ಮಹಾಂತ ಬಂದ
ಮಹಾಂತ ಬಂದ
ದಾರಿಯ ತುಂಬ
ವಚನದ ಹಸಿರನು
ಬಾಳಿನ ಗಿಡದಲಿ
ತುಂಬುತ
ಬಂದ,ಬಂದ,ಬಂದ,ಬಂದ……
ಬೆತ್ತವ ಹಿಡಿದು
ಹಾವುಗೆ ಮೆಟ್ಟಿ
ಖೊಟ್ಟಿ ಗುಣಗಳ
ನೆಲದಾಳಕ್ಕೆ ಒತ್ತಿ
ಆರು ಗುಣಗಳ
ಬೂದಿಯಗೊಳಿಸಿ
ಕಾವಿಯ ಹೊದ್ದು
ಜಗವ ಬೆಳಗಿಸಿ
ಬಂದ, ಬಂದ,ಬಂದ,ಬಂದ……
ಜೋಳಿಗೆ ಚಾಚುತ
ದುರ್ಗುಣಗಳ ಬೇಡುತ
ಹಸನ ಬದುಕಿಗೆ
ವ್ಯಸನವ ಬಿಡಿಸುತ
ಗಿಡಮರಗಳ ಪೂಜೆಯ
ಒಯ್ಯನೆ ಖಂಡಿಸಿ
ಹಡೆದವ್ವನ ಹೊಟ್ಟೆಗೆ
ಅನ್ನವ ತುಂಬಿಸಿ
ಜೀವದ ನೋವಿಗೆ
ಎಳಸದ ದೇವರ
ಭೂತವ ಬಿಡಿಸಿದ
ಜಂಗಮ ಜ್ಯೋತಿ
ಬಂದ,ಬಂದ,ಬಂದ,ಬಂದ……
ಕಲ್ಯಾಣದ ಬಸವನ
ವಾರಸರಾಗಿ
ಶಿವಾನುಭವದಿ
ವಚನವ ಸಾರಿ
ಊರೂರು ತಿರುಗಿದ
ಅಲ್ಲಮರಾಗಿ
ನಿರುತ ಹರಿವರು
ಕೂಡಲದ ಹೊಳೆಯಾಗಿ
ಕೊಳೆಯನು ತೊಳೆಯುತ
ಎಲ್ಲರ ನಗಿಸುತ
ಬಂದ,ಬಂದ,ಮಹಾಂತ ಬಂದ
ಜಗದ ಮೊಗದಲಿ
ಲಿಂಗದ ಕಳೆಯ ಕಂಡ
ಬಂದ,ಬಂದ,ಬಂದ,ಬಂದ
ಮಹಾಂತ ಬಂದ,ಮಹಾಂತ ಬಂದ.
-ಕೆ.ಶಶಿಕಾಂತ
ಲಿಂಗಸೂಗೂರ