e-ಸುದ್ದಿ, ಮಸ್ಕಿ
ತಾಲೂಕಿನ ಯದ್ದಲದಿನ್ನಿ ಗ್ರಾಮದಲ್ಲಿ 2018ರಲ್ಲಿ ವಿದ್ಯುತ್ ಅವಗಡದಲ್ಲಿ ಮೃತ ಪಟ್ಟಿದ್ದ ಚಂದಪ್ಪ ಅವರ ಪತ್ನಿ ಶಾರದ ಅವರಿಗೆ ಜೆಸ್ಕಾಂ ವತಿಯಿಂದ ಮಸ್ಕಿ ಎಇಇ ಕೆಂಚಪ್ಪ ಭಾವಿಮನಿ 5ಲಕ್ಷ ರೂಪಾಯಿ ಪರಿಹಾರದ ಚೆಕ್‍ನ್ನು ಶುಕ್ರವಾರ ವಿತರಿಸಿದರು.
ಯದ್ದಲದಿನ್ನಿ ಗ್ರಾಮದ ಚಂದಪ್ಪ ಎನ್ನುವವರು ವಿದ್ಯುತ್ ಅಪಘಾತದಲ್ಲಿ ಮೃತ ಪಟ್ಟಿದ್ದರು. ಇಲಾಖೆಯವತಿಯಿಂದ ಅವರ ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ ಎಂದು ಕೆಮಚಪ್ಪ ಭಾವಿಮನಿ ತಿಳಿಸಿದರು. ಜೆಇ ವೆಂಕಟೇಶ, ಶಾಖಾಧಿಕಾರಿಗಳಾದ ಶ್ರೀಶೈಲ ಪಾಟೀಲ್, ಮುರಳಿ, ತಿರುಪತಿ, ಅಂಬಣ್ಣ ಇತರರು ಇದ್ದರು.