ಹುಡುಗಿ ಓಡಿಹೋದಳು

ಬದುಕು ಭಾರವಲ್ಲ ಸಂಚಿಕೆ 26

ಹುಡುಗಿ ಓಡಿಹೋದಳು

ಜ್ಞಾನದಿಂದಲೇ ಇಹವು
ಜ್ಞಾನದಿಂದಲೇ ಪರವು
ಜ್ಞಾನವಿಲ್ಲದೆ ಸಕಲವು ತನಗಿದ್ದೂ ಹಾನಿಕಾಣಯ್ಯ
ಆಂದರೆ ಶಿಕ್ಷಣ ದಿಂದಲೇ ಅಳಿವು ಉಳಿವು ಎಲ್ಲವೂ ಎಲ್ಲ ಸುಖ ಸಂಪತ್ತು ಇದ್ದರೂ ಶಿಕ್ಷಣ ಇಲ್ಲದಿದ್ದರೆ ಆ ಎಲ್ಲ ಸಕಲ ಸಂಪತ್ತುಗಳು ಶೂನ್ಯ.
ಅನೇಕ ಮಹಾನ್ ವ್ಯಕ್ತಿಗಳು ಅದೆಷ್ಟು ಶಿಕ್ಷಣಕ್ಕಾಗಿ ಹೋರಾಡಿ .ನೊಂದು ಬಳಲಿ ಅವಮಾನ ಅಪಮಾನ ಬಡತನ ಇವುಗಳೆಲ್ಲವನ್ನು ದಿಟ್ಟವಾಗಿ ಎದುರಿಸಿ ಶಿಕ್ಷಣ ಕಲಿತು ಇಡೀ ಜಗತ್ತೇ ಬೆರಗಾಗುವಂತಹ ಅದ್ಭುತ ಜ್ಞಾನ ಸಂಪತ್ತನ್ನು ನಮಗೆ ಕೊಟ್ಟು ಹೋಗಿದ್ದ ಉದಾಹರಣೆಗಳು ನಮಗೆ ಗೊತ್ತು .
ಯಾವ ಒಂದು ಸಮಾಜ ಅಥವಾ ದೇಶ ಮುಂದೆ ಬರಬೇಕಾದರೆ ಅಲ್ಲಿರುವ ಸ್ತ್ರೀಯರಿಗೆ ಮೊದಲು ಶಿಕ್ಷಣ ಕೊಡಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತುಗಳನ್ನು ನಾವಿಂದು ನೆನಪಿಸಿಕೊಳ್ಳಬೇಕು.
ಮಹಾತ್ಮಾ ಗಾಂಧೀಜಿಯವರ ಮೂಲ ಶಿಕ್ಷಣ ಅಂಬೇಡ್ಕರ ಅವರು ಪಟ್ಟ ಕಷ್ಟ. ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ನಿರಂತರ ಹೋರಾಟ .

ಮೊದಲು ಇರುವ ಹಾಗೆ ಶಿಕ್ಷಣ ಇವಾಗ ಇಲ್ಲ ತುಂಬಾ ಬದಲಾವಣೆಯು ಆಗಿದ್ದು ,ಬದಲಾವಣೆಯ ಜೊತೆಗೆ ಸುಧಾರಣೆ ಮತ್ತು ಅಭಿವೃದ್ಧಿ ಆಗಿದೆ .ಎಲ್ಲರೂ ಶಿಕ್ಷಣ ಪಡೆಯುವದಾಗಬೇಕು ಎನ್ನುವುದು ದ್ಯೆಯೋದ್ದೇಶ.

