣಿ ಸ್ಥಳಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಭೇಟಿ ನೀಡಿದರು.
ಸಚಿವ ಲಕ್ಷ್ಮಣ ಸವದಿ ಮತನಾಡಿ ನಾನು ಒಬ್ಬ ರೈತನ ಮಗನಾಗಿ ನಿಮ್ಮೊಂದಿಗೆ ಇರುತ್ತೇನೆ. ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅದಕ್ಕೆ ಸೂಕ್ತ ಪರಿಹಾರ ನೀಡಲು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ನಾನು ಅಧಿಕಾರಿಗಳು ಸಂಬಂಧಿಸಿದ ಸಚಿವರು,ಹಣಕಾಸು ಇಲಾಖೆ,ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ವರದಿ ಪಡೆದು ೫ ಎ ಹೋರಾಟಕ್ಕೆ ಪೂರಕವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಅದಕ್ಕಾಗಿ ರೈತ ಭಾಂದವರಲ್ಲಿ ಕಳಕಳಿಯ ಮನವಿ ಏನೆಂದರೆ ಧರಣಿಯನ್ನು ಇಲ್ಲಿಗೆ ಮೊಟಕುಗೊಳಿಸಿ ಎಂದರು.
ಆದರೆ ರೈತರು ಅದಕ್ಕೆ ಸೊಪ್ಪು ಹಾಕದೆ ನಾವು ಇನ್ನೂ ಹದಿನೈದು ದಿನ ಇಲ್ಲೇ ಧರಣಿ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಹಣ ಮೀಸಲಿಟ್ಟ ಆದೇಶ ಪ್ರತಿ ನೀಡಿದಾಗಲೇ ನಮ್ಮ ಧರಣಿ ಹಿಂಪಡೆಯುತ್ತೇವೆ ಎಂದು ಎಲ್ಲಾ ರೈತರು ಒಗ್ಗಟ್ಟಾಗಿ ತಮ್ಮ ನಿರ್ಧಾರವನ್ನು ತಿಳಿಸಿದರು. ರೈತರು ಭರವಸೆಗೆ ಮಣಿಯಾದ ನಮ್ಮ ಹೋರಾಟ ಹೀಗೆ ಮುಂದುವರೆಯುತ್ತದೆ ಏನಿದ್ದರೂ ಸರಕಾರದ ಆದೇಶ ಪ್ರತಿ ನಮ್ಮ ಕೈ ಸೇರುವವರೆಗೂ ನಾವು ಹಿಂದೆ ಸರಿಯುವ ಮಾತೆ ಇಲ್ಲ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಂಸದ ರಾಜ ಅಮರೇಶ್ ನಾಯಕ, ಸಂಗಣ್ಣ ಕರಡಿ, ದೇವೇಂದ್ರಪ್ಪ, ಮಾಜಿ ಶಾಸಕ ಪ್ರತಾಪ ಗೌಡ, ತಿಪ್ಪರಜು ಹವಾಲ್ದಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರ ಲಕ್ಮೀ, ಚೀಫ್ ಇಂಜಿನಿಯರ್, ರಂಗರಾಮ ಹಾಗೂ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದರು.