ಮರಾಠ ಅಭಿವೃದ್ದಿ ಪ್ರಾಧಿಕಾರ ರದ್ದು ಪಡಿಸಲು ಕನ್ನಡ ಪರ ಸಂಘಟನೆಗಳು ಆಗ್ರಹ

 

e-ಸುದ್ದಿ, ಮಸ್ಕಿ

ಸರ್ಕಾರ ಮಸ್ಕಿ ಮತ್ತು ಬಸವಕಲ್ಯಾಣ ಉಪ ಚುನಾವಣೆಯ ಸಂದರ್ಭದಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡುವ ಮೂಲಕ ಕನ್ನಡ ಮತ್ತು ಮರಾಠಿ ಭಾಷಿಕರ ಮೇಲೆ ವೈಷ್ಯಮ ಮೂಡಿಸುವದಲ್ಲದೆ ಚುನಾವಣೆ ತಂತ್ರವಾಗಿ ಜನರಿಗೆ ಮೊಸ ಮಾಡುತ್ತಿದೆ ಎಂದು ಕನ್ನಡ ಪರ ಸಂಘಟನೆಯ ಒಕ್ಕೂಟದ ಮುಖಂಡ ಅಶೋಕ ಮುರಾರಿ ಆರೋಪಿಸಿದರು.
ಕರ್ನಾಟಕದ ಗಡಿ ಭಾಗದಲ್ಲಿ ಎಂಇಎಸ್, ಶಿವಸೇನೆ, ಎನ್.ಸಿ.ಪಿ ಇತ್ಯಾದಿ ಸಂಘಟನೆ ಮತ್ತು ರಾಜಕೀಯ ಪಕ್ಷಗಳು ಕನ್ನಡಿಗರು ಮತ್ತು ಮರಾಠಿಗರ ನಡುವೆ ವೈಷಮ್ಯ ಹುಟ್ಟಿಸುವ ಯತ್ನಗಳಿಗೆ ಮರಾಠ ಪ್ರಾಧಿಕಾರ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ತಹಸೀಲ್ ಕಚೇರಿಯ ಶೀರಸ್ತೆದಾರ ಸೈಯದ್ ಅಕ್ತರ ಅಲಿ ಅವರಿಗೆ ಸಂಘಟನೆಯ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಃ ಪಟ್ಟಣದಲ್ಲಿ ಶನಿವಾರ ಕನ್ನಡ ಪರ ಸಂಘಟನೆಗಳು ಮಸ್ಕಿ ಬಂದ್ ಆಚರಣೆ ಮಾಡಿದರು. ಬಂದ್ ಬಾಗಶಃ ಯಶಸ್ವಿಯಾಗಿದ್ದು ಕೆಲ ಕಡೆ ಅಂಗಡಿ ಮಗಂಟ್ಟುಗಳು ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲಿಸಿದ್ದರು. ಕೆಲ ಕಡೆ ಅರ್ಧ ಅಂಗಡಿ ತೆರೆದು ವ್ಯಾಪಾರದಲ್ಲಿ ತೊಡಗಿದ್ದು ಕಂಡು ಬಂದಿತು.
ಪ್ರತಿಭಟನಕಾರರು ಬೆಳಿಗ್ಗೆ ಗಾಂಧಿ ನಗರದಿಂದ ಬೈಕ್ ರ್ಯಾಲಿ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿಭಟಿಸಿದರು. ಅಶೋಕ ಮುರಾರಿ, ಬಸವರಾಜ ಉದ್ಬಾಳ, ಕಿರಣ ಮುರಾರಿ, ಯಮನೂರು ಒಡೆಯರ್, ಸಿದ್ದು ಮುರಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪಿಎಸ್‍ಐ ಸಣ್ಣ ವೀರೇಶ ಬಂದೋಬಸ್ತ ಏರ್ಪಡಿಸಿದ್ದರು.

 

Don`t copy text!