.ಪ್ರತಿ ಮನೆಗಳಲ್ಲಿ ನಾವು ಎಷ್ಟು ಹೆಣ್ಣು ಮಕ್ಕಳಿಗೆ ಅವರ ಇಚ್ಛಿಸದ ಹಾಗೆ ಶಿಕ್ಷಣ ಕೊಟ್ಟಿದ್ದೇವೆ. ಕೊಡುತ್ತಿದ್ದೇವೆ? ಎಂದು ಎಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.? ಎಷ್ಟು ಮಕ್ಕಳು ಅಪ್ಪ ಅಮ್ಮನ ಮಾತುಗಳ ಹೊಡತ ತಿಂದು ಬೈದು ಬಾಸಿಂಗ ಕಟ್ಟಿಸಿಕೊಂಡಿದ್ದಾರೆ .?

ಅದೆಷ್ಟೋ ಹೆಣ್ಣು ಮಕ್ಕಳು ಅರ್ಧ ಶಿಕ್ಷಣ ಕಲಿತು ಕೊರಳಿಗೆ ತಾಳಿ ಕಟ್ಟಿಸಿ ಕೊಂಡಿಲ್ಲ?.

ಕಾಲ ಬದಲಾಗಿದ್ದರೂ ಸುಧಾರಿತ ಸಮಾಜವಾದರೂ ತಾವಾಗಿ ಕಲಿಯುವ ಮಕ್ಕಳು ಅದೆಷ್ಟು ?

ಪಾಲಕರ ವತ್ತಾಯದ ಮೇರೆಗೆ ಕಲಿಯುವ ವಿದ್ಯಾರ್ಥಿಗಳು ಅದೆಷ್ಟು ?

ಪಾಲಕರಿಗೆ ಗೊತ್ತಿಲ್ಲದ ಹಾಗೆ ಅದೆಷ್ಟು ಕಣ್ಣು ಮುಚ್ಚಾಲೆ ದುಷ್ಟ ಚಟ ಬೀರು ,ಬೀಡಿ ,ಸಿಗರೇಟ, ತಂಬಾಕ ಕುಟಕ ,ಚಟಕ್ಕೆ ಬಿದ್ದು ಕಲಿಸುವ ,ತಂದೆ ತಾಯಿಯಗಳು ಗುರುವೇ ಬ್ರಹ್ಮ ವಿಷ್ಣು ಮಹೇಶ್ವರ ಎಂದು ಭಕ್ತಿಯಿಂದ ಕಲಿಯಲು ಬರುವ ಅದೆಷ್ಟು ವಿದ್ಯಾರ್ಥಿಗಳು ?

ಅದೆಷ್ಟು ಮಕ್ಕಳು ಬದುಕು ಭಾರವಲ್ಲವೆಂದು ಶಿಕ್ಷಣ ಕಲಿತು .ಸಮಾಜದಲ್ಲಿ ತಲೆ ಎತ್ತಿ ತಿರುಗಬೇಕು .ಸಾಧನೆ ಮಾಡಬೇಕು ಎನ್ನುವರು ಅದೆಷ್ಷು ?

ತಂದೆ ತಾಯಿ ಬಂದು ಬಳಗವನ್ನು ದಿಕ್ಕರಿಸಿ ಶಿಕ್ಷಣವೇ ನನ್ನ ಬದುಕು ಎಂದು ತಿಳಿದು ಅಲೆದಾಡಿದ ಜೀವಗಳೆಷ್ಷು?
ನಾವು ನೆನಪಿಸಿಕೊಂಡಾಗ ಅರಿವು ಆಗುವುದು .

ಸುಮಾರು 33 ವರ್ಷದ ಹಿಂದಿನ ಘಟನೆ .

