ಶ್ರೀ ವೈರಾಗ್ಯ ಚಕ್ರವರ್ತಿ ಘನಮಠ ನಾಗಭೂಷಣ ಶಿವಯೋಗಿಗಳು ಸಂತೆಕೆಲ್ಲೂರು

ಶ್ರೀ ವೈರಾಗ್ಯ ಚಕ್ರವರ್ತಿ ಘನಮಠ ನಾಗಭೂಷಣ ಶಿವಯೋಗಿಗಳು ಸಂತೆಕೆಲ್ಲೂರು

ಶಿವಯೋಗಿ ವೃಂದದೊಳು ಮಹಾಘನಮಠ ಶಿವಯೋಗಿ ಅನುದಿನ ಸ್ಮರಿಸುವೆ ನಿನ್ನ ನಾಮದ ಸ್ತೋತ್ರವನು ಸಂತೆಕೆಲ್ಲೂರು ಸದಾ ಘನಮಠ ಶಿವಯೋಗಿ ನಿನ್ನ ವಾಸ ನೆಲೆಸಿದಂತ ಮಹಿಮ ಮಹಾ ತ್ಯಾಗಿ ಯೋಗಿ ನೀನು ಅಂಧಕಾರದಲಿ ಇರುವ ಮಡೆಯ ಮನುಜರಿಗೆ ಮುಕ್ತಿಯ ಮಾರ್ಗವ ತೋರಿದ ಮಹಾಶರಣ ನೀನು. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯು ಶ್ರೇಷ್ಠೆಂದು ಜೈ ಘೋಷವನ್ನು ಮೊಳಗಿದ ಮಹಾ ತ್ಯಾಗಿ ಯೋಗಿ ನೀನು. ಸಂಸಾರ ಬಂಧನದೊಳು ಸಿಕ್ಕು ಸಿಡಿಮಿಡಿಗೊಂಡು ನೀನು ಮಡದಿ ಮಕ್ಕಳ ಅಲ್ದೆ ಹೆತ್ತಂಥ ಮಾತಾ ಪಿತೃಗಳನ್ನ ಧಿಕ್ಕರಿಸಿ ದೂರ ಮಾಡಿ ಮನೆ ತೊರೆದು ದೇಶ ಸಂಚಾರ ಮಾಡುತ ಸಂದೇಶ ಸಾರುತ್ತ ಜಗವನ ಬೆಳಗಿದ ಮಹಾಯೋಗಿ.

ಹತ್ತಲ್ಲ ನೂರಲ್ಲ ಅನಂತ ಪವಾಡ ದೃಶ್ಯಗಳನ ಪ್ರತ್ಯಕ್ಷ ಮಾಡಿ ತೋರಿದ ಮಹಾಯೋಗಿ ಶರಣ ನೀನು ಸಂಚಾರ ಮಾಡ್ತ ಮಾಡ್ತಾ ಬಿಜಾಪುರ ನಗರ ತಲುಪಿದಾಗ ಹೊತ್ತು ಮುಳುಗಿದ ಸಮಯ ಅಲ್ಲೇ ವಸ್ತಿ ಮಾಡಿದ ಶರಣ ಸರ್ವ ಭಕ್ತರು ಕೂಡಿ ಮಹಾತ್ಮನ ದರ್ಶನ ಪಡೆದ ನಂತರ ಬಾರದ ಮಳೆಗಾಗಿ ಬರ ಆವರಿಸಿದ ಭವಣೆಯನ ಆಲಿಸ್ತ ಶಿವಯೋಗಿ ಆಗಲೇ ಅಭಯವ ಕೊಟ್ಟಾನು ಮೂರೇ ದಿನದ ಒಳಗೆ ಮೇಘರಾಜ ಧರೆಗೆ ಧಾವಿಸಿ ಬರುವನು ಶಿವಯೋಗಿ ವಾಣಿಯಂತೆ ಮೇಘರಾಜ ಧರೆಗೆ ಧಾವಿಸಿ ಬಂದ ಸರ್ವ ಭಕ್ತರ ಮನವ ಮುದಗೊಳಿಸ್ತ ಮಹಾ ತ್ಯಾಗಿ ಯೋಗಿ ಪಟ್ಟಣಕ್ಕೆ ಪಂಚ ರಾತ್ರಿ ಹಳ್ಳಿಗೆ ಒಂದೇ ವಸ್ತಿ ಯನ್ನುವ ಮೂಲ ಮಂತ್ರದಂತೆ ಮುಂದೆ ಸಾಗಿದ ಶಿವಯೋಗಿ.

