ಕೃಷ್ಣಗಿರಿ- ಕುಷ್ಟಗಿ ಗುಂಬಜ್

ಇತಿಹಾಸ

ಕುಷ್ಟಗಿ ಗುಂಬಜ್

ಕೃಷ್ಣಗಿರಿ >ಕುಷ್ಟಿಗಿ,>ಕುಷ್ಟಗೆ> ಕುಷ್ಟಗಿ ಯಾಗಿ ಪರಿವರ್ತನೆ ಯಾದ ಈ ಊರಿನ ಹೆಸರು ಕನಕಗಿರಿಯ ಲಕ್ಷಿನರ ಸಿಂಹ ದೇವಾಲಯದ ಪ್ರಾಕಾರದಲ್ಲಿರುವ ಕ್ರಿ, ಶ ೧೫೩೪ರ ಕಲ್ಯಾಣ ಚಾಲುಕ್ಯರ ಶಾಸನದಲ್ಲಿ ಉಲ್ಲೇಖಿಸಿರುವ ” ಕುಸ್ಟಿಗೆಯ ” ಸೀಮೆಯ ವಳಗಣ ಸಮರ್ಪಿಸಿದ ಯಿಂಗಳದ ಗ್ರಾಮ ೧ ಎಂದಿದೆ/

ಯಲಬುರ್ಗಾ ತಾಲೂಕಿನ ಕಲ್ಲೂರಿನ ಕಲ್ಲಿನಾಥ ದೇವಾಲಯದ ಬಳಿಇರುವ ಐದನೇಯ ಕಲ್ಯಾಣ ಚಾಳುಕ್ಯರ ಕಾಲದ ಕ್ರಿ ಶ, ೧೫೩೭ರ ಶಾಸನ ದಲ್ಲಿ, ಶ್ರೀ ಮನ್ಮಹಾ,ನಾಯಕಾಚಾರ್ಯ ಗುಜ್ಜಲು ಚಿಕ್ಕ ಹನುಮಂತ ನಾಯಕರ ಮಕ್ಕಳು ಯಿಂಮಡಿ ಹನುಮಂತ ನಾಯಕರು,
” ಕುಷ್ಟಗೆಯ “ಗುಜ್ಜಲ ಯಿಂಮಡಿಮರನದಿ ನಾಯಕರ ಮಕ್ಕಳು ಎಂಬ ಉಲ್ಲೇಖ ವಿದ್ದು ಕುಷ್ಟಗಿ ಯನ್ನು ಆಳಿದ ಸಾಮಂತರು ಗುಜ್ಜಲವಂಶಸ್ಥರು ಎನ್ನಬಹುದು

ಒಂದು ಕಾಲ್ಪನಿಕ ಕಥೆ ಹೀಗಿದೆ

ಈ ಬಯಲು ಪ್ರದೇಶವನ್ನು ಒಬ್ಬರಾಣಿ ಆಳುತ್ತಿದ್ದು, ಅವಳಗಂಡನಿಗೆ,ಕುಷ್ಟರೋಗ ತಗುಲಿತು ಆಗ ಆತನನ್ನು ಕುಷ್ಠರೋಗ ನಿವಾರಣಾ ಹವಾಗುಣವಿರುವ ಪ್ರದೇಶ ಕ್ಕೆ ಕರೆತಂದು ಕೆಲವು ತಿಂಗಳುಗಳಲ್ಲಿ ರೋಗವಾಸಿಯಾಯಿತು ಈ ಸಂತೋಷ ಕ್ಕಾಗಿ ಆ ರಾಣಿಯು ಊರ ಹೊರಗೆ ನಾಲ್ಕು ದಿಕ್ಕಿನಲ್ಲಿ ಒಂದೊಂದು ಸ್ಮಾರಕಗಳನ್ನು ಕಟ್ಟಿಸಿ ಊರು ಬೆಳೆದು ಈ ಸ್ಮಾರಕಗಳನ್ನು ದಾಟಿದರೆ ರೋಗ ನಿವಾರಣಾ ಹವಾಗುಣ ಕಡಿಮೆಯಾಗುತ್ತದೆ ಎಂದಳಂತೆ,

 

ಇಂದಿಗೂ ಸಹ ಈ ನಾಲ್ಕು ಸ್ಮಾರಕಗಳನ್ನು ನೋಡಬಹುದಾಗಿದೆ,
ವಿಜಯನಗರದ ಅರಸ ಫ್ರೌಢ ದೇವರಾಯನ ಪತ್ನಿ ರಾಣಿ ಪದ್ಮ ಲಾದೇವಿಯು ಕುಷ್ಟರೋಗದಿಂದ ಬಳಲುತ್ತಿದ್ದಾಗ ತಾವರಗೇರಾ ಪರಿಸರದಲ್ಲಿ ನೆಲೆಸಲು ವ್ಯವಸ್ಥೆಯ ನ್ನು ಮಾಡಿದ್ದರಂತೆ,*

