ಜೀವ ಕೊಟ್ಟು ಜೀವ ಉಳಿಸಿದ ಎತ್ತುಗಳು

ಬದುಕು ಭಾರವಲ್ಲ ಸಂಚಿಕೆ 28

 

ಜೀವ ಕೊಟ್ಟು ಜೀವ ಉಳಿಸಿದ ಎತ್ತುಗಳು

ಭಾರತ ಕೃಷಿ ಪ್ರಧಾನವಾದ ದೇಶ . ಹೊಲದಲ್ಲಿ ದುಡಿಯುವವನಿಗೆ ಎರಡು ಎತ್ತುಗಳು ಇದ್ದರೆ ಸಾಕು ಬದುಕು ನಡೆಸಲು
ಇವಾಗಿನ ಪ್ರಸ್ತುತ ಸಂದರ್ಭದಲ್ಲಿ ಎತ್ತು ಗಳು ಮಾಡುವ ಕೆಲಸಗಳನ್ನೆಲ್ಲ ಯಂತ್ರಗಳು ಮಾಡುತ್ತಿವೆ .ಕಾಯಕವೇ ಕೈಲಾಸ ಹೋಗಿ ಇವಾಗ ಕಾಯೋ ದೇವರೇ ಆಗಿದೆ .
ನಾನು ಸೇವೆ ಸಲ್ಲಿಸುವ ಸ್ವಲ್ಪೇ ದೂರದಲ್ಲಿ ಒಂದು ಸಕ್ಕರೆಯ ಕಾರ್ಖಾನೆಯು ಇದೆ ಕಾಲೇಜಿಗೆ ಹೋಗುವ ಮಾರ್ಗದಲ್ಲಿ ಒಂದು ಕಬ್ಬು ತುಂಬಿದ ಚಕ್ಕಡಿ ಅದರ ಮೇಲೆ ಎತ್ತುಗಳ ಒಡೆಯ ಕುಳಿತುಕೊಂಡಿದ್ದ. ಎತ್ತುಗಳಿಗೆ ಮುಂದಕ್ಕೆಎತ್ತಿ ಕಾಲಿಡಲು ಆಗುತ್ತಿಲ್ಲ. ಆ ಎತ್ತುಗಳ ಬಾಯಲ್ಲಿ ಜೊಲ್ಲು ಮತ್ತು ಮೂಗಿನಿಂದ ರಕ್ತ ಸೋರಿ ಬರುತ್ತಿತ್ತು ನಾನು ಸ್ಕೂಟಿಯನ್ನು ನಿದಾನ ಮಾಡಿ ಚಕ್ಕಡಿ ಹಿಂದೆ ಹಿಂದೆ ಹೊರಟೆ ನನ್ನ ಸ್ಕೂಟಿ ಗಾಡಿಗೆ ದಾರಿ ನೀಡಲು ಮತ್ತೆ ಬಲವಾಗಿ ಎತ್ತುಗಳಿಗೆ ಹೊಡೆದೆ ಹೊಡೆದ ಅಯ್ಯೋ ಬಸವಾ ಅಣ್ಣ ಬಸವಣ್ಣ ದಯೆ ಇರಲಿ ಸಕಲ ಪ್ರಾಣಿಗಳಲ್ಲಿ ಅಂದಿದ್ದು ಇದನ್ನು ನೋಡಿಯೇ ಇರಬಹುದಾ?ತಂದೆ ಭಗವಂತ ಎಕಿಷ್ಟು ಹಿಂಸೆ .ಎತ್ತುಗಳಿಗೆ ಬಾಯಿದ್ದರೆ ರೈತನ ಬದುಕು ತುಂಬಾ ದುಸ್ತರ ವಾಗುತ್ತಿತ್ತೇನೋ ಅನಿಸಿತು .ಚಕ್ಕಡಿ ಮುಂದೆ ಹೋಯಿತು ನನ್ನ ಕಾಲೇಜವು ಬಂದಿತು .
ಕಾಲೇಜು ಮುಗಿಸಿ ಮನೆಗೆ ಹೋಗುವ ಸಂದರ್ಭ ಮತ್ತೆ ಎರಡು ಎತ್ತುಗಳ ಚಿತ್ರಣ ಕಣ್ಣಿಗೆ ಬಿತ್ತು ನೋಡ್ರೀ.
ಚಕ್ಕಡಿ ಹೊಡಕೊಂಡು ದಿಬ್ಬ ಏರಲಾಗುತ್ತಿಲ್ಲ ಎತ್ತುಗಳಿಗೆ ಬಾಯಲ್ಲಿ ಜೊಲ್ಲು ಸೋರುತ್ತಿತ್ತು .ಇಬ್ಬರು ಹೆಂಗಸರು ಕೆಳಗೆ ಇಳಿದು ಹೋಗುತ್ತಿದ್ದರು ಒಬ್ಬಾತ ಎತ್ತುಗಳ ಹೆಗಲಿಗೆ ಕಟ್ಟಿದ ನೊಗ ಹಿಡಿದು ಹೊರಟಿದ್ದ ಚಕ್ಕಡಿ ಒಳಗೆ ಚಿಕ್ಕ ಚಿಕ್ಕ ಮಕ್ಕಳು ಒಳಗೆ ದೇವಿ ಯಲ್ಲಮ್ಮನ ಜಗನೋಡಿ ಓ ಹೋ ಇವರು ಯಲ್ಲಮ್ಮನ ಗುಡ್ಡಕ್ಕೆ ಹೋಗುತ್ತಿದ್ದಾರೆ ಎಂದು ಅನಿಸಿತು .
ದೇವಿ ಯಲ್ಲಮ್ಮಳು ಬಂಡಿ ಕಟ್ಟಿಕೊಂಡು ನನ್ನ ದರುಶನ ಮಾಡಿ ಅಂತಾ ಎಲ್ಲೂ ಹೇಳಿಲ್ಲ. ಆದರೆ ಇಂತಹ ಮೂಕ ಪ್ರಾಣಿಗಳಿಗೆ ಏಕೆ ಹೀಗೆ ಎನ್ನುವ ನನ್ನ ಪ್ರಶ್ನೆ ನಿಮಗೂ ಮೂಡಿರಬಹುದು ಅಲ್ಲವೇ ?

