ಸಾಹಿತ್ಯ ಸಂಭ್ರಮ ಯಶಸ್ವಿ ಕಾರ್ಯಕ್ರಮ. ೧ ಲಕ್ಷ ಜನರ ವೀಕ್ಷಣೆ ದಾಖಲೆ
e-ಸುದ್ದಿ, ಮಸ್ಕಿ
ಮಸ್ಕಿಯ ಅಕ್ಷರ ಸಾಹಿತ್ಯ ವೇದಿಕೆ ಮತ್ತು ಬಂಡಾರ ಪ್ರಕಾಶನ ಎರಡು ಸಂಸ್ಥೆಗಳು ಜೊತೆಗೂಡಿ ಕೊಂಡು ನವಂಬರ್ ತಿಂಗಳಿನಲ್ಲಿ 30 ದಿನಗಳವರೆಗೆ ನಿಜ ಅರ್ಥದಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ನವಂಬರ್ ತಿಂಗಳ ಅಂದರೆ ಕೆಲವೇ ಕೆಲವು ಕಾರ್ಯಕ್ರಮಗಳನ್ನು ಮಾಡುವ ರಾಜ್ಯೋತ್ಸವ ಅನ್ನುವಂಥ ಭಾವನೆ ಇದುವರೆಗೆ ಇತ್ತು.
ಆದರೆ ಅಕ್ಷರ ಸಾಹಿತ್ಯ ವೇದಿಕೆಯ ಗುಂಡುರಾವ್ ದೇಸಾಯಿ ಮತ್ತು ಭಂಡಾರ ಪ್ರಕಾಶನ ಸಂಸ್ಥೆಯ ಪರಶುರಾಮ ಕೋಡಗುಂಟಿ ಅವರ ಜೊತೆಗೆ ಸಾಹಿತಿ ಮಹಾಂತೇಶ ಮಸ್ಕಿ, ಡಾಕ್ಟರ್ ಶಶಿಕಾಂತ್ ಕೆ. ಲಿಂಗಸ್ಗೂರು ಸೇರಿಕೊಂಡು ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಅಂತರಜಾಲದಲ್ಲಿ ಆಯೋಜಿಸಿ ಒಂದು ತಿಂಗಳವರೆಗೆ ನಲವತ್ತಕ್ಕೂ ಹೆಚ್ಚು ವಿದ್ವತ್ ಪೂರ್ಣ, ಮಹತ್ವವಾದ ವಿಚಾರಗಳ ಉಪನ್ಯಾಸವನ್ನು ಕನ್ನಡದ ಮನಸುಗಳಿಗೆ ವಿಶಿಷ್ಟವಾಗಿ ತಲುಪಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಒಂದು ತಿಂಗಳಿನಲ್ಲಿ ಅಂತರ್ಜಾಲದ ಮೂಲಕ ಎರಡು ಲಕ್ಷ ಜನರಿಗೆ ಫೇಸ್ಬುಕ್ ಮುಖಾಂತರ ಪೋಸ್ಟ್ಗಳನ್ನು ತಲುಪಿದ್ದು ಇದರ ಹೆಗ್ಗಳಿಕೆ. ಒಂದು ಲಕ್ಷಕ್ಕೂ ಜನರು ಉಪನ್ಯಾಸ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿ ಯಶಸ್ಸನ್ನು ಕಂಡಿದ್ದಾರೆ.
ಪ್ರತಿದಿನ ಸಂಖ್ಯೆ 7 ಗಂಟೆಯಿಂದ 8.30 ರವರೆಗೆ ಸುಮಾರು ಒಂದು ಗಂಟೆಯಿಂದ ಒಂದುವರೆ ಗಂಟೆ ವರೆಗೆ ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ಮಾಡುವ ಮೂಲಕ ಲಕ್ಷಾಂತರ ಜನರು ಉಪನ್ಯಾಸ ಕೇಳಿದ್ದಾರೆ.