ಪ್ರಸ್ತುತ ಬರಹದ ಸ್ಮಾರಕವು

೧೭ ನೆಯ ಶತಮಾನದೆಂದು ಹೇಳಲಾಗುವ ಕುುಷ್ಟಗಿ ಪಟ್ಟಣದ ನೈರುತ್ಯ ದಿಕ್ಕಿನಲ್ಲಿ ,ಪೂರ್ವಭಿಮುಖವಾಗಿರುವ ಶೈವ ದೇಗುಲ ಗರ್ಭಗುಡಿಯ ಮೇಲ್ಭಾಗದ ಶಿಖರ ಗುಂಬಜ್ , ದ್ವಾರಬಾಗಿಲು , ಪಕ್ಕದಲ್ಲಿ ದ್ವಾರಪಾಲಕರು, ಇದು ,ಕೋರಿಗುಡಿ,ಎಂದು ಕರೆಯಲಾಗುವ, ಇಂಡೋ ಇಸ್ಲಾಮಿಕ್ ವಾಸ್ತು ಶೈಲಿಯ ಗೋಳಾಕಾರ ಗುಮ್ಮಟ ಹೊಂದಿದೆ

ನೆಲದಿಂದ ೫ಫೀಟ್ ಎತ್ತರದ ಜಗತಿ ಮೇಲೆ, ಚಚ್ಚೌಕ ೨೫×೨೫= ೬೨೫ ಚದರ ಅಡಿ ವಿಸ್ತೀರ್ಣದ ತಳವಿನ್ಯಾಸದಲ್ಲಿ ಕಟ್ಟಲಾಗಿರುವ ಈ ಗುಡಿಯು ೨೦×೨೦ ಅಳತೆಯ ಜಾಗದಲ್ಲಿ, ಗರ್ಭಗೃಹ ಮಾತ್ರ ಹೊಂದಿರುವ ಇದರ ಬಾಗಿಲುವಾಡದಲ್ಲಿ, ಪದ್ಮಗಳನ್ನು ಹಿಡಿದು ನಿಂತ ದ್ವಾರಪಾಲಕರಿದ್ದಾರೆ,

ಲಲಾಟಬಿಂಬದಲ್ಲಿ ಗಜಲಕ್ಷಿಯ ಉಬ್ಬು ಶಿಲ್ಪವಿದೆ,
ಅರೆಗಂಬಗಳು, ಪದ್ಮ, ಹೂಬಳ್ಳಿಗಳ ಅಲಂಕರಣೆಗಳನ್ನು ಬಾಗಿಲು ವಾಡದಲ್ಲಿ ಕೆತ್ತನೆಮಾಡಲಾಗಿದೆ.

ಗರ್ಭಗೃಹ ಒಳಭಾಗದ,ಗುಡಿ ( ಕೋಷ್ಟ) ದಲ್ಲಿ ಗಣೇಶನ ವಿಗ್ರಹ ವಿದೆ, ಭುವನೇಶ್ವರಿ ಯು ಗೋಲಾಕಾರವಾಗಿದ್ದು, ಮುಸ್ಲಿಮ್ ಮಾದರಿಯಲ್ಲಿ ದೆ, ಗಾರೆ ಇಟ್ಟಿಗೆ ವಿಶಾಲವಾದ ಕಲ್ಲುಗಳ ಸಹಾಯದಿಂದ ಭವ್ಯವಾದ ,ಆಕರ್ಷಣೆಯ, ಗುಮ್ಮಟ ದ ಕಟ್ಟಡ ಕೈಮಾಡಿ ಕರೆಯುತ್ತಿದೆ. ದೇವಾಲಯಕ್ಕೆ ಮೇಲೆ ಹತ್ತಲು ಐದು ಹಂತದ ಸೋಪಾನದ ಮೆಟ್ಟಿಲು ಗಳು ಇವೆ,ಯಾಳಿಯಮೇಲೆ ವಿಮಾನಭಾಗದಲ್ಲಿ ಮುಂದೆಚಾಚಿದ ೨ ಪೀಟ್ ಸಜ್ಜಾ ಗಟ್ಟಿಮುಟ್ಟಾಗಿದೆ,

