ಬದುಕು ಭಾರವಲ್ಲ 29
ಗುರುವಿಗೆ ಗುರು
ಏ ಹಾಯ್ ಗುರು ಹೇಗಿದ್ದೀಯಾ ?ಈ ಶಬ್ದ ನಮ್ಮ ಕರ್ಣಕ್ಕೆ ತಾಗಿದಾಗ ಒಂದು ರೀತಿಯ ವ್ಯಂಗ್ಯ ,ಕುಚೇಷ್ಟೆ, ಕಂಡು ಬಂದರೂ .ಗುರು ಎನ್ನುವ ಎರಡಕ್ಷರದಲ್ಲಿ ಇಡೀ ಬ್ರಹ್ಮಾಂಡವೇ ಅಡಗಿದೆ .
ಗುರುವಿನ ಶಬ್ದ ವಿವರಣೆ ಅದರ ವಿಸ್ತಾರ ದೊಡ್ಡದು ಕೂಡ . ಗುರುವಿನ ಮಹತಿ ಗುರುವಿನ ಅರ್ಥ ಬಸವಾದಿ ಶಿವಶರಣರಲ್ಲಿ ಗುರು ವ್ಯಕ್ತಿಯಲ್ಲ ಅದು ಒಂದು ಶಕ್ತಿ. ನಿನ್ನ ಅರಿವು ನಿನಗೇ ಗುರು ಎಂದು ಸಾರಿ ಹೇಳಿದ ಶಿವ ಶರಣರೆಲ್ಲ ನಮಗೆ ಗುರುಗಳು ತಾನೆ ?
ಅಜ್ಞಾನದ ಮಡುವಲ್ಲಿ ಬಿದ್ದು ವದ್ದಾಡಿ ನರಳಾಡಿದ ಸಮಾಜಕ್ಕೆ ದಿವ್ಯ ಕ್ರಾಂತಿಗೈದು
ಇಡೀ ಜಗತ್ತನ್ನೇ ಬೆಳಗಿದ ವಿಶ್ವಗುರು ಬಸವಣ್ಣ. ಯಾರಿಗೆ ಗೊತ್ತಿಲ್ಲ.
ನಾವು ನೀವುಗಳೆಲ್ಲ ತಿಳಿದುಕೊಂಡ ಗುರುವೇ ಬೇರೆ ತಾನೇ ?
ಒಂದು ಅಕ್ಷರವನ್ನು ಕಲಿಸಿದಾತ ನಮಗೆ ಗುರು . ವಯಸ್ಸು ,ಲಿಂಗ, ಧರ್ಮ, ಜನಾಂಗ ಭೇದ ಅಳಿದು ಬುದ್ಧಿ ಕಲಿಸುವಾತ ನಮಗೆ ಗುರು .
ನಮ್ಮನ್ನು ಹೆತ್ತ ತಂದೆ ತಾಯಿಯೇ ನಮಗೆ ಮೊದಲ ಗುರು ಖಂಡಿತ. ಸತ್ಯ ಅಲ್ಲವೇ ?
ಎಲ್ಲರೂ ನಂಬಲೇ ಬೇಕು .
ಥಾಮಸ್ ಆಲ್ವಾಎಡಿಸನ್ ಯಾರಿಗೆ ಗೊತ್ತಿಲ್ಲ ಇಡೀ ಜಗತ್ತಿಗೆ ಬೆಳಕು ನೀಡಿದ ವ್ಯಕ್ತಿ ತನ್ನ ಸಂಶೋಧನೆಯಲ್ಲಿ ಹಲವು ಬಾರಿ ಪ್ರಯತ್ನ ಪಟ್ಟು ಬಲ್ಬ ನ್ನು ಕಂಡು ಹಿಡಿಯಲು ಕಾರಣ ಎಡಿಸನ್ ತಾಯಿಯೇ ಆಗಿದ್ದಾಳೆ.
ಮಂದ ಬುದ್ಧಿಯ ಹುಡುಗನಿಗೆ ಕಲಿಸಲು ಒಪ್ಪದ ಶಿಕ್ಷಕರು ತನ್ನ ಮಗನಿಗೆ ತಾನೇ ಶಿಕ್ಷಕಿಯಾಗಿ ದೈರ್ಯ ತುಂಬಿ ಬೆಳೆಸಿದ ಮಹಾನ್ ತಾಯಿ .