ಪ್ರತಿದಿನ ಕಾರ್ಯಕ್ರಮ ನಡೆಸಬೇಕಾದರೆ ಸಂಘಟಕರಿಗೆ ವಿಶೇಷ ಅತಿಥಿಗಳನ್ನು ಕೂಡಿಸುವುದು, ಸಾರ್ವಜನಿಕರನ್ನು ಸೇರಿಸಿ ಕಾರ್ಯಕ್ರಮವನ್ನು ನೆರವೇರಿಸುವುದು ಅದರ ಕಷ್ಟ ಮಾಡಿದವರೇ ಬಲ್ಲರು. ಆದರೆ ಅಂತರ್ಜಾಲದ ಮೂಲಕ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಲಕ್ಷಾಂತರ ಜನರಿಗೆ ತಕ್ಷಣವೇ ಮುಟ್ಟಿಸುವ ಕೆಲಸ ಬಹಳ ಸುಲಭವಾದುದು ಮತ್ತು ಪ್ರಮುಖವಾದುದು ಎಂಬುದನ್ನು ಅಕ್ಷರ ಸಾಹಿತ್ಯ ವೇದಿಕೆ ಮತ್ತು ಭಂಡಾರ ಪ್ರಕಾಶನ ಕರೊನಾ ಕಾಲ ಘಟ್ಟದಲ್ಲಿ ಮಾಡಿ ತೊರಿಸಿದ್ದಾರೆ.
ಇಡೀ ಕರ್ನಾಟಕದಲ್ಲಿ
ಮೊಟ್ಟ ಮೊದಲ ಬಾರಿಗೆ ಒಂದು ತಿಂಗಳ ಪರಿಯಂತರವಾಗಿ ಯಾವುದೇ ಅಡೆತಡೆಗಳಿಲ್ಲದೆ ಅನುಚಿತವಾಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದ ಕೀರ್ತಿ ಇವರಿಗೆ ಸಲ್ಲುತ್ತದೆ.
————————————————–
ಪ್ರತಿದಿನ ನಡೆದ ಉಪನ್ಯಾಗಳು, ಅದರ ವಿಷಯಗಳು, ಮಾತನಾಡಿದ ಉಪನ್ಯಾಸಕ ವಿವರ ಈ ಕೆಳಗಿನಂತೆ ಇದೆ.
ಅಂತರ್ಜಾಲದ ಅಂಗಳದಲ್ಲಿ
ಅಕ್ಷರ ಸಾಹಿತ್ಯ ಸಂಭ್ರಮ
ಅಕ್ಷರವೆಂಬುದು ಶಾಶ್ವತ ಸತ್ಯದ ಮೊಳಕೆ- ಜಂಬಣ್ಣ ಅಮರಚಿಂತ
೨೦೨೦ರ ನವೆಂಬರ್ ೧ ರಿಂದ ನವಂಬರ್ ೩೦ ರವರೆಗೆ
(ಪ್ರತಿದಿನ ಸಂಜೆ ೭.೦೦ ರಿಂದ ೭.೪೦ ರವರೆಗೆ)
ದಿನಾಂಕ:೦೧.೧೧.೨೦೨೦, ರವಿವಾರ
ಉದ್ಘಾಟನೆ ಹಾಗೂ ಉಪನ್ಯಾಸ: ಪ್ರೊ.ಚಂದ್ರಶೇಖರ ವಸ್ತ್ರದ ಹಿರಿಯ ಸಾಹಿತಿಗಳು ಗದಗ
ವಿಷಯ:ಹಳಗನ್ನಡ ಓದು
ಕವಿ ಸಮಯ: ರೇಣುಕಾ ಕೋಡಗುಂಟಿ
