ಆಯುರ್ವೇದದತ್ತ ಜಗತ್ತಿನ ದೃಷ್ಟಿ : ಡಾ.ಕೃಷ್ಣಾ ಯು ಕೆ

e-ಸುದ್ದಿ ವರದಿ ಬಾಗಲಕೋಟೆ

ಜಗತ್ತಿನ ಶ್ರೇಷ್ಠ ವೈದ್ಯಕೀಯ ಪದ್ಧತಿಗಳಲ್ಲಿ ಭಾರತದ ಆಯುರ್ವೇದ ಪದ್ಧತಿಯು ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಹೊಂದಿದ್ದು ಅದು ಕೇವಲ ಮೂಢನಂಬಿಕೆಯಲ್ಲ ಅದೊಂದು ವಿಜ್ಞಾನ ಶಾಸ್ತ್ರ ಹೀಗಾಗಿ ಜಗತ್ತು ಆಯುರ್ವೇದದತ್ತ ದೃಷ್ಟಿ ಹರಿಸುತ್ತಿದೆ ಎಂದು ಡಾ.ಕೃಷ್ಣಾ ಯು ಕೆ ತಿಳಿಸಿದರು.

ನಗರದ ಎಂಆರ್‌ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ 2022-23ನೇ ಸಾಲಿನ ಬಿ ಎ ಎಂ ಎಸ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಜಪಾನಿನ ಟೋಕಿಯೋದಲ್ಲಿರುವ ನಿಪೋನ್ ಆಯುರ್ವೇದ ಸ್ಕೂಲಿನ ಡೈರೆಕ್ಟರಾದ ಡಾ. ಕೃಷ್ಣಾ ಯು ಕೆ ಮಾತನಾಡುತ್ತಾ ಪ್ರತಿಯೊಬ್ಬ ಮನುಷ್ಯನ ದಿನಚರ್ಯ ಹಾಗೂ ಋತುಚರ್ಯಗಳನ್ನ ಪಾಲನೆ ಮಾಡುವುದರಿಂದ ದೀರ್ಘಾಯುಷ್ಯವನ್ನು ಹೊಂದಬಹುದು ಹಾಗೂ ರೋಗರುಜಿನಗಳಿಂದ ತಪ್ಪಿಸಿಕೊಳ್ಳಬಹುದೆಂದು ತಿಳಿಸಿದರು.
ಡಾ.ಕೃಷ್ಣಾ ಯು ಕೆ ಅವರ ವ್ಯಕ್ತಿತ್ವವನ್ನು ಗುರುತಿಸಲಾಗಿ ಇಂದಿನ ತಾಂತ್ರಿಕ ಯುಗದಲ್ಲೂ ಸಹ ಕೇವಲ ಇ-ಮೇಲ್ ಮೂಲಕ ಸಂಪರ್ಕಕ್ಕೆ ಸಿಗುವ ಇವರು ಮೂಲತಹ ಕರ್ನಾಟಕದವರಾಗಿದ್ದು ಪ್ರಸ್ತುತ ಜಪಾನ್ ನ ಟೋಕಿಯೋದಲ್ಲಿ ಸಂಸ್ಥೆಯೊಂದರ ನಿರ್ದೇಶಕರಾಗಿ ಭಾರತದ ಶ್ರೇಷ್ಠ ಆಯುರ್ವೇದ ಪದ್ಧತಿಯನ್ನು ಜಗತ್ತಿನಾದ್ಯಂತ ಪಸ ರಿಸುತ್ತಿರುವುದು ಜೊತೆಗೆ ಪ್ರತಿ ವರ್ಷ ರಾಜ್ಯದಲ್ಲಿರುವ ಆಯುರ್ವೇದ ಕಾಲೇಜುಗಳಿಗೆ ಭೇಟಿ ನೀಡಿ ಉಚಿತವಾಗಿ ಉಪನ್ಯಾಸ ನೀಡುತ್ತಿರುವುದು ಕೂಡ ಕನ್ನಡಿಗರಾದ ನಮ್ಮೆಲ್ಲರಿಗೂ ಸಂತಸ ಎಂಬುದನ್ನು ಸಂಸ್ಥೆಯವರು ವ್ಯಕ್ತಪಡಿಸಿದರು.
ಈ ಸಂದರ್ಭ ಕಾಲೇಜಿನ ಡೀನ್ ಆದ ಡಾ.ಶಿವಕುಮಾರ್ ಗಂಗಾಲ, ಪ್ರಾಂಶುಪಾಲರಾದ ಡಾ.ಪ್ರಲ್ಹಾದ್ ಗಂಗಾವತಿ, ಪ್ರಾಧ್ಯಾಪಕರಾದ ಡಾ. ವಿಜಯಕುಮಾರ್ ಚವಡಿ, ಡಾ. ದೀಪಾ ಗಂಗಾಲ, ಡಾ.ವೀಣಾ ಕುಲಕರ್ಣಿ, ಡಾ.ರೇಖಾ ಸಕ್ಕರಿ, ಡಾ. ಅತಿರಾ ಸೋಮನ್ , ಡಾ .ಈಶ್ವರ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!