ಕೆಲವೊಬ್ಬರಿಗೆ ತಾಯಿ ಗುರುವಾಗಿದ್ದರೆ ಇನ್ನು ಕೆಲವೊಬ್ಬರಿಗೆ ತಂದೆ ಗುರು. ಇನ್ನೂ ಕೆಲವೊಬ್ಬರಿಗೆ ತನ್ನ ಗಂಡನೇ ಗುರು ಉದಾ: ಸಾವಿತ್ರಿಬಾಯಿ ಪುಲೆಗೆ ತನ್ನ ಪತಿಯೇ ಗುರು .
ಗುರು ಯಾವತ್ತೂ ಲಘುವಾಗಿ ವರ್ತಿಸಬಾರದು .ತನ್ನ ಘನತೆ ಮತ್ತು ಸ್ಥಾನವನ್ನು ಕಾಪಾಡುವ ಮೂಲಕ ಸುಸಂಸ್ಕೃತ ಸಮಾಜಕ್ಕೆ ಸುಸಂಸ್ಕೃತ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಗುರುವಿನ ಕರ್ತವ್ಯ.
ಗ್ರಹಗಳಲ್ಲಿಯೇ ಗುರು ಗ್ರಹ ಹೇಗೆ ದೊಡ್ಡದೋ ಹಾಗೇ ಸಮಾಜದಲ್ಲಿ ಗುರುವಿನ ಸ್ಥಾನ ದೊಡ್ಡದು ಆ ದೊಡ್ಡ ಸ್ಥಾನವನ್ನು ತಿಳಿದುಕೊಳ್ಳುವ ಬುದ್ಧಿ ನಮಗಿರಬೇಕಾದುದು ಅತೀ ಅವಶ್ಯ.
ಗುರು ಯಾವತ್ತೂ ಸಣ್ಣತನದಲ್ಲಿ ವರ್ತಿಸಬಾರದು .
ನಾನು ಕುದ್ದುಲ್ ರಂಗರಾವ್ ಅವರ ಬಗ್ಗೆ ಪಾಠ ಮಾಡುವಾಗ
ರಂಗರಾವ್ ಅವರ ಹಾಗೇ ಮತ್ತು ಡಾ. ಚೆನ್ನಣ್ಣ ವಾಲೀಕಾರ ಅವರು ಬರೆದ ಪಠ್ಯದಲ್ಲಿ ಬರುವ
ಶಾಸ್ತ್ರೀ ಮಾಸ್ತರರಂತೆ ನಾನೂ ಏನಾದರೂ ಜನೋಪಯೋಗಿ ಕೆಲಸ ಮಾಡಬೇಕು ಅಳಿದು ಹೋಗುವ ಕಾಯ ಉಳಿದು ಬಿಡುವ ನಮ್ಮ ಕಾಯಕ. ಎಂದು ತಿಳಿದು ನಾನು ಕಲಿಸುವ ವಿದ್ಯಾರ್ಥಿಗಳಿಗಳಿಗೆ ವಿದ್ಯೆ ಕಲಿಸುವ ಜೊತೆಗೆ ತಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳುವ ಮಾರ್ಗ ವಿದ್ಯಾರ್ಥಿಗಳೇ ನಮ್ಮ ಮಕ್ಕಳೆಂದು ತಿಳಿದು ವಿದ್ಯೆ ಕಲಿಸಲು ಹೋದಾಗ ಎದುರಾಗುವ ಸಮಸ್ಯೆಗಳನ್ನು ಸವಾಲುಗಳನ್ನು ಸ್ವೀಕರಿಸಿ ಇನ್ನೊಬ್ಬರಿಗೆ ಬದುಕಿನ ಮಾರ್ಗ ತೋರಿದಾಗ ನಮಗಾದ ಮತ್ತು ನಿಮಗಾದ ಅವಮಾನ ಮತ್ತು ಅಪಮಾನದ ಕುಹಕ ನಗೆಗಳನ್ನು ಕಂಡು ಏತಕ್ಕೆ ಬೇಕಪ್ಪ ನಮಗೆ ಊರ ಉಸಾಬರಿ ಎಂದು ಬೇಸರಿಸಿಕೊಂಡಿದ್ದೂ ಉಂಟು .
ನಿಜಕ್ಕೂ ವಿಚಾರಿಸಿದಾಗ ನಮಗೇ ಗೊತ್ತಾಗುತ್ತದೆ .ಯಾವ ಗುರುಗಳು ನಮ್ಮ ಬಗ್ಗೆ ಎಷ್ಟು ಕಾಳಜಿ ಮಾಡುವರು ಎಷ್ಟು ಬೆಂಬಲಾಗಿ ನಿಲ್ಲುವರು ಯಾರು ಎಷ್ಟು ತೆಗಳುವರು ಎಂದು ಇವೆಲ್ಲ ನಮ್ಮ ಬದುಕಿನ ಪಾಠಗಳೆಂದು ತಿಳಿಯಬೇಕಾಗುತ್ತದೆ. ಅನೇಕ ಸಮಾಜ ಸುಧಾರಕರ ಬದುಕಿನಲ್ಲಿ ನಡೆದ ಘಟನೆಗಳು ನಮ್ಮನ್ನು ಜ್ಞಾಪಿಸಿಕೊಳ್ಳುತ್ತವೆ.