ಸ್ವಾಗತ: ಗುಂಡುರಾವ್ ದೇಸಾಯಿ, ಪ್ರಾಸ್ತಾವಿಕ ನುಡಿ: ಮಹಾಂತೇಶ ಮಸ್ಕಿ, ಮುಮ್ಮಾತು:ಡಾ.ಶಶಿಕಾಂತ ನಿರ್ವಹಣೆ: ವಿದ್ಯಾವತಿ ವನಕಿ
————
ದಿನಾಂಕ:೦೨.೧೧. ೨೦೨೦ ಸೋಮವಾರ
ಉಪನ್ಯಾಸ:ಡಾ.ಶೀಲಾದಾಸ, ಹಿರಿಯ ದಾಸ ಸಾಹಿತ್ಯ ವಿದ್ವಾಂಸರು. ರಾಯಚೂರು
ವಿಷಯ: ದಾಸಸಾಹಿತ್ಯದಲ್ಲಿ ಜೀವನ ಸಾಮರಸ್ಯ
ಕವಿಸಮಯ: ರವಿಕುಮಾರ ಹಂಪಿ
ನಿರ್ವಹಣೆ: ಪ್ರಭುದೇವ ಸಾಲಿಮಠ
———————-
ದಿನಾಂಕ:೦೩.೧೧.೨೦೨೦, ಮಂಗಳವಾರ
ಉಪನ್ಯಾಸ:ಡಾ.ಶಶಿಕಾಂತ ಕೆ. ಹಿರಿಯ ಸಾಹಿತಿಗಳು ಲಿಂಗಸೂಗೂರು
ವಿಷಯ: ತೊಂಟದಾರ್ಯಮಠ ಹಾಗೂ ಕನ್ನಡ
ಕಥಾ ಸಮಯ:ಭೀಮೋಜಿರಾವ್ ಜಗತಾಪ
ನಿರ್ವಹಣೆ: ಸೂಗೂರೇಶ ಹಿರೇಮಠ
—————
ದಿನಾಂಕ:೦೪.೧೧.೨೦೨೦ , ಬುಧವಾರ
ಉಪನ್ಯಾಸ:ರಮೇಶಬಾಬು ಯಾಳಗಿ ಸಾಹಿತಿಗಳು ಮಾನ್ವಿ
ವಿಷಯ: ಜಾನಪದ ತ್ರಿಪದಿಗಳ ಪ್ರಸ್ತುತತೆ
ಕಥಾಸಮಯ:ಮುದಿರಾಜ ಬಾಣದ
ನಿರ್ವಹಣೆ: ಪರಶುರಾಮ ಕೆ.
——————
ದಿನಾಂಕ:೦೫.೧೧.೨೦೨೦, ಗುರುವಾರ ಉಪನ್ಯಾಸ:ಮಂಡಲಗಿರಿ ಪ್ರಸನ್ನ ಹಿರಿಯ ಸಾಹಿತಿಗಳು ರಾಯಚೂರು
ವಿಷಯ:ವೃತ್ತಿ – ಪ್ರವೃತ್ತಿ
ಕವಿಸಮಯ: ಸುರೇಶ ರಾಜಮಾನೆ, ಡಾ.ಶರೀಫ್ ಹಸಮಕಲ್,
ನಿರ್ವಹಣೆ: ವರದೇಂದ್ರ ಕೆ.
———————
ದಿನಾಂಕ:೦೬.೧೧.೨೦೨೦, ಶುಕ್ರವಾರ
ಉಪನ್ಯಾಸ:ತಮ್ಮಣ್ಣ ಬೀಗಾರ ಸಿದ್ದಾಪುರ, ಹಿರಿಯ ಮಕ್ಕಳ ಸಾಹಿತಿಗಳು
ವಿಷಯ: ಮಕ್ಕಳ ಕಥೆಗಳಲ್ಲಿ ಹೊಸತು
ಮಕ್ಕಳ ಕಥಾ ಸಮಯ: ವೆಂಕಟೇಶ ಚಾಗಿ,ಸೋಮು ಕುದರಿಹಾಳ
ನಿರ್ವಹಣೆ:ರವಿರಾಜ ಸಾಗರ
———————-
ದಿನಾಂಕ:೦೭.೧೧.೨೦೨೦. ಶನಿವಾರ (ಸಮಯ: ಸಂಜೆ ೭.೦೦ ರಿಂದ ೮.೦೦ ರವರೆಗೆ)
