ಪಂಪಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ ಉಪನ್ಯಾಸ


ಸಾಹಿತ್ಯ ವೇದಿಕೆ ಕಾರ್ಯಕ್ರಮ
ಮಸ್ಕಿಯಲ್ಲಿ ಇಂದು ಪಂಪಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ ಉಪನ್ಯಾಸ

e-ಸುದ್ದಿ ಮಸ್ಕಿ

ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಮಸ್ಕಿಯ ಬಂಡಾರ ಪ್ರಕಾಶನದ ಸಹಯೋಗದಲ್ಲಿ ಮಸ್ಕಿಯ ಗಚ್ಚಿನಮಠದ ಆವರಣದಲ್ಲಿ ಮೇ೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಪಂಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಂಡಾರ ಪ್ರಕಾಶನದ ಪರಶುರಾಮ ಕೊಡಗುಂಟಿ ತಿಳಿಸಿದ್ದಾರೆ.
ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಯುವ ವಿದ್ವಾಂಸರಾದ ಡಾ.ಜಾಜಿ ದೇವೇಂದ್ರಪ್ಪ ಅವರು ಪಂಪಭಾರತದಲ್ಲಿ ಕರ್ಣನ ಪಾತ್ರ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮಹಾಂತೇಶ ಮಸ್ಕಿಯವರು ವಹಿಸಿಕೊಳ್ಳಲಿದ್ದಾರೆ. ಹಿರಿಯ ಸಾಹಿತಿ ಹಾಗೂ ಆಕಾಶವಾಣಿ ರಾಯಚೂರು ಕೇಂದ್ರದ ನಿರ್ದೆಶಕರಾದ ಡಾ. ಬಿ.ಎಂ. ಶರಭೇಂದ್ರಯ್ಯ, ಪ್ರಚಾರ್ಯ ಡಾ.ಸಿ.ಬಿ. ಚಿಲ್ಕಾರಾಗಿಯವರು ಉಪನ್ಯಾಸಕ್ಕೆ ಪ್ರತಿಕ್ರಿಯೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಸಾಹಿತಿಗಳಾದ ಡಾ. ಚಿದಾನಂದ ಸಾಲಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

Don`t copy text!