ನನಗೆ ಕಲಿಸಿದ ಎಲ್ಲ ಗುರುಗಳಿಗೆ ಭಕ್ತಿ ಪೂರ್ವಕ ಶರಣೆನ್ನುವೆ .
ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತ ರಾಗಿ ,ದೊಡ್ಡವರಾಗಿ ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು .ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು ಆಗ ನನ್ನ ಜನ್ಮ ಸಾರ್ಥಕವಾಗುವುದು .ಎಂದು ಹೇಳಿದ ಬ್ರಾಹ್ಮಣ ಶಿಕ್ಷಕರಾದ ಕುದ್ಮುಲ್ ರಂಗರಾವ್ ರನ್ನು ಹೇಗೆ ಮರೆಯಲು ಸಾಧ್ಯ. ?
ಅಸ್ಪೃಶ್ಯರ ಕಣ್ಣೀರನ್ನು ವರೆಸಿ ತಮ್ಮ ಇಡೀ ಬದುಕನ್ನೇ ಅವರಿಗಾಗಿ ಮುಡಿಪಿಟ್ಟ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ ಗುರುಗಳು
ಮತ್ತೊಮ್ಮೆ ಹುಟ್ಟಿ ಬರಬೇಕಾಗಿದೆ.
ಅವರಿಗಾಗಿ ತ್ಯಾಗ ಮಾಡಿದ ಕುದ್ಮುಲ್ ರಂಗರಾವ್ ಗುರುಗಳನ್ನು ಕಾಣಲು ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರು 1934 ಫೆಬ್ರುವರಿ 24 ರಂದು ರಂಗರಾವ್ ಇರುವ ಮಂಗಳೂರಿನ ಸಂಸ್ಥೆಗೆ ಭೇಟಿ ನೀಡಿ ಅಸೃಶ್ಯತಾ ನಿವಾರಣಾ ಕಾರ್ಯದಲ್ಲಿ ಕುದ್ಮುಲ್ ರಂಗ ರಾವ್ ನಿಜವಾಗಿಯೂ ನನ್ನ ಗುರುಗಳು ಎಂದು ಘೋಷಿಸಿದರು.
ಒಬ್ಬ ಗುರುವಿನ ತ್ಯಾಗ, ಅನುಕಂಪ ಅಷ್ಟೇ ಅಲ್ಲದೇ ಇಡೀ ಬ್ರಾಹ್ಮಣ ವರ್ಗವೇ ಎದುರು ಬಿದ್ದು ಊರ ಹೊರಗೆ ಇಟ್ಟರೂ ದೃತಿಗೆಡದ ಶಿಕ್ಷಕರು ಕುದ್ಮುಲ್ ರಂಗರಾವ್ ಶಿಕ್ಷಕರು .
ಕುದ್ಮುಲ್ ರಂಗರಾವ್ ಅವರ ಸೇವಾಕಾರ್ಯ ಮೆಚ್ಚಿ ಸರ್ಕಾರವು ಕೊಟ್ಟಿದ್ದ ರಾವ್ ಸಾಹೇಬ್
ಎಂಬ ಬಿರುದು ಮತ್ತು ನೂರಾರು ಸೇವಾ ಪದಕಗಳು ತಮ್ಮ ಬಳಿಯೇ ಉಳಿದರೆ ಅಹಂಕಾರ ಸದಾ ಕಾಣಬಹುದು ಎಂದು ಭಾವಿಸಿ ಎಲ್ಲಾ ಬಿರುದು ,ಪದಕ,ಪ್ರಶಸ್ತಿ ಪತ್ರಗಳನ್ನು ಬೆಂಕಿಗೆ ಹಾಕಿ ಸುಟ್ಟರು .
ನಮ್ಮನ್ನು ನಾವೇ ಪ್ರಶ್ನಿಸಿ ಕೊಂಡಾಗ ನಾವು ಎಷ್ಟು ಸಣ್ಣವರು ಎನ್ನುವ ಅರಿವು ನಮಗಾಗುವುದು ಅಲ್ಲವೇ ?
