ನಂದವಾಡಗಿ ಶ್ರೀಮಠಕ್ಕೆ ಭೇಟಿ ನೀಡಿ ಪೂಜ್ಯರ ಆರ್ಶಿವಾದ ಪಡೆದ ವೀಣಾ ಕಾಶಪ್ಪನವರ ….
e-ಸುದ್ದಿ ನಂದವಾಡಗಿ
ಜೂ. 16 ರಂದು ತಾಲೂಕಿನ ಹಾವರಗಿ ಗ್ರಾಮದಲ್ಲಿ ಹಾಗೂ ಜೂ.15 ರಂದು ಇಲಕಲ್ಲ ನಗರದಲ್ಲಿ ಶ್ರೀ ಎಸ್ ಆರ್ ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನ ಇಲಕಲ್ಲ ಇವರ ವತಿಯಿಂದ ಲಿಂ ಎಸ್ ಆರ್ ಕಾಶಪ್ಪನವರ ಅವರ 21 ನೇ ಪುಣ್ಯ ಸ್ಮರಣೆ ನಿಮಿತ್ಯ ಎಸ್ ಎಸ್ ಎಲ್ ಸಿ ಹಾಗೂ ದ್ವೀತಿಯ ಪಿಯುಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಪೂಜ್ಯರಾದ ಮಹಾಂತಲಿಂಗ ಶಿವಾಚಾರ್ಯರಿಗೆ ಕಿರಿಯ ಪೂಜ್ಯರಾದ ಡಾ ಚನ್ನಬಸವ ದೇಶಿಕೇಂದ್ರ ಶಿವಾಚಾರ್ಯರಿಗೆ ಆರ್ಶಿವಾದ ಪಡೆದು ಶ್ರೀಗಳ ಆರೋಗ್ಯ ವಿಚಾರಿಸಿದರು
ನಂತರ ಪೂಜ್ಯರಿಗೆ ಸನ್ಮಾನಿಸಿ ಗೌರವಿಸಿದರು.
ನಂತರ ನಂದವಾಡಗಿ ಶ್ರೀ ಮಾಹಾಂತೇಶ್ವರ ಸಂಸ್ಥಾನ ಮಠದ ಪರವಾಗಿ ಭಕ್ತರ ಸಮ್ಮುಖದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರಿಗೆ ಸನ್ಮಾನಿಸಿದರು.
ಇದೇ ಸಂಧರ್ಭದಲ್ಲಿ ನಂದವಾಡಗಿ ಗ್ರಾಮದ ಕಾಂಗ್ರೆಸ್ ಮುಖಂಡರು ಹಿರಿಯರು ಶ್ರೀಮಠದ ಸದ್ಭಕ್ತ ಉಪಸ್ಥಿತರಿದ್ದರು.
ವರದಿಗಾರರು:ಶರಣಗೌಡ ಕಂದಕೂರ