ವೈದ್ಯಳಾಗುವ ಕನಸಿಗೆ ಬಡತನ ಅಡ್ಡಿಯಾಗದಿರಲಿ

ವೈದ್ಯಳಾಗುವ ಕನಸಿಗೆ ಬಡತನ ಅಡ್ಡಿಯಾಗದಿರಲಿ

e-ಸುದ್ದಿ, ಮಸ್ಕಿ

ಮಸ್ಕಿ ಪಟ್ಟಣದ ನಾರಾಯಣಪ್ಪ ಸಿಂಗಂಡಿ ಹೊಟೆಲ್ ನಲ್ಲಿ ಸಪ್ಲಯರ್ ಕೆಲಸ ಮಾಡುತ್ತಿದ್ದಾನೆ.
ಇವರ ಪುತ್ರಿ ಕು. ನಾಗರತ್ನ ಸರ್ಕಾರಿ ಕೋಟಾದ ಅಡಿಯಲ್ಲಿ ವೈದ್ಯಕೀಯ- ಎಂಬಿಬಿಎಸ್- ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದಾಳೆ.
ಆದರೆ ನಾಗರತ್ನಳ ಪಾಲಕರಿಗೆ ಮೆಡಿಕಲ್ ಓದಿಸುವಷ್ಟು ಆರ್ಥಿಕ ಸ್ಥಿತಿವಂತರಲ್ಲ. ಓದಲು ಮನೆಯಲ್ಲಿ ಅನುಕೂಲ ಇಲ್ಲದ ಕಾರಣ ಕೈ ಚೆಲ್ಲಿ ಕುಳಿತುಕೊಂಡಿದ್ದರು. ಪರಿಸ್ಥಿತಿ ಕುರಿತು ಆಪ್ತೇಷ್ಟರ ಬಳಿ ಹೇಳಿಕೊಂಡಿದ್ದರು.
ದೇವಾಂಗ ಸಮಾಜದ ಮುಖಂಡರು ತಮ್ಮ ಸಮಾಜದ ಬಡ ವಿದ್ಯಾರ್ಥಿನಿಗೆ ಸಹಾಯ ಮಾಡಲು ಮುಂದೆ ಬಂದು
ಸೋಮವಾರ ೩೦-೧೧-೨೦೨೦ ರಂದು ಬೆಳಿಗ್ಗೆ ೧೧ ಗಂಟೆಗೆ ಕಲ್ಗುಡಿ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಸಮಾಜದ ಸದಸ್ಯರೆಲ್ಲ ಸೇರಿ ಹಲವರು ತಮ್ಮಿಂದ ವೈಯಕ್ತಿಕವಾಗಿ ಕೈಲಾದ ಮಟ್ಟಿಗೆ ಹಣವನ್ನು ಸಂಗ್ರಹಿಸಿ, ಆಕೆಯ ಸದ್ಯದ ವೈದ್ಯಕೀಯ ಶಿಕ್ಷಣದ ಪ್ರವೇಶ ಶುಲ್ಕ ಮತ್ತು ಇತರೆ ವೆಚ್ಚಗಳಿಗಾಗಿ ತುರ್ತಾಗಿ ಬೇಕಾಗಿದ್ದ .೬೫,೫೦೦ ಮೊತ್ತವನ್ನು ನೀಡಿ ಇತರ ಸಮಾಜದವರಿಗೆ ಮಾದರಿಯಾಗಿದ್ದಾರೆ.
ಸಮಾಜದ ಬಂಧುಗಳು ಯಾರಾದರೂ ಆಕೆಯ ವೈದ್ಯಕೀಯ ಶಿಕ್ಷಣಕ್ಕೆ ಸಹಾಯ ಮಾಡುವ ಆಸಕ್ತಿವುಳ್ಳವರು ದೇವಾಂಗ ಸಮಾಜದ ಕಮೀಟಿಯರನ್ನು ಇಲ್ಲವೇ ಆಕೆಯ ಪಾಲಕರನ್ನು ಸಂಪರ್ಕಿಸಬಹುದು.

ಕು.ನಾಗರತ್ನಳನ್ನು ಸಮಾಜದ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿ ಅವಳ ಭವಿಷ್ಯದ ಜೀವನ ಮುಂದೆ ಹಲವಾರು ಜನರಿಗೆ ದಾರಿದೀಪವಾಗಲಿ ಎಂದು ಹಾರೈಸಿದ್ದಾರೆ.
ದೇವಾಂಗ ಸಾಮಾಜದ ಮುಖಂಡರಾದ ಶಿವಶಂಕ್ರಪ್ಪ ಹಳ್ಳಿ, ಅಮರಪ್ಪ ಕೊಪ್ಪರದ,ಹನುಮಂತಪ್ಪ ನಿವೃೃತ್ತ ಶಿಕ್ಷಷಕರು , ಕೊಂಡಕುಂದಿ ವಕೀಲರು, ವಜ್ರದ ಸರ್ ಹಾಗೂ ಇತರರು ಇದ್ದರು.

 

Don`t copy text!