ಉಪನ್ಯಾಸ:ಡಾ.ಬಸವಲಿಂಗ ಸೊಪ್ಪಿಮಠ, ಹಿರಿಯ ವಿದ್ವಾಂಸರು
ವಿಷಯ: ವಚನ ಸಾಹಿತ್ಯದಲ್ಲಿ ತಾತ್ವಿಕತೆ
ಉಪನ್ಯಾಸ:ಡಾ.ಈರಮ್ಮ ಹಿರೇಮಠ ಉಪನ್ಯಾಸಕರು
ವಿಷಯ: ವಚನಕಾರ್ತಿಯರ ಹಿರಿಮೆ
ನಿರ್ವಹಣೆ: ರಾಜೇಶ್ವರಿ ಹಿರೇಮಠ
——————–
ದಿನಾಂಕ:೦೮.೧೧.೨೦೨೦, ರವಿವಾರ (ಸಮಯ: ಸಂಜೆ ೭.೦೦ ರಿಂದ ೮.೦೦ ರವರೆಗೆ)
ಉಪನ್ಯಾಸ:ಡಾ.ಸ್ವಾಮಿರಾವ್ ಕುಲಕರ್ಣಿ, ಹಿರಿಯ ಸಾಹಿತಿಗಳು ಕಲಬುರಗಿ
ವಿಷಯ: ರಂಗಭೂಮಿಯ ರಸಪ್ರಸಂಗಗಳು
ಪ್ರಬಂಧ ಸಮಯ: ಅಯ್ಯಪ್ಪಯ್ಯ ಹುಡಾ, ಹಿರಿಯ ಸಾಹಿತಿಗಳು
ಪ್ರಹ್ಲಾದ ಗುಡಿ, ಪತ್ರಕರ್ತರು ಸಿಂಧನೂರು
ನಿರ್ವಹಣೆ: ಮಹೇಶ ದೀಕ್ಷಿತ್
—————–
ದಿನಾಂಕ:೦೯.೧೧.೨೦೨೦, ಸೋಮವಾರ
ಉಪನ್ಯಾಸ:ಡಾ..ಆನಂದ ಪಾಟೀಲ್, ಹಿರಿಯ ಮಕ್ಕಳ ಸಾಹಿತಿಗಳು ಧಾರವಾಡ
ವಿಷಯ: ಗುರುದೇವ ರಾನಡೆ
ಮಕ್ಕಳ ಕವಿ ಸಮಯ: ರವಿರಾಜ ಸಾಗರ, ಶಂಕರ್ ದೇವರು ಹಿರೇಮಠ
ನಿರ್ವಹಣೆ:ಯಲ್ಲಪ ಮರ್ಚಡ್, ರಾಯಚೂರು
—————
ದಿನಾಂಕ:೧೦.೧೧.೨೦೨೦, ಮಂಗಳವಾರ
ಉಪನ್ಯಾಸ: ಡಾ.ಸಿ.ಬಿ.ಚಿಲ್ಕಾರಾಗಿ, ಕೊಪ್ಪಳ
ವಿಷಯ: ಪಂಪಭಾರತ
ಕವಿಸಮಯ: ಸೂಗೂರೇಶ ಹಿರೇಮಠ
ನಿರ್ವಹಣೆ: ವೆಂಕಟೇಶ ಚಾಗಿ
—————
ದಿನಾಂಕ ೧೧.೧೧.೨೦೨೦,ಬುಧವಾರ
ಉಪನ್ಯಾಸ:ಡಾ.ಜಿ.ಪವನಕುಮಾರ, ಸಾಹಿತಿಗಳು ಗಂಗಾವತಿ
ವಿಷಯ: ದಾಸಸಾಹಿತ್ಯದಲ್ಲಿ ವೈಚಾರಿಕ ಚಿಂತನೆ
ಕಥಾ ಸಮಯ: ಅಮರೇಶ, ಗಿಣಿವಾರ
ನಿರ್ವಹಣೆ:ಮಹೇಶ ಶೆಟ್ಟರ್
—————-
ದಿನಾಂಕ:೧೨.೧೧.೨೦೨೦, ಗುರುವಾರ
ಉಪನ್ಯಾಸ:ಮುಕುಂದ ಮೈಗೂರು, ಪರಿಸರವಾದಿಗಳು ಧಾರವಾಡ