ಊರು ಊರು ಸುತ್ತುತ್ತ ಸಂಚಾರ ಮಾಡುತ್ತ ಮಾಡುತ್ತ ಇಲಕಲ್ಲ ಪುರವನ್ನು ಪ್ರವೇಶ ಮಾಡಿದ ಮಹಾಯೋಗಿ ಇದೇ ಸಮಯದೋಳು ಮಠದಿಂದ ಹೊರಟಂತ ಪಲ್ಲಕ್ಕಿ ಉತ್ಸವ ಮೇಣೇದೊಳಗೆ ಕುಳಿತ ಮಹಾಂತ ಶಿವಯೋಗಿಯನ್ನ ಕಂಡು ಇದೇನು ಮಹಾಂತ ಶರಣ ನಿನ್ನ ಹೊತ್ತ ಭಕ್ತರ ಋಣವ ತೀರಿಸಲಾಗ್ದೆ ನೀನು ಋಣಿಯಾಗಿ ಹೋಗುವೆ ಎಂದ ಯೋಗಿ ಶಿವಯೋಗಿ ನುಡಿದ ವಾಣಿಗೆ ಮರು ಮಾತಾಡದ ಮಹಾಂತಜ್ಜನು ನಮಿಸುತ್ತ ಶಿವಯೋಗಿಗೆ ಶರಣು ಶರಣೆನ್ನುತ ಬಾಗಿದನು ಅಂದೇ ತ್ಯಾಗವ ಮಾಡಿದ ಮಾಂತಜ್ಜ ಮೇಣೇಯೊಳಗೆ ಮೆರೆವದ ಶಿವಯೋಗಿ ಘನಮಠೇಶನ ವಾಣಿಗೆ ಪರಿತ್ಯಕ್ತ ಮಹಾಂತಜ್ಜನು ಶ್ರೀ ಘನಮಠ ಶಿವಯೋಗಿ ಶ್ರೀ ಮಹಾಂತಶಿವಯೋಗಿ ಈರ್ವ ಶರಣರ ಮಿಲನ ಇಲಕಲ್ ಕೈಲಾಸ ಮಂದಿರ ಕಾಣಣ್ಣ ಮುಂದೆ ಸಂಚಾರ ಮಾಡ್ತಾ ಅಂಕುಶ ದೊಡ್ಡಿ ಎಂಬ ಪುಟ್ಟ ಗ್ರಾಮಕ ಶಿವಯೋಗಿ ಘನಮಠೇಶನ ಆಗಮನ ಊರಗಸಿಯ ಗುಡ್ಡೆ ಕಲ್ಲಿಗೆ ಊರಗಸಿಯ ಗುಡ್ಡೆ ಕಲ್ಲಿಗೆ ಅಂಕುಶದೊಡ್ಡಿ ಪಾವನ ಅಂದಿನ ವಸ್ತಿಯು ಅಚರೆಡ್ಡಿ ವಿರುಪಣ್ಣನೆಂಬ ಭಕ್ತನ ಮನೆಯೊಳು ಮಹಾತ್ಮನ ದರ್ಶನ ಸರ್ವ ಭಕ್ತರು ಪಾವನ ಮರುದಿನ ಪಯಣವು ಸಂತೆಕೆಲ್ಲೂರು ಕಡೆ ನಡಿಗೆ ಸಾಗುವ ಸಮಯದೊಳು ಊರಗಸಿಯ ಗುಡ್ಡೆಕಲ್ಲಿಗೆ ಶರಣನು ಎಡಪಾದ ಎಡವಿದ ಯಡವಿದ ಆ ಕ್ಷಣ ಭಕ್ತರಿಗೆ ಅರುಹಿದ ಶರಣನು ಮುಂದೆ ನಡೆಯುವ ಭವಿಷ್ಯತ್ತನ್ನು ಮುಗಿಯಿತು ಭೂಮಿ ಋಣವು ನಿಮ್ಮ ಗ್ರಾಮವೇ ಕೊನೆಯಾಯಿತು ಎಂದೇಳತ ಶಿವಯೋಗಿ ಸಾಗಿದ ಸಂತೆಕೆಲ್ಲೂರು ಕಡೆಗೆ ಅಲ್ಲಿರುವ ಭಕ್ತರಿಗೆ ಅರುಹಿದ ಶಿವಯೋಗಿ ಭವಿಷ್ಯತ್ತನ್ನು ಮುಗಿಯಿತು ನಮ್ಮ ನಿಮ್ಮಗಳ ಋಣವು ಇಂದಿಗೆ ಕೊನೆಯಾಯ್ತು ಶಿವಯೋಗಿಗಳ ನುಡಿಯ ಕೇಳಿ ನೆರೆದಂತ ಭಕ್ತರಲ್ಲಿ ಒಬ್ಬರು ಮರುದಿನ ಮಂಗಳವಾರ ಮೇಲ್ಗಡೆ ಪಯಣಿಸಬಾರದೆಂದು ಭಕ್ತರ ಮಾತಿಗೆ ಮನ್ನಿಸಿದ ಮಹಾಮಹಿಮ ಯೋಗಿ ಮರುದಿನ ಉದಯಕ್ಕೆ ಮಂಗಳ ಹಾಡಿದ ಮಹಾಯೋಗಿ ಶಿವಯೋಗಿ ಆತ್ಮಜ್ಯೋತಿ ಶಿವನಲ್ಲಿ ಒಂದಾಗಿ ಬೆರೆತಾಯ್ತು ಶಿವಯೋಗಿ ಆತ್ಮಜ್ಯೋತಿಯು ಮಠದೊಳು ಸದಾ ಬೆಳಗುತಿಹದು ಇಂದಿಗೂ ಸದಾ ಬೆಳಗುತಿಹುದು ಈ ಗೀತೆ ರಚಿಸಲೆ ನಗೆ ಪ್ರೇರಣೆ ತುಂಬಿದ ಘನಮಠೇಶನ ಪಾದಕ್ಕೆ ಹಣೆಮಣಿದು ಗೀತೆಗೆ ಮಂಗಳ ಹಾಡುವೆನು ಗೀತೆಗೆ ಮಂಗಳ ಹಾಡುವೆನು

-ಶ್ರೀ ಮಹಾಂತಪ್ಪ ವೀರಪ್ಪ ಖೇಣೆದ್
ಸಾ||ಅಂಕುಶದೊಡ್ಡಿ
ತಾಲೂಕ್|| ಮಸ್ಕಿ
ಜಿಲ್ಲಾ || ರಾಯಚೂರ್

Don`t copy text!