ಗಝಲ್
ಇತರರ ಭಾವನೆ ಗೌರವಿಸದೆ ಗೆಲುವಿನೆಡೆ ನಡೆಯುವುದು ಹೇಗೆ
ಆತುರದ ಕಾಮನೆ ದೂರ ಸರಿಸಿ ಅನುರಾಗವ ಪಡೆಯುವುದು ಹೇಗೆ.
ಪರಸ್ಪರ ಸಿಹಿ ಮಾತುಗಳಿಂದ ಎಲ್ಲರ ಹೃದಯ ವೀಣೆ ಮಿಡಿಯಬಲ್ಲದಲ್ಲವೆ
ಅಪಸ್ವರದ ಕಹಿಯ ರಸವನು ನುಂಗಲಾರದೆ ತಡೆಯುವುದು ಹೇಗೆ.
ನೀತಿಯಿಂದ ತಾನೆ ಬಂಗಾರದ ಬದುಕು ಬೆಸೆಯಲು ಸಾದ್ಯವು ಕೇಳು
ಭೀತಿಯ ನೋವು ಮರೆತು ಮನವು ಅರಳುವದ ಕಡೆಯುವುದು ಹೇಗೆ.
ರೀತಿ ರಿವಾಜು ಮಾನವನ ಎದೆಯಲಿ ಇರದಿರೆ ನಾಶವು ಕಟ್ಟಿಟ್ಟಬುತ್ತಿ
ಛಾತಿಯುಳ್ಳವ ಬಂದದ್ದೆಲ್ಲಾ ಸಹಿಸುತ ಮುನ್ನಡಿ ಇಡುತ ಹೊಡೆಯುವುದು ಹೇಗೆ
ಸೋಲನು ಕೂಡ ಆಸ್ವಾದಿಸಬಹುದೆಂಬ ಪಾಠವನು ಕಲಿಸಿಬಿಡು ಜಯಾ
ಕಾಲನವನು ಒಂದೆತರಹ ಸದಾ ಇರಲೇಬೇಕೆಂಬ ದಿಟವ ತೊಡೆಯುವುದು ಹೇಗೆ
–ಜಯಶ್ರೀ ಭ ಭಂಡಾರಿ.
ಬಾದಾಮಿ