ಬದುಕು ಭಾರವಲ್ಲ ಸಂಚಿಕೆ 25
ದಾನವನಾಗುವೇಯಾ ?
ಇಲ್ಲವೇ ಮಾನವನಾಗುವೇಯಾ ?
ಮನುಷ್ಯ ಸಮಾಜ ಜೀವಿ ಮಾನವೀಯ ಗುಣಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಹೋದರೆ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾದಂತೆ.
ಸತ್ಯ, ನ್ಯಾಯ, ನೀತಿ ,ಧರ್ಮ, ಕರುಣೆ ,ಸಹಕಾರ, ಹೊಂದಾಣಿಕೆ ಗುಣ, ಸಹಾಯ ಗುಣ, ಅಂತಃಕರಣ ಒಲವು ಇವೆಲ್ಲ ಒಬ್ಬ ವ್ಯಕ್ತಿಯ ಒಳ್ಳೇಯ ಗುಣಗಳು .
ಯಾರಿಗಾದರೂ ಸಹಾಯ ಮಾಡಿದರೆ ಆ ಸಹಾಯವನ್ನು ಕೊನೆಯವರೆಗೂ ನೆನಪಿಸಿಕೊಳ್ಳಬೇಕು . ವ್ಯಕ್ತಿಯ ಮನಸ್ಸು ಚಂಚಲವಾಗಿರುತ್ತದೆ .ಆಸೆಯಿಂದ ಕೂಡಿರುತ್ತದೆ.
ಸಿಟ್ಟು ದ್ವೇಷ ,ಆಕ್ರೋಶ, ಆವೇಶ ಅತಿ ಆಸೆ ಅತಿ ಲೋಭ ,ಅತಿ ಮೋಹ ,ಅತಿ ಕಾಮ ಎಲ್ಲ ವೂ ಅತಿಯಾದ ದುರಾಸೆಯ ವ್ಯಕ್ತಿಯ ಗುಣವು ದಾನವನಿಗೆ ಹೋಲಿಸಬಹುದು .
ಮನುಷ್ಯರಲ್ಲಿಯೇ ಎರಡು ವಿಧ ಗಳಿವೆ . ನಿಮ್ಮ ನಿಮ್ಮ ವರ್ತನೆಯ ಮೇಲೆ ಅಥವಾ ನೀವು ಹುಟ್ಟಿದ ಜನ್ಮ ಕುಂಡಲಿ ತೆಗೆದು ನೋಡಿ
ಅದರಲ್ಲಿ ಮನುಷ್ಯ ಗಣ
ಇನ್ನೊಂದು ರಾಕ್ಷಸ ಗಣ
ಎಂದು ಇರುವುದು ಕಂಡು ಬಂದಿದೆ .
ಒಬ್ಬೊಬ್ಬ ರು ಕುಂಡಲಿ ನಂಬದಿದ್ದರೂ ವ್ಯಕ್ತಿಯ ನಡೆ ನುಡಿಯ ಮೇಲೆ ಆತನ ಮಾನವೀಯ ಗುಣ ಗಳ ಮೇಲೆ ವ್ಯಕ್ತಿಯ ಗುಣಗಳನ್ನು ನಿರ್ಧರಿಸಲಾಗುತ್ತದೆ .
ಮಾನವ ಮಾನವೀಯತೆಯಿಂದ ವರ್ತಿಸಬೇಕು .
ಒಳಗೊಂದು ಹೊರಗೊಂದು ಗುಣ ಇರಬಾರದು.
ಸಮಯಕ್ಕೆ ತಕ್ಕಂತೆ ವ್ಯಕ್ತಿ ಬದಲಾದರೂ ಅಂತರಂಗ ಶುದ್ಧ ವಾಗಿರಬೇಕು.
ಗೋಸುಂಬೆಯ ಹಾಗೆ ಬಣ್ಣ ಬದಲಾಯಿಸಬಾರದು
ಒಬ್ಬರಿಂದ ಒಬ್ಬರಿಗೆ ಜಗಳ ಹಚ್ಚಿ ಮೋಜು ನೋಡಬಾರದು
.
ನಂಬಿದ ವ್ಯಕ್ತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳಬೇಕೆ ಹೊರತು ಆಗದವರ ಮಾತುಗಳಿಗೆ ಇನ್ನಷ್ಟು ಬೆಂಕಿಯಲ್ಲಿ ತುಪ್ಪ ಹಾಕುವ ಕೆಲಸ ಮಾಡಬಾರದು.
ಒಬ್ಬ ವ್ಯಕ್ತಿಯು ಬೆಳೆದರೆ ಆತನ ಕಾಲು ಜಗ್ಗುವ ಕೆಲಸ ಮಾಡಬಾರದು .
