ಹೊಸ ಬೆಳಕು

ಹೊಸ ಬೆಳಕು

ಮೂಡಿಹುದು ಇಂದು
ಎಲ್ಲೆಡೆ ಹೊಸ ಬೆಳಕು
ಜ್ಞಾನ ಮಂದಿರದಲ್ಲಿ
ಚಿಣ್ಣರ ನಗುಬೆಳಕು..

ಶಾರದೆಯ ಸನ್ನಿಧಿಗೆ
ಮಕ್ಕಳ ಕಲರವ ಸ್ತುತಿಯು
ಅಕ್ಷರದ ಅಂಗಳದಲಿ
ಉಜ್ವಲದ ಭವಿಷ್ಯವು..

ಕರಗಿ ಹೋದವು ಎಲ್ಲ
ಕಾಳ ದಿನ ರಾತ್ರಿಗಳು
ಉಲ್ಲಾಸ ಸಂತಸದ
ಮರಳಿದವು ಗಳಿಗೆಗಳು..

ಅಂಜಿಕೆಯು ಇನ್ನಿಲ್ಲ
ಧೈರ್ಯ ಒಂದೇ ಅಸ್ತ್ರ
ನಿಯಮ ಪಾಲನೆ ನಮ್ಮ
ಆರೋಗ್ಯದ ಶಕ್ತಿ-ಶಸ್ತ್ರ..!

ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ 

Don`t copy text!