‌ಬಿಜೆಪಿ ಪಕ್ಷದ ಆತ್ಮಾವಲೋಕನ ಸಭೆ ಉದ್ಘಾಟಿಸಿದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್…

‌ಬಿಜೆಪಿ ಪಕ್ಷದ ಆತ್ಮಾವಲೋಕನ ಸಭೆ ಉದ್ಘಾಟಿಸಿದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್…

 e-ಸುದ್ದಿ ಇಳಕಲ್ 

2023 ನೇ ಹುನಗುಂದ ವಿಧಾನಸಭೆ ಚುನಾವಣೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ದೊಡ್ಡನಗೌಡ ಜಿ ಪಾಟೀಲ್ ಸೋಲನ್ನು ಅನುಭವಿಸಿದ ಹಿನ್ನೆಲೆಯಲ್ಲಿ  ಇಲಕಲ್ಲ ನಗರದ ಅನುಭವ ಮಂಟಪದಲ್ಲಿ ಹುನಗುಂದ ಮತಕ್ಷೇತ್ರದ ಗ್ರಾಮೀಣ ಮತ್ತು ನಗರ ಮಂಡಲದ ಬಿಜೆಪಿ ವತಿಯಿಂದ ಹುನಗುಂದ ತಾಲೂಕಿನ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಕ್ಷದ ಆತ್ಮಾವಲೋಕನ ಸಭೆ ನಡೆಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಹಾಗೂ ವೇದಿಕೆಯ ಮೇಲಿದ್ದ ಎಲ್ಲ ಗಣ್ಯರು ಉದ್ಘಾಟಿಸಿದರು. .

ಈ ಸಂದರ್ಭದಲ್ಲಿ ಭಾಜಪ ಪಕ್ಷದ ತಾಲುಕಾ ಅದ್ಯಕ್ಷರು, ನಗರಸಭೆ ಅದ್ಯಕ್ಷರು, ಉಪಾಧ್ಯಕ್ಷರು, ವಿವಿಧ ಮೋರ್ಚಾ ಪದಾಧಿಕಾರಿಗಳು ,ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿಗಾರರು- ಶರಣಗೌಡ ಕಂದಕೂರ

Don`t copy text!