ಅವರು ಗುಡ್ಡುಗಾಡಿನ ಜನ ಕಟ್ಟಿಗೆಯನ್ನು ಮಾರಿಯೇ ಬದುಕು. ಸಾಗಿಸುತ್ತಿರುವ ಜನಾಂಗ. ಊರ ಜನರ ಸಂಪರ್ಕ ಬಿಟ್ಟು ದೂರ ಹೋಗಿ ತಮ್ಮ ಬದುಕನ್ನು ಕಟ್ಟಿಕೊಂಡಂತಹ ಕುಟುಂಬ ಲಂಬಾಣಿ ಕುಟುಂಬ. ಲಂಬಾಣಿ ಜನಾಂಗ ಅವರ ಉಡುಗೆ ತೊಡಿಗೆ ಭಾಷೆ ಸಂಪ್ರದಾಯ ಆಚರಣೆ ಆಹಾರ ಬೇರೆ ಬೇರೆ . ಶಿಕ್ಷಣದಿಂದ ದೂರ ಇರುವಂತಹ ಜನಾಂಗ .ಇವಾಗ ಎಲ್ಲ ಸುಧಾರಣೆ ಕಂಡು ಬಂದರೂ ಕೆಲವು ಕುಟುಂಬಗಳು ಇನ್ನೂ ಸುಧಾರಣೆ ಕಾಣಬೇಕಾಗಿದೆ .

ಲಂಬಾಣಿ ಕುಟುಂಬದ ಸದಸ್ಯರು ಕಟ್ಟಿಗೆಯನ್ನು ಮಾರಿ ಬದುಕನ್ನು ಕಟ್ಟಿಕೊಳ್ಳುವ ಈ ಜನಾಂಗ ಇನ್ನೊಬ್ಬರನ್ನು ನೋಡಿ ಅವರಂತೆ ತಾವು ಆಗಬೇಕೆಂದು ಅನುಕರಿಸಿದ ಒಂದು ಕುಟುಂಬದ ಹುಡುಗಿ. ಸುಮಾರು ಹತ್ತು ಹದಿನೈದು ಕಿಲೋಮೀಟರ್ ದೂರದಿಂದ ತನ್ನ ತಾಯಿಯ ತಾಯಿ ಜೊತೆಗೆ ಒಂದು ಒಂದು ಚಿಕ್ಕ ಕಟ್ಟಿಗೆಯ ಹೊರೆಯನ್ನು ತಲೆಯ ಮೇಲೆ ಹೊತ್ತು ತಿರುಗುತ್ತ ಕಟ್ಟಿಗೆ ಮಾರಿ ಬಂದ ಹಣದಿಂದಲೇ ಬದುಕು ಸಾಗಿಸುವ ಕುಟುಂಬ.
ಹುಡುಗಿ ಸುಮಾರು ಏಳು ಎಂಟು ಕಿ ಮಿ ತಾಯಿಯ ಜೊತೆಗೆ ತಲೆಯ ಮೇಲೆ ಕಟ್ಟೆಗೆ ನಿತ್ಯ ಹೊತ್ತು ತಿರುಗಿ ಹೊತ್ತುಕೊಂಡು ಬರುತ್ತಿತ್ತು. ವಾರ ವಾರಕ್ಕೆ ನಮ್ಮಿಂದ ಹಣವನ್ನು ತೆಗೆದುಕೊಂಡು ಹೋಗುತ್ತಿತ್ತು.

ಹುಡುಗಿಯ ಮುಖದಲ್ಲಿ ಒಂದು ರೀತಿಯ ಸಾಧನೆಯ ಕಳೆ ಎದ್ದು ಕಾಣುತ್ತಿತ್ತು. ತದೇಕ ಚಿತ್ತದಿಂದ ನಮ್ಮ ಮನೆಯಲ್ಲಿ ಜೋಡಿಸಿಟ್ಟ ಪುಸ್ತಕಗಳನ್ನು ನೋಡಿದ ಹುಡುಗಿ ಅಕ್ಕ ನನಗೂ ಒಂದು ಪುಸ್ತಕ ಕೊಡು ಅಂದಳು

ನಿನಗೆ ಓದಲಿಕ್ಕೆ ಬರುತ್ತೆ ? ಅಂದೆ. ಇದು ನಡೆದಿದ್ದು ಸುಮಾರು 33 ವರ್ಷಗಳ ಹಿಂದೆ ನಮ್ಮ ಊರಿನಿಂದ ದೂರವಿರುವ ಒಂದು ತಾಂಡಾ ಹೂಲಿಕೇರಿ ತಾಂಡಾ .

