ವಿದ್ಯುತ್ ಕಣ್ಣಮುಚ್ಚಾಲೆ ಕುಡಿಯುವ ನೀರಿಗಾಗಿ ಹಿರೇ ಓತಗೇರಿ ಗ್ರಾಮಸ್ಥರ ಪರದಾಟ…
e-ಸುದ್ದಿ ಇಳಕಲ್
ಇಳಕಲ್ ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆಯಿಂದ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ಕಂಡು ಬಂದಿತು. ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್
ಇಲಾಖೆಯವರು ಯಾವುದೇ ಮುನ್ಸೂಚನೆ ಇಲ್ಲದೆ ತೆಗೆಯುವುದು ಹಾಕುವುದು ಮಾಡುತ್ತಿದ್ದಾರೆ, ಹೀಗಾಗಿ ವಿದ್ಯುತ್ ಮೇಲೆ ಕುಡಿಯುವ ನೀರು ಅವಲಂಬಿತವಾಗಿದ್ದರಿಂದ ಕುಡಿಯುವ ನೀರಿಗಾಗಿ ಜನರು ಪರದಾಡಿದರು. ಅಲ್ಲದೆ ಕುಡಿಯುವ ನೀರಿಗಾಗಿ ದೂರದ ಇಳಕಲ್ ಹೋಗಬೇಕಾದ ಸ್ಥಿತಿ ಬಂದಿದೆ.
ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸ ಇರುವುದೇ ಇದಕ್ಕೆ ಕಾರಣ.
ವರದಿಗಾರರು; ಶರಣಗೌಡ ಕಂದಕೂರ