ಎತ್ತುಗಳಿಗೆ ಬಾಯಿ ಇದ್ದರೆ ಬಂಡಿಯನ್ನು ಜಗ್ಗಲಾಗುತ್ತಿರಲಿಲ್ಲ ಅಲ್ಲವೇ ?
ಹಬ್ಬ ಹರಿದಿನಗಳಲ್ಲಿ ಮೂಕ ಎತ್ತುಗಳ ಸ್ಪರ್ಧೆ ನಡೆಸುವುದನ್ನು ನಿಲ್ಲಿಸಬೇಕು ನೋಡ್ರೀ .ನಾನು ನನ್ನ ಮಕ್ಕಳನ್ನು ನೋಡಲು ಸ್ಕೂಲಿಗೆ ಹೋಗುವಾಗ ದೂರದ ದಾರಿಯಲ್ಲಿ ಎತ್ತುಗಳ ಓಟದ ಸ್ಪರ್ಧೆಯು ನಡೆದು ತೇಕುತ್ತ ಒಂದು ಚಕ್ಕಡಿ ಎದುರಿಗೆ ಬರುತ್ತಿತ್ತು .ಆ ಎತ್ತುಗಳನ್ನು ನೋಡಿ ನನ್ನ ಕಂಗಳಲ್ಲಿ ಕಂಬನಿ ತುಂಬಿ ಬಂದವು ಇಷ್ಟು ಕೆಟ್ಟು ಆ ಎತ್ತುಗಳ ಬೆನ್ನಿಗೆ ಬಾಸುಂಡೆಗಳು ಮೂಗಿನ ಮೂಗುದಾರ ಹರಿದು ರಕ್ತ ಬರುತ್ತಿದ್ದನ್ನು ಕಂಡು ನಮ್ಮ ಮನೆಯ ಎತ್ತುಗಳ ನೆನಪಾಯಿತು ನೋಡಿ .