ಹುಡುಗಿ ಕೇಳಿದ ಪುಸ್ತಕ ನಾನು ಕೊಡ್ಲೇ ಇಲ್ಲ.
ಅದೇ ಊರಿಗೆ ನಮ್ಮ ಹಿರಿಯ ಅಕ್ಕ ಸುರೇಖಾ ಅಂಗನವಾಡಿ ಟೀಚರ್ ಆಗಿ ಈಗ ನಮ್ಮಕ್ಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ನಾನು ಅವಾಗ 7ನೇ ಇಯತ್ತೆ ಕಲಿಯುತ್ತಿದ್ದೆ. ಬಸ್ಸಿನ ಅನಾನುಕೂಲದಿಂದ ಕಾಲ್ನಡಿಗೆಯಿಂದ ದಿನವೂ ಆ ತಾಂಡಾಕ್ಕೆ ಹೋಗುತ್ತಿದ್ದೆವು .ಅದೇ ಊರಿನಿಂದ ಕಟ್ಟಿಗೆಯನ್ನು ಮಾರಿಕೊಂಡು ಬರುವ ಹುಡುಗಿ ನನಗೆ ಭೇಟಿಯಾಯಿತು.

ಅಕ್ಕ ಆ ಪುಸ್ತಕ ತಂದೆಯಾ ?ಎಂದಳು. ಇಲ್ಲ ಅಂದೆ .ನಿನಗೂ ಓದುವ ಆಸೆ ಇದೆಯಾ ?ಎಂದೆ .

ನಾನೂ ಓದಬೇಕು ! ಎಂದಳು. ಹುಡುಗಿ. ಆದರೆ ನಮ್ಮ ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕೆ ಬೆಳಗಾವಿಗೆ ಹೋದಾಗ ಬಸ್ ನಿಲ್ದಾಣದಲ್ಲಿ ಭೇಟಿಯಾದ ಹುಡುಗಿ ಈಗ ಶಿಕ್ಷಕಿ ಅವಳ ಹಿಂದಿನ ಘಟನೆ ನೋಡಿದ್ರೆ ನಿಜಕ್ಕೂ ಅದ್ಭುತ ಶಾಲೆಗೆ ಕಳಸದೆ ಇರುವ ತಂದೆ ತಾಯಿಗಳು ಕಟ್ಟಿಗೆಯನ್ನು ಮಾರಿಕೊಂಡೇ ಬರಬೇಕು ಇಲ್ಲ ಅಂದರೆ ಬದುಕು ನಡೆಯುವುದು ಕಷ್ಟ.

ನನ್ನ ಪರೀಕ್ಷೆಯು ಸಮೀಪಿಸಿತು ಆ ಹುಡುಗಿ ಕೇಳಿದ ಪುಸ್ತಕ ನನಗೆ ಕೊಡಲು ಆಗಲೇ ಇಲ್ಲ. ಪರೀಕ್ಷೆಯು ಮುಗಿಯಿತು .ಅಕ್ಕಂದಿರ ಮದುವೆಯೂ ಆಯಿತು .

