ಕಿವುಡ & ಮೂಕ ಮಕ್ಕಳೊಂದಿಗೆ ಕಾಲ ಕಳೆದ ಹಿರಿಯ ಪತ್ರಕರ್ತ ಸಿ ಸಿ ಚಂದ್ರಪಟ್ಟಣ..
e-ಸುದ್ದಿ ವರದಿ:ಇಳಕಲ್
ನಗರದ ವಿದ್ಯಾಗಿರಿಯಲ್ಲಿರುವ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿರುವ ಮಕ್ಕಳೊಂದಿಗೆ ಇಳಕಲ್ ನಗರ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಹಿರಿಯ ಪತ್ರಕರ್ತರಾದ ಸಿ ಸಿ ಚಂದ್ರಪಟ್ಟಣ ಅವರು ಮಕ್ಕಳೊಂದಿಗೆ ಮೂಕ ಸನ್ನೆಗಳ ಮೂಲಕ ಬರವಣಿಗೆಯ ಮೂಲಕ ಮಕ್ಕಳ ಕಲಿಕೆಯನ್ನು ತಿಳಿದುಕೊಂಡರು.
ಆ ಮುದ್ದುಮಕ್ಕಳ ಜೊತೆಗೂಡಿ ಕೆಲ ಕಾಲ ಕಳೆದರು. ಜೊತೆಗೆ ಶಾಲಾ ಶಿಕ್ಷಕರಿಂದ ಮಕ್ಕಳ ಕಲಿಕೆ ಹಾಗೂ ಕಲಿಕೆಯ ಬಗ್ಗೆ ಮಕ್ಕಳಿಗಿರುವ ಉತ್ಸಾಹ ಹೇಗಿದೆ ಎಂದು ತಿಳಿದುಕೊಂಡರು.
ವರದಿಗಾರರು: ಶರಣಗೌಡ ಕಂದಕೂರ