ನಾನು 8 ನೇ ತರಗತಿಯಲ್ಲಿ ಓದುವಾಗ ನಮ್ಮ ಮನೆಯಲ್ಲಿ ಕುರುಬರ ಜಾಲಿಕಟ್ಟಿ ಮಹದೇವಪ್ಪ ಹಾಗೂ ಆತನ ಮಗ ಸುರೇಶ ವರ್ಷಕ್ಕೆ ಜೀತಕ್ಕೆ ಇದ್ದರು ವರ್ಷಕ್ಕೆ 3 ಸಾವಿರ 2 ಜೀಲ ಗೋದಿ ಹಾಗೂ 2 ಜೀಲ ಜೋಳಕ್ಕೆ ಜೀತಕ್ಕೆ ತಂದೆ ಮಗ ಇದ್ದರು .ಅನ್ಯರು ನಮ್ಮ ಮನೆಯಲ್ಲಿ ಜೀತಕ್ಕೆ ಇದ್ದದ್ದನ್ನು ಸಹಿಸದವರು ನಮ್ಮ ತಂದೆಗೆ ತುಂಬ ತೊಂದರೆ ಮತ್ತು ಹಿಂನೆ ಕೊಟ್ಟರೂ ನಮ್ಮ ತಂದೆ ದೈರ್ಯದಿಂದಲೇ ಮುಂದೆ ಬಂದು ವೈರಿಗಳ ಮನ ಪರಿವರ್ತನೆಗೊಳಿಸಿದ ನಮ್ಮತಂದೆ ಊರಿನಲ್ಲಿರುವ ಅಂಗವಿಕಲರಿಗೆ ಮನೆಯಿಲ್ಲದವರಿಗೆ ವಿಧವಾ ವೇತನ ಸಮಾಜ ಸೇವೆಯ ಜೊತೆಗೆ ಹೊಲ ಮನೆಯನ್ನು ನೋಡಿಕೊಳ್ಳುವ ನಮ್ಮತಂದೆ ಆದರ್ಶನೀಯ ಆದವರು.
ಜಾಲಿಕಟ್ಟಿ ಮಹದೇವಪ್ಪ ನೀರು ಮೇವು ಎತ್ತುಗಳಿಗೆ ಹಾಕಿದರೆ ಸುಮ್ಮನಿರುತ್ತಿತ್ತು. ಆದರೆ ಆತನ ಮಗ ಸುರೇಶನಿಗೆ ನಮ್ಮ ಎತ್ತು ಹಾಯುತ್ತಿತ್ತು .ನೀಲಕಂಠ ಎನ್ನುವ ಎತ್ತು ಮಾತ್ರ ಹಾಯುತ್ತಿರಲಿಲ್ಲ ನಾವು ನೀರು ಕುಡಿಸಿದರೆ ಕುಡಿಯುತ್ತಿತ್ತು.ಇದರ ಜೊತೆಗಿನ ಇನ್ನೊಂದು ನಮ್ಮ ತಂದೆಯವರನ್ನು ಹಾಗೂ ಜಾಲಿಕಟ್ಟಿ ಮಹದೇವಪ್ಪ
ಹೇಗೂ ರೂಡಿ ಆದ ಮೇಲೆ ದಿನಾಲೂ ಚಕ್ಕಡಿ ಹೂಡಿಕೊಂಡು ಹೊಲಕ್ಕೆ ಹೋಗುವ ಎತ್ತುಗಳಿಗೆ ತಿನ್ನಲು ಮೇವು ಹಾಗೂ ಧಾನ್ಯ ದ ಕೊರತೆ ಉಂಟಾಯಿತು ಭೂಮಿಯ ಲ್ಲಿರುವ ಬೆಳೆ ಸರಿಯಾಗಿ ಕೈ ಸೇರಲಿಲ್ಲ. ದುಡ್ಡಿನ ಬರ ಬಂತು .ಮನೆಯಲ್ಲಿ ನಮ್ಮ ಅಜ್ಜಿ ಫಕೀರವ್ವ ಕಾಯಿಲೆ ಬಿದ್ದಳು .ನಮ್ಮ ತಂದೆ ತಾಯಿಗೆ ಚಿಂತೆ ಸುರುವಾಯಿತು .ಮನೆಯಲ್ಲಿ ದುಡ್ಡಿಲ್ಲ ಆಸ್ಪತ್ರೆಗೆ ತೋರಿಸಲು ಮನೆಯಲ್ಲಿರುವ ಒಂದು ಚೀಲ ಹೆಸರು ಮಾರಿದರು 3 ಸಾವಿರ ಹಣ ಬಂತು ಆದರೂ ಬರ ಎತ್ತಿಗೆ ಆಹಾರವಿಲ್ಲ ಮಾರಿ ಬಿಡೋಣ ಎಂದು ನಿರ್ಧರಿಸಿದರು ಮನಸ್ಸಿಲ್ಲದ ಮನಸ್ಸಿನಿಂದ ಎತ್ತುಗಳನ್ನುಮಾರಿ ಬಿಟ್ಟರು .