ಗರ್ಭಗೃಹ ದ ಪ್ರದಕ್ಷಿಣೆ ಗೆ ಅನುವಾಗಲು ೩ಫೀಟ್ ಅಳತೆಯ ಜಾಗದಲ್ಲಿ ತೆರದ ಪ್ರದಕ್ಷಿಣ ಪಥವಿದೆ,
ದೇಗುಲ ದ ಮೇಲಿನ ಕೈಪಿಡಿ ಗೋಡೆಯಲ್ಲಿ ೧೫ ಫೀಟ್ ಎತ್ತರದ ಕೆಳಪು ಗ್ರಾನೈಟ್ ಶಿಲೆಯ ದೊಡ್ಡ ಕಲ್ಲುಗಳಿಂದ ಚೈತ್ಯಾಕಾರದ ಪಕ್ಕದ ಗೋಡೆಗಳಲ್ಲಿ ಕೆತ್ತನೆ ಮತ್ತು ಅವುಗಳಲ್ಲಿ ಸರಪಳಿಯಿಂದ ಇಳಿಬಿದ್ದ, ಪದ್ಮದ ಗೊಂಚಲುಗಳಿವೆ

ನಾಲ್ಕು ದಿಕ್ಕುಗಳಲ್ಲಿ ವಿವಿಧ ಶಿಲ್ಪ ಗಳಿದ್ದು, ಅದರಲ್ಲಿ ಮುಂಭಾಗದ ಕೆದರಿದ ಜಟೆ ಇರುವ ಹಾಗೂ ಪದ್ಮಾಸನದಲ್ಲಿ ಕುಳಿತ ವ್ಯಕ್ತಿ ಯೋರ್ವನ ಶಿಲ್ಪವಾದಂತಿದೆ

ಉಳಿದ ಮೂರುಭಾಗಗಳಲ್ಲಿ ಸಂಗೀತ ಮತ್ತು ನೃತ್ಯ ಗಾರರ ಉಬ್ಬುಗೆತ್ತೆನೆಗಳಿವೆ ಗರ್ಭಗೃಹ ದ ಮಂಟಪದ ಮೆಲೆ ನಾಲ್ಕು ಮೂಲೆಗಳಲ್ಲಿ ಮೀನಾರುಗಳಿವೆ ಅಲ್ಲದೆ ಮೇಲ್ಬಾಗದಲ್ಲಿ ಗಾರೆ ಗಚ್ಚಿನ ಕಲಗಳಿಂದಾದ ರಚನೆಯ ವಿನ್ಯಾಸದ ಗೋಳಗುಮ್ಮಟವಿದೆ, ಮೀನಾರಿನ ಒಂದು ಗುಮ್ಮಟದ ಗುಂಡುಕಲ್ಲು ಜಾರಿ ನೆಲದ ಮೇಲೆ ಬಿದ್ದು ತೃಟಿತಗೊಂಡಿದೆ

ಇದನ್ನು ಕೋರಿಗುಡಿ,/ಉರುಕಮ್ಮ ಗುಡಿ /ಚಿಕ್ಕ ಮಕ್ಕಳಿಗೆ ತಾಜ್/,ಬಿಜಾಪುರ ಗುಮ್ಮಟ, /ಎಂತಲೂ ಕರೆಯಿಸಿಕೊಳ್ಳುವ ಈ ಸ್ಮಾರಕದ ಮೇಲೆ ಕಿಡಿಗೇಡಿಗಳು ತಮ್ಮ ಪ್ರೇಮ ಸಲ್ಲಾಪದ ಬರಹಗಳನ್ನು ಬರೆದು ವಿಕೃತಿಮೆರೆದಿದ್ದಾರೆ,

ವಿಜಯಪುರದ ಆದಿಲ್ ಶಾಹಿ ಸುಲ್ತಾನರ ವಾಸ್ತುಶಿಲ್ಪದ ಲಕ್ಷಣಗಳಂತೆ, ಹಿಂದೂ ಮುಸ್ಲಿಂ ಭಾವೈಕ್ಯ ದ ಪ್ರತೀಕದಂತಿರುವ ಈ ಭವ್ಯವಾದ ಗುಂಬಜ್ ಅನಾಥವಾಗಿ,ದೇವರಿಲ್ಲದ ಗುಡಿಯಾಗಿ ನಿಂತಿದೆ

ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡೆದ ಇರುವುದು ಸೋಜಿಗ ವೆನಿಸುತ್ತಿದೆ
ಸಾರ್ವಜನಿಕ ರು ಅಲ್ಲಿನ ನಿವಾಸಿಗಳ ಆಸ್ಥೆಯಿಂದಾಗಿ ಇಂದಿಗೂ ಜೀವಂತ ಸ್ಮಾರಕವಾಗಿ ಕಾಣುತ್ತಿದೆ,
( ಆಧಾರ )

 


ಚಿತ್ರ, ಕೃಪೆ ; ಸುಜಿತ್ ಶೆಟ್ಟರ್

ಬರಹ – ನಟರಾಜ ಸೋನಾರ್, ಕುಷ್ಟಗಿ

Don`t copy text!