💕ಹಕ್ಕಿಗಳು 💕
ಹಕ್ಕಿಗಳು ಹಾರುತೇರುತ
ಛನ್ಡದಿ ಗಗನದಲಿ
ಬಿಳಿಯ ಮೋಡಗಳ ದಾಟುತ
ವೃಂದ ವೃಂದದಿ ನಭದಲಿ.
ನೀಲ ಗಗನದ ಸೊಬಗನು
ಮೆಲ್ಲ ಮೆಲ್ಲಗೆ ಸವಿಯುತ
ಸೃಷ್ಟಿಯ ಈ ಅಂದವನು
ಹೀರಿ ಹೀರಿ ನಲಿಯುತ.
ಹಚ್ಚ ಹಸಿರಿನ ಬನದಲಿ
ಸರ ಸರನೇ ಹಾರುತ
ಕಿಲ ಕಿಲ ಕಲರವದಲಿ
ಸಂಭ್ರಮದಿ ಮೆರೆಯುತ.
ಜುಳು ಜುಳು ಹರಿಯುವ
ತಿಳಿ ನೀರಿನಲಿ ಮೀಯುತ
ಮತ್ತೆ ಮೇಲಕೇರುವವು
ತಮ್ಮ ಗೂಡು ಹುಡುಕುತ.
ಕೃಷ್ಣ ಬೀಡಕರ… ವಿಜಯಪುರ.