ಅಕ್ಕಳು 10 ನೇ ವರ್ಗದ ಪರೀಕ್ಷೆಯನ್ನು ಬರೆಯಲು ಬೈಲಹೊಂಗಲಕ್ಕೆ ಹೋದಾಗ ಸುದ್ದಿ ಬಂದಿತು ನಮ್ಮ ಅಕ್ಕ ಇನ್ನೂ ಓದುವಾಗಲೇ ಅಂಗನವಾಡಿ ಟೀಚರ ಆಗಲು ಅನುಮತಿಸಿತ್ತು .ಇವಾಗ ತುಂಬಾ ಬದಲಾದ ನಿಯಮಗಳಿವೆ.ಅವಾಗ ಹಾಗೆ ಇರಲಿಲ್ಲ. 3 /4 ಇಯತ್ತೇ ಕಲಿತವರು ಇದ್ದರೆ ಸಾಕು ಉದ್ಯೋಗ ಮನೆಯ ಬಾಗಿಲಿಗೆ ಹುಡಿಕಿಕೊಂಡು ಬರುವ ಕಾಲ ನಮ್ಮ ಮನೆಯಲ್ಲಿ ನಮ್ಮ ತಂದೆಗೆ ಪೋಲೀಸ್ ಇಲಾಖೆ ಮತ್ತು ಮಿಲಿಟರಿ ದೇಶ ಸೇವೆಗೆ ಮನೆಗೆ ಕರೆಯಲಿಕ್ಕೆ ಬಂದಾಗ ನಮ್ಮ ತಂದೆಯವರು ಇನ್ನೂ ಹೇಳುವರು ದನದ ಕೊಟ್ಟಿಗೆಯಲ್ಲಿ ನಮ್ಮ ಅಜ್ಜಿ ಮುಚ್ಚಿಕೊಂಡು ಕೂಡು ಎಂದಿದ್ದು.

ನಮ್ಮ ತಾಯಿಗೆ ಹಾಸ್ಟೇಲ್ದಲ್ಲಿ ಅಡುಗೆಯ ಕುಕ್ಕ ಕೆಲಸ ಕ್ಕೆ ಆರ್ಡರ್ ಬಂದದ್ದು ನಮ್ಮ ಅಜ್ಜಿ ಬೈದು ಆರ್ಡರ್ ಹರಿದೇ ಹಾಕಿ ಹೊರಗ ಹೋಗಿ ಅಡಿಗಿ ಮಾಡುದು ನಮಗೇನ ಬ್ಯಾಡ್ ಮನಿಯಾಗೀನ ಕೆಲಸ ಮೊದಲ ಮಾಡ್ ನೌಕರಿ ಮಾಡತ್ತಾಳಂತ ನೌಕರಿ ಹೊಲದಾಗೀನ ಕೆಲಸ ನಿಮ್ಮ ಅಪ್ಪ ಬಂದ ಮಾಡತ್ತಾನು ?ಅಂತಾ

ನಮ್ಮ ಅಜ್ಜಿ ಪಕ್ಕೀರವ್ವನ ನ ಕಟುಕಿನ ಮಾತುಗಳನ್ನು ನಮ್ಮ ಅವ್ವ ನ ಮೇಲೆ ಅದೇಷ್ಷು ಸಿಟ್ಟು ಇತ್ತೋ ಗೊತ್ತಿಲ್ಲ .

ನಾನು ಚಿಕ್ಕವಳು ಆದರೆ ನಮ್ಮ ಅವ್ವ ತನ್ನ ಸುಖವನ್ನೆಲ್ಲ ಮನಿ ಬಂದಿಗಾಗಿ ತ್ಯಾಗ ಮಾಡಿ ಸತ್ತು ಹೋದಳು.
ತಾನು ಸಾಯುವವರಿಗೆ ಸುಖವೇ ಸಿಗದ ನಮ್ಮ ಅವ್ವ ನನ್ನು ನರಳಿ ನರಳಿಸಿದ್ದು ಇನ್ನೂ ನೆನಪು ನನಗೆ .
ಆದರೆ ನಾನು ಹೇಳುವುದು ಇಲ್ಲಿ ಓಡಿ ಹೋದ ಲಂಬಾಣಿ ಹುಡುಗಿ ಕಥೆ. ಹೇಗೆ ಹೇಗೆ ಹೇಳುವಾಗ ಬೇರೆ ಬೇರೆ ನೆನಪು ಆಗುತ್ತೆ ನೋಡ್ರಿ
.
ಕಟ್ಟಿಗೆ ಮಾರುವ ಚಿಕ್ಕ ಹುಡುಗಿ ಓಡಿ ಹೋದಳೆಂದು. ಊರುಗಳಲ್ಲಿ ಸುದ್ದಿ
ಅಯ್ಯೋ ಅವ್ವಾ ನನಗ ಆ ಕಟ್ಟಿಗೆ ಮಾರುವ ಹುಡುಗಿ ಪುಸ್ತಕ ಕೇಳಿದ್ದಳು ನಾನು ಕೊಡಲೇ ಇಲ್ಲ ಪಾಪ ಎಂದಾಗ. ನಮ್ಮ ತಾಯಿ ಅವಳಿಗೆ ನಿನ್ನ ಪುಸ್ತಕ ಕೊಟ್ಟರೆ ನೀನೇನು ಓದುತ್ತಿದ್ದಿ ಎಂದಳು.