ಇನ್ನೊಬ್ಬರಿಗೆ ನೀವು ಸಹಾಯ ಮಾಡಲು ಆಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟದ್ದನ್ನು ಮಾತ್ರ ಮಾಡಲು ಹೋಗ್ಬೇಡಿ .ಇನ್ನೊಬ್ಬರನ್ನು ವ್ಯಂಗ್ಯವಾಗಿ ನೋಡಿ ನಗುವುದಾಗಲಿ ಆತನ ಹಿಂದೆ ಅಪಹಾಸ್ಯ ಮಾಡಿ ನಗುವುದಾಗಲಿ ಮಾಡಬೇಡಿ .
ಸ್ತ್ರೀಯರನ್ನು ಯಾವ ಕಾರಣಕ್ಕೂ ನೋವಿಸಬೇಡಿ.
ನೊಂದ ಹೆಣ್ಣಿನ ಕಣ್ಣೀರಿನ ಶಾಪವನ್ನು ಯಾರಿಂದಲೂ ತಪ್ಪಿಸಲಾಗದು.
ನಮ್ಮ ನ್ನು ನೋಡಿ ನಗುವ ಜನರೂ ಇರುವರು .ಬೆನ್ನು ತಟ್ಟಿ ಮುನ್ನಡೆಸುವರೂ ಇರುವರು .
ನಿಮ್ಮ ನಿಮ್ಮ ಬದುಕನ್ನು ನಿಮಗಿಷ್ಟದಂತೆ ಕಟ್ಟಿಕೊಳ್ಳಿ
ಇನ್ನೊಬ್ಬರನ್ನು ಮೆಚ್ಚಿಸೋಕೆ ನಿಮ್ಮತನವನ್ನು ಬಿಟ್ಟು ಕೊಡಬೇಡಿ
ಇನ್ನೊಬ್ಬರಿಗಾಗಿ ನೀವು ಬದಲಾಗಿ ಮೋಸ ಹೋಗ್ಬೇಡಿ
ನಿಮಗಾಗಿ ಬದಲಾಗಿ ನಿಮಗಾಗಿ ನಿಮ್ಮನ್ನು ನಂಬಿದವರ ಕುಟುಂಬಕ್ಕಾಗಿ ಬದುಕಿ
ಕ್ಷಣಿಕ ಸುಖಕ್ಕಾಗಿ ಶಾಶ್ವತವಾದ ಬದುಕನ್ನು ಕಳೆದು ಕೊಳ್ಳಬೇಡಿ.
ನೊಂದವರ ಮನಸ್ಸಿಗೆ ಮತ್ತೆ ಮತ್ತೆ ನೋಯಿಸಿ ಅವಮಾನಿಸಬೇಡಿ .
ಅಂಧರಿಗೆ, ದುರ್ಬಲರಿಗೆ ನಿರ್ಗತಿಕರಿಗೆ ಸಹಾಯ ಮಾಡಿ .ನಿಮಗಾಗದಿದ್ದರೆ ಆಗುವವರನ್ನು ತಡೆಯಬೇಡಿ.
ನಾವೂ ಬದುಕೋಣ ಇನ್ನೊಬ್ಬರನ್ನೂ ಬದುಕಿಸೋಣ
ಇವೆ ಅಲ್ಲವೇ ? ಮಾನವನ ಲಕ್ಷಣ ಇದು ಬಿಟ್ಟು ಮೃಗದಂತೆ. ಆಕಳು ಮೋತಿ ಹುಲಿಯ ಹಾಗೆ ಬದುಕುವುದು .ದಾನವನ ಹಾಗೇ ಅಲ್ಲವೇ ?
ಇಂದಹ ಕ್ರೂರ ಗುಣಗಳಿಂದ ಅಲ್ಲವೇ? ಬದುಕು ಭಾರವಾಗುವುದು
ನಮ್ಮ ನಡೆ ನುಡಿಗಳು ಯಾವತ್ತೂ ಒಂದಾಗಿರಲಿ
ಈ ಭೂಮಿಯ ಮೇಲೆ ನಾವೇಷ್ಷು ದಿವಸ ಇರುತ್ತೇವೆಯೋ ಅಷ್ಟು ದಿವಸ ಒಳ್ಳೆಯದು ಮಾಡಿ ದೇವರಾಗೋಣ .ದೆವ್ವ ಆಗೋಣ ಬೇಡ .ಎನಂತಿರಿ ?
– ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಸರ್ಕಾರಿ ಪದವಿಪೂರ್ವ ಕಾಲೇಜು