ವಿಷಯ: ಮಕ್ಕಳು ಮತ್ತು ಕ್ರಿಯಾಶೀಲತೆ
ಉಪನ್ಯಾಸ: ಡಾ.ನಿಂಗೂ ಸೂಲಗಿ
ವಿಷಯ: ಮಕ್ಕಳ ಪೋಷಣೆಯಲ್ಲಿ ದೇಸಿಯತೆ
ನಿರ್ವಹಣೆ: ಕಳಕಪ್ಪ ಹಾದಿಮನಿ
————
ದಿನಾಂಕ:೧೩.೧೧.೨೦೨೦,ಶುಕ್ರವಾರ
ಉಪನ್ಯಾಸ:ಡಾ.ರವಿಶಂಕರ್ ಅಂಕುರ ಉಪನ್ಯಾಸಕರು ಕ್ರೈಸ್ತ ಕಾಲೇಜು ಬೆಂಗಳೂರು
ವಿಷಯ: ಬೇಂದ್ರೆ ಕಾವ್ಯ ನೋಟ
ಕವಿಸಮಯ: ಈರಣ್ಣ ಬೆಂಗಾಲಿ, ಸುರೇಶ ಬಳಗಾನೂರು
ನಿರ್ವಹಣೆ:ಪ್ರಭುದೇವ ಸಾಲಿಮಠ
——————
ದಿನಾಂಕ:೧೪.೧೧.೨೦೨೦ ಶನಿವಾರ (ಸಮಯ: ಸಂಜೆ ೭.೦೦ ರಿಂದ ೮.೦೦ ರವರೆಗೆ)
ಉಪನ್ಯಾಸ:ಎಫ್ ಸಿ.ಚೇಗರೆಡ್ಡಿ ಉಪಾಧ್ಯಕ್ಷರು, ಬಿ.ಜಿ.ವಿ.ಎಸ್ ಕರ್ನಾಟಕ
ವಿಷಯ: ಜ್ಞಾನಕಟ್ಟಿಕೊಳ್ಳುವ ಮಾರ್ಗಗಳು
ಉಪನ್ಯಾಸ:ಕೃಷ್ಣಮೂರ್ತಿ ಟಿ.ಎನ್, ಕಲಾವಿಮರ್ಶಕರು ಐ.ಎಫ್.ಎ
ವಿಷಯ: ಮಗು ಮತ್ತು ಶಿಕ್ಷಣ
ನಿರ್ವಹಣೆ: ಕೊಟ್ರೇಶ ಬಿ.
———–
ದಿನಾಂಕ:೧೫.೧೧.೨೦೨೦, ರವಿವಾರ (ಸಮಯ: ಸಂಜೆ ೭.೦೦ ರಿಂದ ೮.೦೦ ರವರೆಗೆ)
ಉಪನ್ಯಾಸ:ವೆಂಕನಗೌಡ ವಟಗಲ್
ವಿಷಯ: ಜಾನಪದ ಸಾಹಿತ್ಯದಲ್ಲಿ ಹಾಸ್ಯ…
ಉಪನ್ಯಾಸ:ಗುಂಡನೆಟ್ಟಿ ಮಧುಕರ, ಸಾಹಿತಿಗಳು, ಬೆಳಗಾವಿ
ವಿಷಯ: ಸಾಹಿತಿಗಳ ಬದುಕಿನ ರಸಪ್ರಸಂಗಗಳು
ಉಪನ್ಯಾಸ:ಪ್ರೊ.ಜಿ.ಕೆ ಕುಲಕರ್ಣಿ, ಬೆಳಗಾವಿ
ವಿಷಯ: ಭಾಷಾವಿನೋದ ನಿರ್ವಹಣೆ:ನಾಗಭೂಷಣ ನಂದಿಹಾಳ
—————-
ದಿನಾಂಕ:೧೬.೧೧.೨೦೨೦ ,ಸೋಮವಾರ
ಉಪನ್ಯಾಸ:ಡಾ.ಪ್ರಕಾಶ ಬಿ. ಜಾಲಹಳ್ಳಿ
ವಿಷಯ:ಗಜಲ್ ಸಾಹಿತ್ಯ ಹೊಸ ಸಾಧ್ಯತೆಗಳು
ಗಜಲ್ ಸಮಯ: ಮಹಾದೇವ ಪಾಟೀಲ್, ವೇಣು ಜಾಲಿಬೆಂಚಿ, ಉಷಾಜ್ಯೋತಿ ಮಾನ್ವಿ, ಪ್ರಸಾದ ಬಿ.
