ಕುಲದ ನೆಲೆ ಏನು ?

ಕವಿತೆ

ಕುಲದ ನೆಲೆ ಏನು ?

e-ಸುದ್ದಿ, ಮಸ್ಕಿ

ಜನ್ಮ ದಿನದ ಶುಭಾಶಯ ಓ ಕನಕ
ನೀ ದಾಸ ಸಾಹಿತ್ಯ ಸೃಷ್ಟಿಸಿದ ಜನಕ

ಕುಲದ ನೆಲೆ ಏನೆಂಬ ಪ್ರಶ್ನಾರ್ಥಕ
ಒಂದೇ ಎಂದು ಸಾರಿದ ಪ್ರಚಾರಕ

ನೀನು ತಿಳಿ ಹೇಳಿದ ವಿಚಾರ ಮಾರ್ಮಿಕ
ಮನುಕುಲದ ಒಳಿತು ಬಯಸಿದ ಶ್ರಮಿಕ

ಮೂಲ ನಾಮಾಂಕಿತ ತಿಮ್ಮಪ್ಪ ನಾಯಕ
ಹೆತ್ತವರು ಬಚ್ಚಮ್ಮ ಮತ್ತು ಬೀರಪ್ಪನಾಯಕ

ವಂಶೋದ್ಧಾರಕ ಪಡೆಯಬೇಕೆಂಬ ಬಯಕೆ
ಸಲ್ಲಿಸಿದರು ತಿರುಪತಿ ತಿಮ್ಮಪ್ಪನಿಗೆ ಹರಕೆ

ತಿರುಪತಿ ತಿಮ್ಮಪ್ಪ ಕರುಣಿಸಿದ ಕುಲದೀಪಕ
ಆತನೇ ಜಗದೋದ್ಧಾರಕನಾದ ಭಕ್ತ ಕನಕ

ಬಂಕಾಪುರ ಪ್ರಾಂತಕ್ಕಾಗಿದ್ದ ಡಣ್ಣಾಯಕ
ಸೋತು ಅರಿತ ಯುದ್ಧ ಒಂದು ನಿರರ್ಥಕ

ಉಡುಪಿಯ ಶ್ರೀ ಕೃಷ್ಣನ ಅನನ್ಯ ಸೇವಕ
ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯಪಾಲಕ

ವರ್ಗ ತಾರತಮ್ಯ ಸಮಸ್ಯೆಯಾಗಿತ್ತು ಜಾಗತಿಕ
ಇದ ನಿವಾರಿಸಿದ ಶ್ರೇಷ್ಠ ಸಮಾಜ ಸುಧಾರಕ

ಸಾಹಿತ್ಯ ಲೋಕಕ್ಕಾಗಿ ಕೈಗೊಂಡ ಕಾಯಕ
ಕಾವ್ಯ ಕೌಶಲ ಕಂಡ ಮನವಾಯ್ತು ಭಾವುಕ

ಇವರ ಕೀರ್ತನೆ ಪಡೆದ ಕನ್ನಡ ಸಾಹಿತ್ಯ ಲೋಕ
ಯಾವಾಗಲೂ ಅಮರವಾಗಿರುತ್ತದೆ ಧನಿಕ

ಹಲವು ಕೀರ್ತನೆ ರಚಿಸಿದ ಕವಿ ಹೃದಯಿ ಕನಕ
ಕೀರ್ತನೆ ಪಸರಿಸಿದ ತತ್ವಗಳಂತೂ ಸಾರ್ವಕಾಲಿಕ

ಹರಿಭಕ್ತಿಸಾರ ಕೃತಿಯನ್ನು ಬರೆದ ಲೇಖಕ
ಇಲ್ಲಿ ದೈವಾಂಶ ಹರಿಸ್ತುತಿಯೇ ಪ್ರಮುಖ
ಈ ಕೃತಿಯಾಯ್ತು ಭಕ್ತ ಕನಕನಿಗೆ ಪ್ರೇರಕ

ತ್ಯಜಿಸಲು ಈ ವಾಸ್ತವ ಪ್ರಾಪಂಚಿಕ ಸುಖ
ಹೊಂದಲು ಮೋಕ್ಷ ಮಾರ್ಗವಾದ ಅಲೌಕಿಕ

ಮೋಹನತರಂಗಿಣಿ ಕಾವ್ಯವಂತೂ ರೋಚಕ
ಕೃಷ್ಣದೇವರಾಯನ ವರ್ಣನೆ ಮನಮೋಹಕ

ಮಾನವೀಯ ಮೌಲ್ಯಗಳ ಪ್ರತಿಪಾದಕ
ಪ್ರತಿಪಾದಿಸಿದ ತತ್ವಗಳೆಲ್ಲವೂ ಸಾರ್ವತ್ರಿಕ

ಸದಾ ಸಾಮಾಜಿಕ ಕಳಕಳಿ ಇತ್ತ ಹಿತಚಿಂತಕ
ಸರ್ವಧರ್ಮ ಒಂದೆಂದು ಸಾರಿದ ದಾರ್ಶನಿಕ

ಮಾನವ ಕುಲವೊಂದೆಂಬುದರ ಪ್ರವರ್ತಕ
ಕುಲಭೇದ ಮಾಡಬೇಡೆಂದ ಜನನಾಯಕ

ಜನಮನದಲ್ಲಿ ಬಿತ್ತಿದ ಭಾವನೆ ವೈಚಾರಿಕ
ಸರ್ವಧರ್ಮ ಸಮನ್ವಯಗೊಳಿಸಿದ ಚರಕ

ಹರಿಭಕ್ತಿ ಕಾವ್ಯಗಳ ಸುಗಮ ಗಾಯಕ
ಕಾಗಿನೆಲೆ ಆದಿಕೇಶವನ ಪಾದೋದಕ

ಭಕ್ತಿ ಪಂಥದ ಮಹಾನ್ ದ್ಯೋತಕ
ತಾನು ರಚಿತ ಕೃತಿಗಳಂತೂ ತಾತ್ವಿಕ

ಜನಮನದಲ್ಲಿ ವಿಶ್ವಭ್ರಾತೃತ್ವ ಬಿತ್ತಿದ ಕೃಷಿಕ
ಆ ದಾರಿಯಲ್ಲಿ ಸಾಗಿದಾಗ ಜೀವನ ಸಾರ್ಥಕ

-ಸಿದ್ದನಗೌಡ ಉಪನ್ಯಾಸಕ, ಮಸ್ಕಿ

Don`t copy text!