ಹುಡುಗಿ ಎಲ್ಲಿ ಓಡಿ ಹೋಯಿತು .ಯಾರ ಜೊತೆಗೆ ಓಡಿ ಹೋಯಿತು ನನಗೊಂದು ಗೊತ್ತಾಗಲಿಲ್ಲ.

ಸರಿ ನಾನು ಹಾಗೇ ಹಾಗೇ ಓದುತ್ತ ಓದುತ್ತ ಹೋದೆ .
ಇದೇ ವರ್ಷದ ದ್ವಿತೀಯ ಪಿಯುಸಿ ಮೌಲ್ಯಮಾಪನ ಕೆಲಸದ ಮೇಲೆ ಬೆಳಗಾವಿ ಬಸ್ ನಿಲ್ದಾಣದಲ್ಲಿ ಒಬ್ಬಳು ಸುಂದರವಾದ ಹೆಂಗಸ್ಸು ನನ್ನನ್ನೇ ದಿಟ್ಟಿಸಿ ದಿಟ್ಟಿಸಿ ನೋಡುತ್ತಿದ್ದಳು .
ನಾನು ನಮ್ಮ ಮನೆಗೆ ಹೋಗಲು ಕಾಯುತ್ತಿದ್ದೆ .
ಒಮ್ಮೆಲೇ ನನ್ನ ಹಿಂದಿನಿಂದ ಬಂದ ಆ ಹೆಂಗಸ್ಸು ಜೋರಾಗಿ ನನ್ನ ಬ್ಯಾಗ ಕಿತ್ತುಕೊಂಡು ಅದರಲ್ಲಿನ ಒಂದು ಪುಸ್ತಕ ಕಿತ್ತುಕೊಂಡು ತಮಾಷೆ ಮಾಡುತ್ತ. ಯಾರು ನೀನು ಅಂದೆ
.ನನ್ನ ಬಗ್ಗೆ ನಿಮಗೆ ಗೊತ್ತಿಲ್ಲ ನಿಮ್ಮ ಬಗ್ಗೆ ನನಗೆ ಗೊತ್ತು ಅಂದಳು .
ನನಗೆ ಸಿಟ್ಟು ಬರುತ್ತೆ ರಿ ಯಾರ್ರಿ ನೀವ್ ನನ್ನ ಬ್ಯಾಗ್ ಹೀಗೆ ಜಗ್ಗುತ್ತಿರಲ್ಲ ಎಂದೆ.