ನಿರ್ವಹಣೆ: ಅಭೀಷೇಕ ಬಳೆ ಮಸರಕಲ್
———–
ದಿನಾಂಕ:೧೭.೧೧.೨೦೨೦, ಮಂಗಳವಾರ
ಉಪನ್ಯಾಸ:ಡಾ.ದೇವೇAದ್ರಪ್ಪ ಜಾಜಿ, ಪ್ರಾಧ್ಯಾಪಕರು ಸ.ಪ್ರ.ದರ್ಜೆ ಕಾಲೇಜು ಗಂಗಾವತಿ
ವಿಷಯ: ತತ್ವಪದಗಳು ಮತ್ತು ವೈಶಿಷ್ಟತೆ
ತತ್ವಪದ ಗಾಯನ:ರಮೇಶ ಗಬ್ಬೂರ
ನಿರ್ವಹಣೆ:ಸೋಮು ಕುದರಿಹಾಳ
———————
ದಿನಾಂಕ:೧೮.೧೧.೨೦೨೦ ಬುಧವಾರ
ಉಪನ್ಯಾಸ: ಸಿ.ದಾನಪ್ಪ, ಹಿರಿಯ ದಲಿತ ಕವಿಗಳು
ವಿಷಯ:ಹೋರಾಟದ ಬದುಕು
ಕಥಾ ಸಮಯ: ಕಲಿಗಣನಾಥ ಗುಡದೂರು, ಹಿರಿಯ ಕಥೆಗಾರರು
ನಿರ್ವಹಣೆ:ಮಂಜುನಾಥ ಹಾಲಾಪೂರ
————–
ದಿನಾಂಕ:೧೯.೧೧.೨೦೨೦,ಗುರುವಾರ
ಉಪನ್ಯಾಸ:ಡಾ.ಸಾಸ್ವಿಹಳ್ಳಿ ಸತೀಶ ರಂಗಕರ್ಮಿಗಳು,ಉಪನ್ಯಾಸಕರು ಶಿವಮೊಗ್ಗ
ವಿಷಯ: ಗಿರೀಶ ಕಾರ್ನಾಡರ ನಾಟಕಗಳು
ರಂಗಗೀತೆಗಳು: ಶಾಂತಾಮಣಿ, ಪ್ರಜ್ಞಾ ಹೆಗಡೆ ಮಂತಿಕೆ
ನಿರ್ವಹಣೆ: ಗುರುರಾಜ ಹೊಸಪೇಟೆ
—————-
ದಿನಾಂಕ:೨೦.೧೧.೨೦೨೦, ಶುಕ್ರವಾರ
ಉಪನ್ಯಾಸ:ಡಾ.ಮಧುಮತಿ ದೇಶಪಾಂಡೆ
ವಿಷಯ: ಮಹಿಳಾ ಹರಿದಾಸರು
ಕವಿಸಮಯ: ನಿಂಗಪ್ಪ ತಿಡಿಗೋಳ, ಜಹನರಾ ಕೋಳುರು ಕುಷ್ಠಗಿ,
ನಿರ್ವಹಣೆ:ವಿಜಯಲಕ್ಷ್ಮಿ ಕಂದಗಲ್
————–
ದಿನಾಂಕ:೨೧.೧೧.೨೦೨೦,ಶನಿವಾರ (ಸಮಯ: ಸಂಜೆ ೭.೦೦ ರಿಂದ ೮.೦೦ ರವರೆಗೆ)
ಉಪನ್ಯಾಸ: ಮಹಾಂತೇಶ ನವಲಕಲ್, ಹಿರಿಯ ಕಥೆಗಾರರು
ವಿಷಯ: ಕಥಾ ಲೋಕದ ವಸ್ತುಗಳು.