ಮನೆಯಲ್ಲಿ 27 ವರ್ಷ ದುಡಿದ ಎತ್ತುಗಳು ವಯಸ್ಸಾದ ಎತ್ತುಗಳನ್ನು ಸುಮ್ಮನೆ ಆಹಾರ ವಿಲ್ಲದೇ ಮನೆಯಲ್ಲಿ ಇಟ್ಟುಕೊಂಡು ಏನು ಮಾಡೋಣ ಯಾರಾದರೂ ಆಹಾರ ಹಾಕಿ ಸಾಕುವವರು ಇದ್ದೇ ಇರುವರು ಎಂದು ತಿಳಿದು ನಮ್ಮ ತಂದೆ ತಾಯಿಯವರು ಈ ಎತ್ತುಗಳು ತುಂಬಾ ಶ್ರಮ ಪಟ್ಟು ನಮ್ಮ ಹೊಲದಲ್ಲಿ ದುಡಿದಿವೆ ಆದರೆ ನನ್ನ ತಾಯಿಗೆ ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ತೋರಿಸಲು ಹಣದ ಕೊರತೆಯಿಂದ ನಿಮಗೆ ಎತ್ತುಗಳನ್ನು ಮಾರುತ್ತಿರುವೆ ಎಂದು ಹೇಳಿ ಕೊಟ್ಟಿದ್ದರು ಆದರೆ ಎತ್ತುಗಳನ್ನು ಕೊಂಡಾತ ಒಬ್ಬ ಕಸಾಬ ದನ ಕಡಿಯುವಾತ ಎಂದು ನಮ್ಮ ತಂದೆಗೆ ಕಂಡಿತ ಗೊತ್ತಿರಲಿಲ್ಲ ಅಂತೆ .ಅಯ್ಯೋ ಭಗವಂತ ನನಗೆ ಈಗಲೂ ನಮ್ಮ ಮನೆಯ ಎತ್ತುಗಳ ನೆನಪು ಮೊನ್ನೆ ನಾನು ಊಟ ಮಾಡುವಾಗ ಒಮ್ಮೆಲೇ ನನಗೆ ದುಡಿದ ಎತ್ತುಗಳ ನೆನಪಾಗಿ ಕಂಬನಿ ತುಂಬಿ ಬಂದವು. ಮಕ್ಕಳು ಮಮ್ಮಿ ಯಾಕ ಅಳುತ್ತಿರುವಿ ಅಂದಾಗ ನಮ್ಮ ಮನೆಯ ಎತ್ತುಗಳು ನಮಗೆಲ್ಲ ದುಡಿದು ಬದುಕು ಸಾಗಿಸಿದ ಎತ್ತುಗಳು ನಮ್ಮ ಅಜ್ಜಿಯ ಆರೋಗ್ಯ ಕಾಪಾಡಲು ತಮ್ಮ ಜೀವವನ್ನೇ ಕೊಟ್ಟವು .ನಮ್ಮ ಅಪ್ಪ ಒಬ್ಬ ಕಸಾಬನಿಗೆ ನಮ್ಮ ಎತ್ತುಗಳನ್ನು ಮಾರಿಬಿಟ್ಟರು. ನನಗೇನಾದರೂ ಬುದ್ಧಿ ಇದ್ದರೆ ಇವಾಗಿನ ಹಾಗೆ ನಾನೇನಾದರೂ ಆವಾಗ ಇದ್ದಿದ್ದರೆ ಎನ್ನುವ ದುಃಖ ನನಗೆ ನಮ್ಮ ಎತ್ತುಗಳನ್ನು ಮಾರಲು ಖಂಡಿತ ಕೊಡುತ್ತಿರಲಿಲ್ಲ

ಈ ಸೃಷ್ಟಿಯಲ್ಲಿರುವ ಸಕಲ ಜೀವಿಗಳಿಗೂ ಜೀವ ವಿದೆ ಎಂದು ಸಾರಿದ ಬಸವಾದಿ ಶಿವಶರಣರ ನುಡಿಗಳನ್ನು ನಾವೇಷ್ಷು ಪಾಲಿಸಿಕೊಂಡು ಹೋಗುತ್ತಿದ್ದೇವೆ ಎನ್ನುವ ಅರಿವು ನಮಗಾಗ ಬೇಕಲ್ಲವೇ?

-ಡಾ ಸಾವಿತ್ರಿ ಮ ಕಮಲಾಪೂರ
ಕವಯಿತ್ರಿ ಹಾಗೂ ಲೇಖಕಿಯರು

Don`t copy text!