ಇಡೀ ಸಮಾಜವೇ ಎದುರು ಬಿದ್ದರೂ ಸೆಗಣಿ ಕಲ್ಲು ಎಸೆದು ಅವಮಾನ ಮಾಡಿದರೂ ದೈರ್ಯದಿಂದ ಮುನ್ನುಗ್ಗಿ ಶಾಲೆಯನ್ನು ತೆರೆದು ವಿದ್ಯೆ ಕಲಿಸಿದ ಸಾವಿತ್ರಿಬಾಯಿ ಪುಲೆ ಯವರ ಕಳಕಳಿ ದೈರ್ಯ ನಮಗೆಲ್ಲ ಅನುಕರಣೀಯ ಅಲ್ಲವೇ ?
ವಿದ್ಯಾರ್ಥಿಗಳ ಬೆನ್ನು ಹತ್ತಿ ಕರೆದು ವಿದ್ಯೆ ಕಲಿಸುವ ಇಂದಿನ ಶಿಕ್ಷಕರು ಇದ್ದರೆ ,
ಗುರುಗಳ ಬೆನ್ನು ಹತ್ತಿ ಕಾಡಿ ಬೇಡಿ ಜೀವನದ ಅನೇಕ ನೋವುಗಳನ್ನು ಎದುರಿಸಿ ವಿದ್ಯೆ ಕಲಿತ ಭಾರತದ ಸಂವಿಧಾನ ಶಿಲ್ಪಿ .ಡಾ ಬಿ ಆರ್ ಅಂಬೇಡ್ಕರ ಅವರು
ನಿಜಕ್ಕೂ ಇಂಥಹ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗಳು ಮತ್ತೆ ಮತ್ತೆ ಈ ಭೂಮಿಯ ಮೇಲೆ ಹುಟ್ಟಿ ಬರಬೇಕಾಗಿದೆ.ಅಲ್ಲವೇ ?
ಗುರುಗಳೆಂದು ನಂಬಿಸಿ ಒಪ್ಪಿಸಿ ಮೋಸ ಮಾಡುವ ಗುರುಗಳನ್ನು ಅದೆಷ್ಷು ಕಂಡಿಲ್ಲ ಕೇಳಿಲ್ಲ. ?
ವಿದ್ಯೆ ಕೊಡುವ ನೆಪದಲ್ಲಿ ನಿದ್ದೆ ಗುಳಿಗೆ ಕೊಟ್ಟು ವದ್ದಾಡಿದ ಮುದ್ದುಮಕ್ಕಳನ್ನು ಕಂಡಿಲ್ಲ ?
ಅದೇಷ್ಷು ಅಮಾಯಕರು ಮೋಸ ಹೋಗಿಲ್ಲ .?
ಅದೆಷ್ಷು ಗುರುಗಳು ಸಮಾಜದ ಉದ್ಧಾರಕ್ಕಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟಿಲ್ಲ?
ಅದೇಷ್ಟು ಗುರುಗಳು ತಮ್ಮ ಆಸೆ ಆಮಿಷ ತೊರೆದು ಹಗಲಿರುಳು ದುಡಿದಿಲ್ಲ ?
ಸಮಾಜದಲ್ಲಿ ನೊಂದು ಬೆಂದು ಜೀವ ಸವೆಸಿ ಸಮಾಜದ ಜನತೆಗಾಗಿಯೇ ತಮ್ಮ ಬದುಕು ಮೀಸಲೆಂದು ಅದೇಷ್ಟು ಗುರುಗಳು ಮುಂದಡಿ ಇಡುತ್ತಿದ್ದಾರೆ ಎಂದು ನಾವೆಲ್ಲ ತಿಳಿಯಬೇಕಾಗಿದೆ ಅಲ್ಲವೇ ?
ಇಂದಿನ ಪ್ರಸ್ತುತ ಅತೀ ಹಿಂದುಳಿದ ಹಳ್ಳಿಯ ಕುಟುಂಬದಲ್ಲಿರುವ ಮಕ್ಕಳಿಗೆ ವಿದ್ಯೆ ಕಲಿಯುವುದು ಪೋಷಕರಿಗೆ ಮಕ್ಕಳನ್ನು ಕಲಿಸುವುದು ಬದುಕೇ ಭಾರವಾದಂತೆ
ಭಾರವಾದ ಅವರ ಬದುಕನ್ನು ಹಗುರ ಮಾಡುವುದು ಇಂದಿನ ಗುರುವರ್ಯರ ಕೆಲಸ ಅಲ್ಲವೇ ?
–ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