ಮನದ ಮಗುವನೊಮ್ಮೆ ಮುದ್ದಿಸು….

ಮನದ ಮಗುವನೊಮ್ಮೆ ಮುದ್ದಿಸು….

ಅಂತರಂಗದಿ ಭಾವದಲೆಗಳ
ಮೆಲ್ಲ ಮೆಲ್ಲನೆ ಬಡಿದೆಬ್ಬಿಸಿ
ಆಟವಾಡುತ ನಲಿಯುವ
ಮನದ ಮಗುವನೊಮ್ಮೆ ಮುದ್ದಿಸು…

ಚಂಚಲತೆಯಿಂದೊಮ್ಮೆ
ಶಾಂತ ಭಾವದಲೊಮ್ಮೆ
ಚೈತನ್ಯ ಚಿಲುಮೆಯಾಗುವ
ಮನದ ಮಗುವನೊಮ್ಮೆ ಮುದ್ದಿಸು…

ಕನಸಿನರಮನೆಗೊಯ್ದು
ರಂಗುಗಳ ಹೊಯ್ದು
ಚೆಲ್ಲಾಟವಾಡಿಸುವ
ಮನದ ಮಗುವನೊಮ್ಮೆ ಮುದ್ದಿಸು….

ಹೃದಯ ವೀಣೆಯ ಮೀಟಿ
ಒಲವ ರಾಗವ ನುಡಿಸಿ
ಪ್ರೇಮಲೋಕಕೆ ಒಯ್ವ
ಮನದ ಮಗುವನೊಮ್ಮೆ ಮುದ್ದಿಸು…

ರಚನೆ: ಹಮೀದಾ ಬೇಗಂ ದೇಸಾಯಿ. ಸಂಕೇಶ್ವರ.

Don`t copy text!