ಹುಡುಗಿ ಮುಗುಳ್ನಗುತ್ತ ನಮ್ಮ ಊರು ರುದ್ರಾಪೂರ ತಾಂಡಾ ರೀ ನನ್ನ ಅಜ್ಜಿ ಮನ್ಯಾಗ್ ನಾ ಇದ್ದೆ .33 ವರ್ಷದ ಹಿಂದೆ ನೀವು ನಮ್ಮ ತಾಂಡಾಕ್ಕ ಬರುತ್ತಿದ್ದಿರಿ. ನಿಮ್ಮ ಊರಿಗೆ ನಾ ಕಟ್ಟಿಗೆ ಮಾರಕ ಬರತ್ತಿದ್ದೆ…..ಹಳೇಯ ನೆನಪು ನೆನಪಿಸಿದಳು.
ಇವಾಗ ನಾನು ಸ್ಕೂಲ್ ಟೀಚರ್ ಆಗಿ ಸೇವೆ ಸಲ್ಲಿಸುತ್ತಿರುವೆ.
ಓವೋ ಓವೋ ನೆನಪಾಯಿತು .ನೀವು ಓಡಿ ಹೋಗಿದ್ದು .
ನಾನು ಯಾರ ಜೊತೆಗೆ ಓಡಿ ಹೋಗಲಿಲ್ಲ ರೀ ಪುಸ್ತಕದ ಜೊತೆಗೆ ಓಡಿ ಬಂದೆ ರೀ ಕಟ್ಟಿಗೆ ಮಾರಿ ಬಂದ ಹಣದಿಂದ ಪುಸ್ತಕ ಕೊಂಡು ತಂದು ಬಚ್ಚಿಡುತ್ತಿದ್ದೆ ನಾನು ಓದುವುದನ್ನು ನೋಡಿದರ ನಾನು ತಂದ ಪುಸ್ತಕ ಗಳನ್ನು ನನಗೆ ಕೊಡದೇ ಇದ್ದರೆ ಅಂತಾ ತಿಳಿದು ಓಡಿ ಬಂದು ಬಸ್ಸಿನಲ್ಲಿ ಅನಾಥೆ ಎಂದು ಹೇಳಿದ್ದು ನೆನಪು ಅವರು ಏನೇನೋ ಮಾತನಾಡಿ ನನ್ನನ್ನು ಸ್ಕೂಲಿಗೆ ಸೇರಿಸಿದ್ದ ನೆನಪು
ತನ್ನ ಹಿಂದಿನ ನಿಜ ಸಂಗತಿ ಹೇಳಿ ಅವಳು ಬಸ್ ಹತ್ತಿ ಹೋದಳು. ನಾನೂ ಬಸ್ ಹತ್ತಿ ಬಂದೆ …
ಅಂದಿಗೂ ಮತ್ತು ಇಂದಿಗೂ ಎಷ್ಟು ಬದಲಾವಣೆ ಆಗಿದೆ ನೋಡ್ರೀ
ಆ ಕಟ್ಟಿಗೆ ಮಾರುವ ಹುಡುಗಿ ಮುಂದಿನ ತನ್ನ ಸುಂದರ ಬದುಕಿಗಾಗಿ ಮನೆ ಯನ್ನೇ ಬಿಟ್ಟು ಶಿಕ್ಷಣ ಕಲಿಯಲು ಓಡಿ ಹೋದ ಆ ಹುಡುಗಿಯ ಹಾಗೆ ಇಂದಿನ ಯುವಕರು ಕಲಿಯಬೇಕು ಕಲಿಯಬೇಕಾಗಿದೆ ಕೂಡ

. ಶಿಕ್ಷಣ, ಶಿಕ್ಷಕರ ಬಗ್ಗೆಯೇ ಗೌರವ ಭಾವನೆ ಇಲ್ಲದ ಅದೆಷ್ಟೋ ವಿದ್ಯಾರ್ಥಿಗಳಿಗೆ ಮಾದರಿ ಈ ಹುಡುಗಿ.ನಿಜಕ್ಕೂ ಅಪರೂಪ ಅಲ್ಲವೇ .?

ಡಾ ಸಾವಿತ್ರಿ ಮ ಕಮಲಾಪೂರ
ಕವಯತ್ರಿ ಹಾಗೂ ಲೇಖಕಿ

Don`t copy text!