ಉಪನ್ಯಾಸ: ಡಾ.ಬಸವರಾಜ ಕೋಡಗುಂಟಿ, ಪ್ರಾಧ್ಯಾಪಕರು ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ
ವಿಷಯ: ಹೈದ್ರಬಾದ ಕರ್ನಾಟಕದ ಅಲಕ್ಷಿತ ಸಾಹಿತ್ಯ
ನಿರ್ವಹಣೆ: ಮಲ್ಲಯ್ಯ ಕೆಂಭಾವಿಮಠ
——————-
ದಿನಾಂಕ:೨೨.೧೧.೨೦೨೦, ರವಿವಾರ (ಸಮಯ: ಸಂಜೆ ೭.೦೦ ರಿಂದ ೮.೦೦ ರವರೆಗೆ)
ಉಪನ್ಯಾಸ: ಎನ್.ರಾಮನಾಥ, ಸಾಹಿತಿಗಳು,ಹಾಸ್ಯ ಭಾಷಣಕಾರರು ಬೆಂಗಳೂರು
ವಿಷಯ: ಸಾಹಿತ್ಯದಲ್ಲಿ ಅಣಕುವಾಡುಗಳು
ಹನಿಗವಿತೆಗಳು: ದೇವರಾಜ ಬಪ್ಪೂರ
ನಿರ್ವಹಣೆ: ಗುಂಡುರಾವ್ ದೇಸಾಯಿ
————
ದಿನಾಂಕ:೨೩.೧೧.೨೦೨೦, ಸೋಮವಾರ
ಉಪನ್ಯಾಸ: ವೀರಹನುಮಾನ ಹಿರಿಯ ಸಾಹಿತಿಗಳು ರಾಯಚೂರು
ವಿಷಯ: ಜೈಮಿನಿ ಭಾರತ ಅನುಸಂಧಾನ
ಕವಿಸಮಯ: ಡಾ.ಹುಡುಸಪ್ಪ ಹೊಸೂರು, ಕೆ.ಇ.ನರಸಿಂಹ ಮಾನ್ವಿ
ನಿರ್ವಹಣೆ: ರಾಮು ಎನ್.ರಾಠೋಡ
———-
ದಿನಾಂಕ:೨೪.೧೧.೨೦೨೦, ಮಂಗಳವಾರ
ಉಪನ್ಯಾಸ:ಆನಂದತೀರ್ಥ ಪ್ಯಾಟಿ, ಪತ್ರಕರ್ತರು ಕೊಪ್ಪಳ
ವಿಷಯ: :ಪಾಶ್ಚಾತ್ಯ ಕೃಷಿ ಹಾಗೂ ದೇಶಿಯ ರೈತರ ಸಮಸ್ಯೆಗಳು
ಮಾಧ್ಯಮ ಸಮಯ: ವೀರೇಶ ಸೌದ್ರಿ, ಸಂಪಾದಕರು ಇ-ಸುದ್ದಿ
ನಿರ್ವಹಣೆ: ಇಂದರ್‌ಪಾಶಾ ಚಿಂಚರಿಕೆ, ಪತ್ರಕರ್ತರು
—————-
ದಿನಾಂಕ:೨೫.೧೧.೨೦೨೦, ಬುಧವಾರ
ಉಪನ್ಯಾಸ: ಮಲ್ಲಿಕಾರ್ಜುನಸ್ವಾಮಿ, ಹಿರೇಮಠ ನಿವೃತ್ತ ಉಪನಿರ್ದೇಶಕರು
ವಿಷಯ: ಓಶೋ ಚಿಂತನೆಗಳು
ಉಪನ್ಯಾಸ: ಆದಪ್ಪ ಹೆಂಬಾ, ಕವಿಗಳು
ವಿಷಯ: ಕಾವ್ಯದಲ್ಲಿ ಶೃಂಗಾರ
ನಿರ್ವಹಣೆ: ತಿಪ್ಪಣ್ಣ ವಿ.ತಾವರಗೇರಾ
————
ದಿನಾಂಕ:೨೬.೧೧.೨೦೨೦, ಗುರುವಾರ
ಉಪನ್ಯಾಸ:ದಿಲೀಪಕುಮಾರ, ಉಪನ್ಯಾಸಕರು ಚಾಮರಾಜನಗರ
ವಿಷಯ: ಅಕ್ಕಮಹಾದೇವಿಯ ವಚನಗಳ ಒಳನೋಟ
ಕವಿ ಸಮಯ: ಶಂಕರ್‌ರಾವ್ ಉಬಾಳೆ
