ಪರಿಹಾರ ವಿತರಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್…
e-ಸುದ್ದಿ ವರದಿ:ಇಳಕಲ್
ಇಲಕಲ್ (ಬೆನಕನಡೋಣಿ): ತಾಲೂಕಿನ ಬೆನಕನಡೋಣಿ ಗ್ರಾಮದಲ್ಲಿ ರೈತ ಮಹಿಳೆ ಶ್ರೀಮತಿ ವಿಜಯಲಕ್ಷ್ಮೀ ನಾಗಪ್ಪ ಹೆರಕಲ್ ಇವರು ( 36) ಹೋಲದಲ್ಲಿ ಕೆಲಸಮಾಡಿ ಮನೆಗೆ ಬರುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದರು.
ಈ ಸುದ್ದಿ ತಿಳಿದ ಶಾಸಕ ವಿಜಯಾನಂದ ಕಾಶಪ್ಪನವರ್ ತಾಲೂಕಾ ದಂಡಾಧಿಕಾರಿಗಳ ಮೂಖಾಂತರ ಮಾಹಿತಿ ಪಡೆದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತುರ್ತು 5 ಲಕ್ಷ ಪರಿಹಾರದ ಚೆಕ್ ಅನ್ನು ಸರಕಾರದಿಂದ ನೀಡಿದರು. ಅಲ್ಲದೇ ಇದೇ ಸಂದರ್ಭದಲ್ಲಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ವರದಿಗಾರರು: ಶರಣಗೌಡ ಕಂದಕೂರ