ಮಾತೇ ಮಾಣಿಕ್ಯ.

ಮಾತೇ ಮಾಣಿಕ್ಯ.

ಸವಿ ನುಡಿಗಳೇ ಇರಬೇಕು
ಮನ ತುಂಬಿ ಬರಬೇಕು
ಮನ ತುಂಬಿದ ನುಡಿಗಳೇ
ನಮ್ಮ ಸಕಲ ಸಂಪತ್ತು. || 1 ||

ವಿನಯದ ನುಡಿಗಳು
ಹೃದಯದಿಂದಿರಬೇಕು
ಹೃದಯದ ನುಡಿಗಳೇ
ನಮ್ಮ ಮಿತ್ರ ಬಾಂಧವರು. || 2 ||

ನಯ ವಿನಯದ ನುಡಿಗಳು
ಸವಿ ಜೇನಿನಂತಿರಬೇಕು
ಸವಿ ಜೇನು ನುಡಿಗಳೇ
ನಮ್ಮ ಸಕಲ ಬಂಧುಗಳು || 3 ||

ನುಡಿಗಳ ನುಡಿಬೇಕು, ಸಂಪತ್ತು ದೊರಕಿಸುತ
ನುಡಿಬೇಕು ದೊರಕಿಸುತ ಮಿತ್ರ ಬಾಂಧವರ
ನುಡಿಗಳು ಬಂಧನಗಳ ಬೆಸೆಯುವಂತಿರಬೇಕು
ಸವಿ, ಸವಿ ನುಡಿಗಳೇ ನಮ್ಮ ಜೀವನಾಧಾರ || 4 ||

ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ -3
ದೂರವಾಣಿ- 9972087473

Don`t copy text!