ನಿರ್ವಹಣೆ: ಸುರೇಶ ರಾಜಮಾನೆ
————-
ದಿನಾಂಕ:೨೭.೧೧.೨೦೨೦, ಶುಕ್ರವಾರ
ಉಪನ್ಯಾಸ:ಸಿ.ಡಿ.ಪಾಟೀಲ್
ವಿಷಯ:ನಿತ್ಯ ಜೀವನದಲ್ಲಿ ವಿಜ್ಞಾನ
ಕಥಾ ಸಮಯ: ಶರಣಬಸವ ಗುಡದಿನ್ನಿ
ನಿರ್ವಹಣೆ: ಕೊಟ್ರೇಶ ತಂಬ್ರಳ್ಳಿ
—————
ದಿನಾಂಕ:೨೮.೧೧.೨೦೨೦, ಶನಿವಾರ
ಉಪನ್ಯಾಸ:ಪ್ರೊ.ಜಿ.ವಿ ಕೆಂಚನಗುಡ್ಡ, ಹಿರಿಯ ಪ್ರಾಧ್ಯಾಪಕರು ಲಿಂಗಸೂಗೂರು
ವಿಷಯ: ಜನಪದ ಸಂಸ್ಕೃತಿ
ಉಪನ್ಯಾಸ: ಡಾ.ಅಮರೇಶ ಯತಗಲ್, ಪ್ರಾಧ್ಯಾಪಕರು ಹಂಪಿ ವಿಶ್ವವಿದ್ಯಾಲಯ
ವಿಷಯ:ಸಂಶೋಧನೆಯ ಹೊಸ ಸಾಧ್ಯತೆಗಳು
ನಿರ್ವಹಣೆ: ಹುಸೇನಪ್ಪ ಮುಂಡರಗಿ
—————-
ದಿನಾಂಕ:೨೯.೧೧.೨೦೨೦, ರವಿವಾರ (ಸಮಯ: ಸಂಜೆ ೭.೦೦ ರಿಂದ ೮.೦೦ ರವರೆಗೆ)
ಹರಟೆ: ನರಸಿಂಹ ಜೋಷಿ ಹಾಸ್ಯಕಲಾವಿದರು ಗಂಗಾವತಿ
ಸಾಮಾಜಿಕ ಜೀವನದಲ್ಲಿ ಹಾಸ್ಯ
ಮಾತು: ಗೋವಿಂದರೆಡ್ಡಿ ಗದ್ದಿ
ವಿಷಯ: ಬದುಕಿನಲ್ಲಿ ಹಾಸ್ಯ
ನಿರ್ವಹಣೆ: ಬಸವರಾಜ ಕೃಷ್ಣಪ್ಪ
————
ದಿನಾಂಕ:೩೦.೧೧.೨೦೨೦ ಸೋಮವಾರ
ಉಪನ್ಯಾಸ :ಮಹಾಂತೇಶ ಮಸ್ಕಿ
ವಿಷಯ:ಕಾವ್ಯದಲ್ಲಿ ಪ್ರಯೋಗಶೀಲತೆ
ಕವಿಗೋಷ್ಠಿ: ಅಬ್ದುಲ್ ಘನಿಸಾಬ, ವರದೇಂದ್ರ ಕೆ. ಅಮರೇಶ ಪಾಟೀಲ, ಪ್ರಭುದೇವ ಎಸ್. ದೇವರಾಜ ಘಂಟಿ, ಮಂಜುನಾಥ ಹಾಲಾಪೂರ, ಕಾಮಾಕ್ಷಿ ತೋಟದ, ಮಹೇಶ ಎಸ್
ಸಮಾರೋಪ ನುಡಿ:
ಡಾ.ವಸುಂಧರಾ ಭೂಪತಿ
ನಿಕಟಪೂರ್ವ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ
ನಿರ್ವಹಣೆ: ವಿದ್ಯಾವತಿ ವನಕಿ
ಸಂಯೋಜನೆ : ಮಹಾಂತೇಶ ಮಸ್ಕಿ, ಗುಂಡುರಾವ್ ದೇಸಾಯಿ, ಡಾ.ಶಶಿಕಾಂತ ಕೆ.
ಇವರೊಂದಿಗೆ
ಪರಶುರಾಮ ಕೋಡಗುಂಟಿ ,ಪ್ರಭುದೇವ ಸಾಲಿಮಠ, ಸೂಗೂರೇಶ ಹಿರೇಮಠ, ವರದೇಂದ್ರ. ಕೆ
ರವಿರಾಜ ಸಾಗರ, ಸುರೇಶ ರಾಜಮಾನೆ, ವೆಂಕಟೇಶ ಚಾಗಿಿ
ಭಾಗಿಯಾಗಿದ್ದರು.